ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಘಟಕಕ್ಕೆ ಅಮೆರಿಕಾದ ಸಿಟಿಗ್ರೂಪ್ಸ್‌ನಿಂದ 20 ಮಿ.ಡಾಲರ್‌

By Staff
|
Google Oneindia Kannada News

ಸಿಲಿಕಾನ್‌ ವ್ಯಾಲಿಯ ಮುಕುಟ ಇನ್ಫೋಸಿಸ್‌ ಟೆಕ್ನಾಲಜೀಸ್‌ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಅಮೆರಿಕಾದ ನಂಬರ್‌ 1 ಹಣಕಾಸು ಸಂಸ್ಥೆಯಾದ ಸಿಟಿಗ್ರೂಪ್‌ ಐಎನ್‌ಸಿ.ಯ ಸಿಟಿಗ್ರೂಪ್‌ ಇನ್‌ವೆಸ್ಟ್‌ಮೆಂಟ್ಸ್‌ , 20 ಮಿಲಿಯನ್‌ ಡಾಲರ್‌ ಬಂಡವಾಳವನ್ನು ಇನ್ಫೋಸಿಸ್‌ನ ನೂತನ ಘಟಕ( Progeon)ಕ್ಕೆ ಒದಗಿಸಿದೆ.

ಇನ್ಫೋಸಿಸ್‌ನೊಂದಿಗೆ ನಾವು ಈಗಾಗಲೇ ವಾಣಿಜ್ಯ ಸಂಬಂಧ ಸಾಧಿಸಿದ್ದೇವೆ. ಪ್ರಸ್ತುತ ಇನ್ಫೋಸಿಸ್‌ನ ನೂತನ ಘಟಕಕ್ಕೆ ಹಣ ಒದಗಿಸುವ ಮೂಲಕ ಇಬ್ಬರ ನಡುವಣ ಸಂಬಂಧ ಇನ್ನಷ್ಟು ಬಲವಾಗುತ್ತಿರುವ ಕುರಿತು ತಮಗೆ ಅತೀವ ಸಂತೋಷವಾಗಿದೆ ಎಂದು ಸಿಟಿಗ್ರೂಪ್‌ನ ರಾಬರ್ಟ್‌ ಡ್ರಸ್ಕಿನ್‌ ಹೇಳಿಕೆಯಾಂದರಲ್ಲಿ ತಿಳಿಸಿದ್ದಾರೆ.

ಕಳೆದ ವಾರವಷ್ಟೇ 5 ಮಿಲಿಯನ್‌ ಡಾಲರ್‌ ಬಂಡವಾಳವನ್ನು ಮಾಹಿತಿ ತಂತ್ರಜ್ಞಾನ ಉದ್ದಿಮೆಯ ಘಟಕದಲ್ಲಿ ತೊಡಗಿಸುವುದಾಗಿ ಇನ್ಫೋಸಿಸ್‌ ಪ್ರಕಟಿಸಿತ್ತು . ಸ್ಲೋಡೌನ್‌ ಜಮಾನಾದಲ್ಲೂ ದಿನೇದಿನೇ ಏಳಿಗೆಯ ಮೈಲುಗಲ್ಲು ನೆಡುತ್ತಿರುವ ಇನ್ಫೋಸಿಸ್‌, ತನ್ನ ಹೊಸ ಉದ್ದಿಮೆಯಿಂದಾಗಿ ತಕ್ಷಣಕ್ಕೆ 250 ರಿಂದ 300 ಸಾಫ್ಟ್‌ವೇರ್‌ ತಜ್ಞರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಎಂದು ಇನ್ಫೋಸಿಸ್‌ನ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.
(ಏಜೆನ್ಸೀಸ್‌)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X