ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಬ್ಯಾಂಕಿಂಗ್‌ ಸೇವೆ ಸ್ಥಗಿತ, ಬ್ಯಾಂಕ್‌ ನೌಕರರಿಂದ ರ್ಯಾಲಿ-ಧರಣಿ

By Staff
|
Google Oneindia Kannada News

ಬೆಂಗಳೂರು : ಕೇಂದ್ರ ಸರ್ಕಾರದ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ಕರೆ ನೀಡಿದ್ದ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕುಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬ್ಯಾಂಕಿಂಗ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.

ಕೇಂದ್ರ ಸರ್ಕಾರದ ವಾಣಿಜ್ಯ ಒಕ್ಕೂಟ ಕಾನೂನಿಗೆ ತಿದ್ದುಪಡಿ, ಹಣಕಾಸು ವಲಯದ ಪುನರ್ರಚನೆ ಹಾಗೂ ಖಾಸಗೀಕರಣ ನೀತಿಯನ್ನು ವಿರೋಧಿಸಿ ಬ್ಯಾಂಕ್‌ಗಳ ಒಂದು ದಿನದ ಸಾಂಕೇತಿಕ ಬಂದ್‌ಗೆ ಸೋಮವಾರ ಕರೆ ನೀಡಲಾಗಿದ್ದು , ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ ಹಾಗೂ ಶಾಂತಿಯುತವಾಗಿದೆ ಎಂದು ಬ್ಯಾಂಕ್‌ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಐ)ಯ ರಾಷ್ಟ್ರೀಯ ಸಂಯೋಜಕ ಶಾಂತರಾಜು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುಎಫ್‌ಬಿಐಗೆ ಬಂದಿರುವ ವರದಿಗಳ ಪ್ರಕಾರ, ಬ್ಯಾಂಕ್‌ ಉದ್ಯೋಗಿಗಳು ಹಾಗೂ ಅಧಿಕಾರಿಗಳು ರಾಜ್ಯಾದ್ಯಂತ ರ್ಯಾಲಿ ಹಾಗೂ ಪ್ರತಿಭಟನಾ ಧರಣಿಗಳಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರ್‌ ಕಟ್ಟಡದ ಎದುರು ಬ್ಯಾಂಕ್‌ ಉದ್ಯೋಗಿಗಳು ಸಭೆ ನಡೆಸಿದರು. ಖಾಸಗೀಕರಣದ ದುಷ್ಪರಿಣಾಮಗಳು ಹಾಗೂ ಬಂಡವಾಳ ಹಿಂತೆಗೆತದ ಅಡ್ಡ ಪರಿಣಾಮಗಳ ಕುರಿತು ಸಭೆ ಆತಂಕ ವ್ಯಕ್ತಪಡಿಸಿತು. ಉದ್ದೇಶಿತ ತಿದ್ದುಪಡಿಗಳನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಭೆ ಕೈಗೊಂಡಿತು.

ಸರ್ಕಾರದ ವಿರುದ್ಧದ ಮುಂದಿನ ಹಂತದ ಪ್ರತಿಭಟನೆಯ ಕುರಿತು ನಿರ್ಣಯಿಸಲು ಯುಎಫ್‌ಬಿಐ ಸದ್ಯದಲ್ಲಿಯೇ ಸಭೆ ಸೇರಲಿದೆ ಎಂದು ಶಾಂತರಾಜು ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X