ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂಲೀಗ್‌ನಂತೆ ವರ್ತಿಸುತ್ತಿರುವ ಕಪಟ ನಾಟಕಧಾರಿ ಸೋನಿಯಾ ಕಾಂಗ್ರೆಸ್‌!

By Staff
|
Google Oneindia Kannada News

ನವದೆಹಲಿ : ಮುಸ್ಲಿಂರ ಬಗ್ಗೆ ಮೆದು ಧೋರಣೆ ಅನುಸರಿಸುವ ಕಾಂಗ್ರೆಸ್‌ ಪಕ್ಷದ ನಿಲುವಿನ ಕುರಿತು ಭಾರತೀಯ ಜನತಾ ಪಕ್ಷ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು , ಸೋನಿಯಾ ನೇತೃತ್ವದ ಕಾಂಗ್ರೆಸ್‌ ಪಕ್ಷ ಮುಸ್ಲಿಂ ಲೀಗ್‌ನಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದೆ.

ಗುಜರಾತ್‌ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾಗಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ತಲೆದಂಡಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರು ಪಕ್ಷದ ಸಂಸದರೊಂದಿಗೆ ಹಮ್ಮಿಕೊಂಡ ಉಪವಾಸ ಮುಷ್ಕರದ ಕುರಿತು ಬಿಜೆಪಿ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಸೋನಿಯಾ ಅವರ ಉಪವಾಸ ಒಂದು ರಾಜಕೀಯ ನಾಟಕ ಎಂದು ಬಣ್ಣಿಸಿರುವ ಬಿಜೆಪಿ ವಕ್ತಾರ ವಿ.ಕೆ.ಮಲ್ಹೋತ್ರ, ಗೋಧ್ರಾ ನರಮೇಧ ಅಥವಾ ಕಾಶ್ಮೀರದಲ್ಲಿನ ಸಾಮೂಹಿಕ ಹತ್ಯೆಗಳಿಗಾಗಿ ಸೋನಿಯಾ ಅವರೆಂದೂ ಉಪವಾಸ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಗುಜರಾತ್‌ನಲ್ಲಿ ಪುನರ್ವಸತಿ ಕಾರ್ಯಕ್ರಮಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಜಾರಿಗೊಳಿಸುತ್ತಿದ್ದರೆ, ಸೋನಿಯಾ ವಿನಾ ಕಾರಣ ಗುಜರಾತ್‌ ಪ್ರಕರಣವನ್ನು ಕೆದಕುತ್ತಿದ್ದಾರೆ. ಪ್ರತಿ ಸಲವೂ ಹಿಂದೂಗಳನ್ನು ಖಂಡಿಸುವ ಕಾಂಗ್ರೆಸ್‌, ಮುಸ್ಲಿಂ ಲೀಗ್‌ನಂತೆ ವರ್ತಿಸುತ್ತಿದೆ ಎಂದು ಮಲ್ಹೋತ್ರಾ ಆಪಾದಿಸಿದರು.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X