• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನರಲ್ಲಿನ ಭ್ರಮೆ ಓಡಿಸಿ, ಅವರನ್ನೇ ಬಿಟಿ ಬಂಡವಾಳದಾರರಾಗಿಸಿ : ರಾಹುಲ್‌

By Staff
|

ಬೆಂಗಳೂರು : ದೇಶದ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಬಂಡವಾಳದ ಕೊರತೆಯಿದೆ. ಇದನ್ನು ತುಂಬುವುದು ಹೇಗೆ? ನವದೆಹಲಿಯ ಕ್ವಾಡ್ರ ಅಡ್ವೆ ೖಸರಿ ಪ್ರೆೃವೇಟ್‌ ಲಿಮಿಟೆಡ್‌ನ ಪರಿಣತ ರಾಹುಲ್‌ ಸೇನ್‌ ಈ ಕುರಿತು ಒಂದು ಮೂಲಭೂತ ಸಲಹೆ ಇತ್ತಿದ್ದಾರೆ. ಅದೇನೆಂದರೆ- ಜನರನ್ನೇ ಬಂಡವಾಳದಾರರನ್ನಾಗಿಸಿಕೊಳ್ಳುವುದು!

ಜೈವಿಕ ತಂತ್ರಜ್ಞಾನ ಅಥವಾ ಬಿಟಿಯ ಗಂಧ- ಗಾಳಿಯೇ ಗೊತ್ತಿಲ್ಲದ ಜನರನ್ನು ಹಣ ಹೂಡಿ ಅಂತ ಏಕಾಏಕಿ ಕೇಳಲಾದೀತೆ? ಖಂಡಿತ ಇಲ್ಲ. ಮೊದಲು ಜೈವಿಕ ತಂತ್ರಜ್ಞಾನದ ವಿಸ್ಮಯಗಳನ್ನು ಜನಜೀವನದ ಅವಿಭಾಜ್ಯ ಅಂಗವಾಗಿಸಬೇಕು. ಅವರ ದಿನನಿತ್ಯದ ‘ಬೇಕು’ಗಳಿಗೆ ಜೈವಿಕ ತಂತ್ರಜ್ಞಾನದ ಸ್ಪಂದನೆಯ ಸ್ವರೂಪವನ್ನು ಮನವರಿಕೆ ಮಾಡಿಸಬೇಕು. ಉದಾಹರಣೆಗೆ- ಬೆಂಗಳೂರಿನಲ್ಲಿ ಸೊಳ್ಳೆಗಳು ಜಾಸ್ತಿ. ಅವನ್ನು ಮಲೇರಿಯಾ ವಾಹಕಗಳಾಗಲು ಬಿಡದೆ, ತಳಿ ಅಭಿವೃದ್ಧಿಪಡಿಸಿ ವಿಟಮಿನ್‌ ಬಿ 12 ಚುಚ್ಚುಮದ್ದನ್ನು ನೀಡಲು ಯಾಕೆ ಬಳಸಬಾರದು? ಎಂಬುದು ರಾಹುಲ್‌ ಸವಾಲು.

ನಗರದಲ್ಲಿ ನಡೆಯುತ್ತಿರುವ ಬಯೋಕಾನ್‌- 2002 ಮೇಳದಲ್ಲಿ ಕೇಳಿಬಂದಿರುವ ಮಾತಿದು. ಜನರಲ್ಲಿ ಜೈವಿಕ ತಂತ್ರಜ್ಞಾನದ ಬಗ್ಗೆ ಭ್ರಮೆ, ತಪ್ಪು ಅಭಿಪ್ರಾಯವಿದೆ. ದೈನಂದಿನ ಜೀವನದಲ್ಲಿ ಜೈವಿಕ ತಂತ್ರಜ್ಞಾನ ಎಂತಹ ಸಕಾರಾತ್ಮಕ ಪರಿಣಾಮ ಬೀರಬಲ್ಲುದು ಎಂಬುದನ್ನು ತಿಳಿಹೇಳಬೇಕು. ಆಗ ಜನ ಗ್ರಾಹಕರಷ್ಟೇ ಅಲ್ಲ, ಬಂಡವಾಳದಾರರೂ ಆಗಲು ಮುಂದೆ ಬರುವುದು ಖಂಡಿತ ಎಂಬುದು ರಾಹುಲ್‌ ಸೇನ್‌ ವಾದ.

ಈವರೆಗೆ ಯಾವುದೇ ಜೈವಿಕ ತಂತ್ರಜ್ಞಾನ ಕಂಪನಿ ಬಂಡವಾಳಕ್ಕಾಗಿ ಸಾರ್ವಜನಿಕರಲ್ಲಿ ಕೈ ಚಾಚಿಲ್ಲ. ಆದರೆ ರಾಹುಲ್‌ ಸೇನ್‌ ಅವರ ಸಲಹೆ ಕ್ಷೇತ್ರದ ಭವಿತವ್ಯದ ಹಿತದೃಷ್ಟಿಯಲ್ಲಿ ಒಳ್ಳೆಯದಾಗಿದೆ ಎಂಬುದು ಇತರೆ ಬಿಟಿ ಪರಿಣತರ ಅಂಬೋಣ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more