ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಪದಕ ಗಿಟ್ಟಿಸಿಕೊಂಡ ಮಹಿಳಾ ವಿಜ್ಞಾನಿಗಳೆಲ್ಲಾ ಎಲ್ಲಿ ಹೋದರು ?

By Staff
|
Google Oneindia Kannada News

Woman Scientistಭಾರತದ ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕ ಗಿಟ್ಟಿಸಿಕೊಳ್ಳುವವರಲ್ಲಿ ಶೇ 80ರಷ್ಟು ಮಂದಿ ಮಹಿಳೆಯರು. ಆದರೆ ಚಿನ್ನದ ಪದಕ ಹಿಡಿದುಕೊಂಡು ಅವರೆಲ್ಲ ಎಲ್ಲಿ ಹೋಗುತ್ತಾರೆ ?

ದೇಶದಲ್ಲಿರುವ 39 ಸಿಎಸ್‌ಐಆರ್‌ ಪ್ರಯೋಗ ಶಾಲೆಗಳಲ್ಲಿ ಮಹಿಳೆಯರ ನೇತೃತ್ವ ಇಲ್ಲ. ದೇಶದ 150 ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಲಿಸ್ಟ್‌ನಲ್ಲಿ ಅಥವಾ ನಿರ್ದೇಶಕರ ಸಾಲಿನಲ್ಲಿ ಮಹಿಳಾ ಮಣಿಗಳ ಹೆಸರಿಲ್ಲ. ವಿಜ್ಞಾನವನ್ನು ಓದುವ ಪ್ರತಿಭಾವಂತ ಯುವತಿಯರಿಗೆ ಏನಾಗುತ್ತಿದೆ... ಅವರೆಲ್ಲಿ ಹೋಗುತ್ತಿದ್ದಾರೆ...? ಇದು ಜೈವಿಕ ತಂತ್ರಜ್ಞ ವಿಷನ್‌ ಗ್ರೂಪ್‌ನ ಅಧ್ಯಕ್ಷೆ ಕಿರಣ್‌ ಮುಜುಂದಾರ್‌ ಅವರ ಪ್ರಶ್ನೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ‘ಮಹಿಳಾ ವಿಜ್ಞಾನಿಗಳ ಪಾತ್ರ ಮತ್ತು ತಂತ್ರಜ್ಞಾನ’ ಎಂಬ ವಿಷಯವಾಗಿ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬ್‌ ಸೋಮವಾರ ಏರ್ಪಡಿಸಿದ್ದ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ಮಹಿಳಾ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರಕ್ಕೇ ಒಂದು ಹೊಸ ಆಯಾಮವನ್ನು ನೀಡಬಲ್ಲರು. ಇದುವರೆಗೆ ಬೆಳಕಿಗೆ ಬಾರದ ಹೊಸ ದೃಷ್ಟಿಕೋನಗಳನ್ನು ಮಂಡಿಸಬಲ್ಲರು. ಯಾಕೆಂದರೆ ಪುರುಷನ ಯೋಚನಾ ಗತಿಗಿಂತ ಮಹಿಳೆ ತೀರಾ ಭಿನ್ನವಾಗಿ ಮತ್ತು ಹೆಚ್ಚು ಮಾನವೀಯವಾಗಿ ಯೋಚಿಸಬಲ್ಲಳು. ಹೊಸ ದೃಷ್ಟಿಕೋನಗಳು ವಿಜ್ಞಾನದ ಅಡಿಗಲ್ಲಾದ್ದರಿಂದ ವಿದ್ಯಾವಂತರಾಗಿರುವ ಮಹಿಳೆಯರು ವಿಜ್ಞಾನ ಕ್ಷೇತ್ರದಿಂದ ದೂರ ಸರಿಯುವುದು ಸರಿಯಲ್ಲ ಎಂದು ಕಿರಣ್‌ ಅಭಿಪ್ರಾಯಪಟ್ಟರು.

ವಿಜ್ಞಾನದಲ್ಲಿ ಮಹಿಳೆಯರದು ವಿಭಿನ್ನ ದೃಷ್ಟಿಕೋನವಿದೆ !
ಆದರೆ ದೇಶದಲ್ಲಿ ವಿಜ್ಞಾನದಲ್ಲಿ ಪಿಎಚ್‌.ಡಿ ಗಿಟ್ಟಿಸಿಕೊಂಡ ನಂತರ ಮಹಿಳೆ ಎಲ್ಲಿ ಕಳೆದುಹೋಗುತ್ತಾಳೋ ಗೊತ್ತಾಗುತ್ತಿಲ್ಲ. ಹಿರಿಯ ಮಹಿಳಾ ವಿಜ್ಞಾನಿಗಳು ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು. ಕಿರಿಯ ಹಾಗೂ ಉತ್ಸಾಹಿ ಮಹಿಳಾ ವಿಜ್ಞಾನಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ಅವರ ಪ್ರತಿಭೆಯನ್ನು ಬಳಸಿಕೊಳ್ಳಬೇಕು. ರಾಷ್ಟ್ರೀಯ ನೀತಿ ರೂಪಿಸುವಾಗ ಮಹಿಳೆಯರೂ ಕೂಡ ಅಭಿಪ್ರಾಯ ಮಂಡಿಸಬೇಕು ಎಂದು ಕಿರಣ್‌ ಸಲಹೆ ಮಾಡಿದರು.

21ನೇ ಶತಮಾನದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಈ ಬಾರಿ ಅರ್ಥ ಸಚಿವರು 100 ಮಂದಿ ಮಹಿಳಾ ವಿಜ್ಞಾನಿಗಳ ಹೆಚ್ಚಿನ ಅಧ್ಯಯನಕ್ಕೆ ಫೆಲ್ಲೋಶಿಪ್‌ ನೀಡುವುದಾಗಿ ಹೇಳಿದ್ದಾರೆ. ಇದನ್ನು ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕು.

ಜಗತ್ತಿನಲ್ಲಿ 15 ಮಂದಿ ಮಹಿಳೆಯರು ನೊಬೆಲ್‌ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಪ್ರತಿಭೆಗೆ ಲಿಂಗಬೇಧವಿಲ್ಲ. ಕಂಪ್ಯೂಟರ್‌ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಮಹಿಳಾ ವಿಜ್ಞಾನಿಗಳು ಮುಂದುವರೆಯಬೇಕು ಎಂದು ಕಿರಣ್‌ ಕರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಎಎಲ್‌ನ ನಿರ್ದೇಶಕ ಡಾ. ಟಿ.ಎಸ್‌. ಪ್ರಹ್ಲಾದ್‌ ರಾವ್‌, ಎನ್‌ಎಎಲ್‌ನಲ್ಲಿ 100 ಕ್ಕೂ ಹೆಚ್ಚು ಮಂದಿ ಮಹಿಳಾ ವಿಜ್ಞಾನಿಗಳಿದ್ದಾರೆ. ಮಹಿಳಾ ವಿಜ್ಞಾನಿಗಳ ಬಗ್ಗೆ ನಮ್ಮ ಸಂಸ್ಥೆಗೆ ಹೆಮ್ಮೆಯಿದೆ ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X