ಐದು ಕೋಟಿ ರು.‘ನುಸಿ’ ಪಾಲು ಮಾಡಿ ಔಷಧಿ ಸಿಂಪರಣೆ ಕೈಬಿಟ್ಟ ಸರ್ಕಾರ
ಬೆಂಗಳೂರು: ಕಳೆದ ವರ್ಷ ನುಸಿಪೀಡೆ ನಿರೋಧಕ ಔಷಧಿ ಸಿಂಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ರಾಜ್ಯ ಸರಕಾರ, ಈ ಔಷಧಿಯಿಂದ ಯಾವುದೇ ಪ್ರಯೋಜನವಾಗದಿರುವುದರಿಂದ ಔಷಧಿ ಸಿಂಪಡನೆ ಕಾರ್ಯವನ್ನು ಕೈಬಿಡಲು ನಿರ್ಧರಿಸಿದೆ.
ರಾಜ್ಯದ ಸುಮಾರು ನಾಲ್ಕೂವರೆ ಕೋಟಿ ತೆಂಗಿನ ಮರಗಳಿಗೆ ನುಸಿರೋಗ ತಗುಲಿದೆ. ಈ ಪೈಕಿ ಸುಮಾರು ಒಂದು ಕೋಟಿ ತೆಂಗಿನ ಮರಗಳಿಗೆ ಮೋನೋಪ್ರೋಟೋ ಫಾಸ್ ಔಷಧಿ ಸಿಂಪಡಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನುಸಿಪೀಡೆ ನಿರೋಧಕ ಔಷಧಿ ಸಿಂಪಡಿಸಿದಾಗ್ಯೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಈ ಯೋಜನೆಗೆ ಸರಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಐದು ಕೋಟಿ ರೂಪಾಯಿ ಈಗಾಗಲೇ ವೆಚ್ಚವಾಗಿದೆ. ಆದ್ದರಿಂದ ಬೇರೆ ಸೂಕ್ತ ಕ್ರಮಗಳ ಬಗ್ಗೆ ಸರಕಾರ ಯೋಚಿಸಬೇಕು ಎಂದು ಕೃಷಿ ಸಚಿವ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಚರ್ಚೆ ನಡೆಸಿತು. ನುಸಿಪೀಡೆ ತೊಲಗಿಸಲು ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿಯುವ ಜವಾಬ್ದಾರಿಯನ್ನು ಜೈವಿಕ ತಂತ್ರಜ್ಞಾನ ಇಲಾಖೆಗೆ ವಹಿಸಬೇಕು ಎಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...