ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋ-02 ಮೇಳದಲ್ಲಿ ಮಿಂಚಿದ ಕ್ವಿಝ್‌ಬ್ರೆೃನ್‌.ಕಾಂನಗಿರಿ ಬಾಲಸುಬ್ರಹ್ಮಣ್ಯಂ

By Staff
|
Google Oneindia Kannada News

Can you identify this Quiz Master !ಬಯೋ- ಕ್ವಿಝ್‌ !
ಬಯೋಟೆಕ್ನಾಲಜಿ ಸಮ್ಮೇಳನದಲ್ಲಿ ಹಿಟ್‌ ಆದ ಕಾರ್ಯಕ್ರಮ. ನ ಮ್ಯಾನೇಜ್‌ಮೆಂಟ್‌ ರೆಪ್ರೆಸೆಂಟೇಟಿವ್‌ ಗಿರಿ ಬಾಲಸುಬ್ರಹ್ಮಣ್ಯಂ ನಡೆಸಿಕೊಟ್ಟ ಜೈವಿಕ ತಂತ್ರಜ್ಞಾನ ರಸಪ್ರಶ್ನೆ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ದಂಡೇ ಆಗಮಿಸಿತ್ತು.

ಐಟಿ ಕ್ವಿಝ್‌ ಕಾರ್ಯಕ್ರಮಗಳಿಂದ ಕರ್ನಾಟಕದ ಹಳ್ಳಿಗಳಿಗೂ ಮಾಹಿತಿತಂತ್ರಜ್ಞಾನವನ್ನು ಕೊಂಡೊಯ್ದ ಅಗ್ಗಳಿಕೆ ಇವತ್ತು ಗಿರಿ ಅವರಿಗೆ ಸಲ್ಲುತ್ತದೆ. ಕಳೆದೆರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಡೆದ ಮಾಹಿತಿ ತಂತ್ರಜ್ಞಾನ ಮೇಳದಲ್ಲಿಯೂ ಐಟಿ ಕ್ವಿಝ್‌ ನಡೆಸಿಕೊಡುವ ಮೂಲಕ ಗಿರಿ ಅವರು ಜನಸಮೂಹವನ್ನು ಮೇಳದತ್ತ ಆಕರ್ಷಿಸಿದ್ದರು. ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿ ಸಮೂಹದಲ್ಲಿ ಕ್ವಿಝ್‌ ಮಾಸ್ಟರ್‌ ಎಂದೇ ಪರಿಚಿತರಾಗಿರುವ ಗಿರಿ ಬಾಲಸುಬ್ರಹ್ಮಣ್ಯಂ ಐತಿಹಾಸಿಕ ಜೈವಿಕ ತಂತ್ರಜ್ಞಾನ ಸಮ್ಮೇಳನದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

ಬಯೋ-2002ನಲ್ಲಿ ಏನಿರುತ್ತದೆ...
ನಾಲ್ಕು ಸೆಮಿನಾರುಗಳು ಮತ್ತೆ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ಟಾಲ್‌ಗಳು ಎಂಬ ಮಾತು ಹುಸಿಯಾಗಿದೆ. ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಬಯೋ-2002ನತ್ತ ಮೂರು ದಿನಗಳ ಕಾಲವೂ ಹೆಜ್ಜೆ ಹಾಕುವಂತೆ ಮಾಡಿದೆ. ಬಯೋ ಕ್ವಿಝ್‌ , ವಿದ್ಯಾರ್ಥಿಗಳಿಗೆ ಮಾತ್ರವಲ್ಲ- ಇತರರಿಗೂ ಜೈವಿಕ ತಂತ್ರಜ್ಞಾನವನ್ನು ಇನ್ನಷ್ಟು ಅರಿತುಕೊಳ್ಳಲು, ಪ್ರಸ್ತುತ ಈ ಕ್ಷೇತ್ರದಲ್ಲಿರುವ ಸ್ಪರ್ಧಾತ್ಮಕ ವಲಯಗಳನ್ನು ತಿಳಿದುಕೊಳ್ಳಲು ಪೂರಕವಾಗಿದ್ದುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ.

ಪ್ರಥಮ ದಿನ 800 ಮಂದಿ ಕ್ವಿಝ್‌ನಲ್ಲಿ ಭಾಗವಹಿಸಿದ್ದರು. 125 ಮಂದಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡು, ಬಹುಮಾನ ಬಾಚಿಕೊಂಡರು. ವಿಜೇತರಿಗೆ ಎರಿಕ್‌ ಎಸ್‌ ಗ್ರೇಸ್‌ ಅವರ Biotechnology Unzipped: Promises and realities, ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.

ಬಿಟಿ ಕ್ವಿಝ್‌ ಐಟಿ ಕ್ವಿಝ್‌ನಷ್ಟು ಜೋರಾಗಿರಲಿಲ್ಲ ಎಂಬುದು ಬೇರೆ ಮಾತು. ಆದರೂ ಬಯೋ-2002ನಲ್ಲಿ ಜನರನ್ನು ಆಕರ್ಷಿಸಿದ ಕಾರ್ಯಕ್ರಮ ಎಂಬ ಪ್ರಶಂಸೆ ಗಿರಿ ಅವರಿಗೆ ಸಂದಿದೆ. ಇಂಡಿಯಾ ಇನ್ಫೋ.ಕಾಮ್‌ನ ಒಂದಂಗವಾಗಿರುವ ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X