ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೀಸಲ್‌ಗೆ ಹೇಳಿ ವಿದಾಯ, ‘ಹೊಂಗೆ’ಎಣ್ಣೆಯೇ ಇಂಧನ ತರುವಾಯ!

By Staff
|
Google Oneindia Kannada News

pongamia pinnata (Honge) oil can be substitute for Diesel !ಬೆಂಗಳೂರು : ಕಾಡು ಮರಗಳಿಂದ ಇಂಧನ ತೈಲವನ್ನು ಸಂಶೋಧಿಸುವ ಮೂಲಕ ಸಾಂಪ್ರದಾಯಿಕ ಇಂಧನವಾದ ಡೀಸಲ್‌ ಬಳಕೆಯನ್ನು ಕೈ ಬಿಡಬಹುದೆಂದು ‘ಸೂತ್ರ’ ಯೋಜನೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರೊ.ಉಡುಪಿ ಶ್ರೀನಿವಾಸ ಅಭಿಪ್ರಾಯಪಟ್ಟಿದ್ದಾರೆ.

‘ಭವಿಷ್ಯ ಭಾರತದಲ್ಲಿ ಜೈವಿಕ ತಂತ್ರಜ್ಞಾನ ಇಂಧನಗಳು’ ಎನ್ನುವ ವಿಷಯದ ಕುರಿತು ಮಂಗಳವಾರ ಜೈವಿಕ ತಂತ್ರಜ್ಞಾನ ಮೇಳ-2002 ರಲ್ಲಿ ಮಾತನಾಡುತ್ತಿದ್ದ ಉಡುಪಿ ಶ್ರೀನಿವಾಸ, ಕಾಡುಮರಗಳಿಂದ ಇಂಧನ ತೈಲ ತಯಾರಿಸುವ ಯೋಜನೆಯನ್ನು ಪ್ರತಿಪಾದಿಸಿದರು.

ಕಾಡು ಮರಗಳಿಂದ ಇಂಧನ ತೈಲ ಪರಿಷ್ಕರಿಸುವ ಮೂಲಕ ಭಾರತ 6 ಬಿಲಿಯನ್‌ ಡಾಲರ್‌ ರಫ್ತನ್ನು ಸಾಧಿಸಬಹುದಾಗಿದೆ. ತಂಪು ನೆರಳಿಗೆ ಪ್ರಸಿದ್ಧವಾದ ‘ಹೊಂಗೆ’ಯಂಥ ಮರಗಳಿಂದ ಇಂಧನ ತೈಲವನ್ನು ತಯಾರಿಸಲು ಸಾಧ್ಯವಿದೆ. 30 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ ಹೊಂಗೆ ಮರಗಳನ್ನು ಬೆಳೆಸಿ, ಅವುಗಳಿಂದ ತೈಲ ಪರಿಷ್ಕರಿಸುವ ಮೂಲಕ ಭಾರತ ಇಂಧನ ಸ್ವಾವಲಂಬನೆ ಸಾಧಿಸಬಹುದು ಎಂದು ಅವರು ಹೇಳಿದರು.

ಹೊಂಗೆ ಮರಗಳಿಂದ ಹೆಕ್ಟೇರ್‌ಗೆ 15 ಟನ್‌ ಬೀಜ ಸಂಗ್ರಹಿಸಬಹುದಾಗಿದ್ದು , ಪ್ರತಿ ಹೆಕ್ಟೇರ್‌ನಲ್ಲಿ ಸುಮಾರು 100 ಹೊಂಗೆ ಮರಗಳನ್ನು ಬೆಳೆಸಬಹುದಾಗಿದೆ. ಆದರೆ, ಪ್ರಸ್ತುತ ಹೊಂಗೆ ಮರಗಳನ್ನು ಉರುವಲಾಗಿ ಬಳಸಲು ಕತ್ತರಿಸುವ ಮೂಲಕ ವ್ಯರ್ಥಗೊಳಿಸಲಾಗುತ್ತಿದೆ ಎಂದು ವಿಷಾದಿಸಿದ ಶ್ರೀನಿವಾಸ್‌, ಹೊಂಗೆ ಮರಗಳಲ್ಲಿನ ಸ್ವಾಭಾವಿಕ ಜೈವಿಕ ಇಂಧನವನ್ನು ಡೀಸೆಲ್‌ಗೆ ಪರ್ಯಾಯವಾಗಿ ಬಳಸಿಕೊಳ್ಳಲು ಕರೆ ನೀಡಿದರು.

ಕೃಷ್ಯುತ್ಪನ್ನಗಳಿಂದ ಡೀಸೆಲ್‌ಗೆ ಪರ್ಯಾಯ ಇಂಧನಗಳನ್ನು ಪರಿಷ್ಕರಿಸುವಲ್ಲಿ ಯುರೋಪ್‌ ಹಾಗೂ ಉತ್ತರ ಅಮೆರಿಕ ತಜ್ಞರು ತೊಡಗಿದ್ದಾರೆ. ಭಾರತದಲ್ಲೂ ಇಂಥ ಪ್ರಯತ್ನಗಳನ್ನು ಬೆಂಬಲಿಸಬೇಕಿದ್ದು , ಹೊಂಗೆ ಮರಗಳನ್ನು ತಮ್ಮ ಜಮೀನಿನಲ್ಲಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು. ವಾರ್ಷಿಕ 1 ಸಾವಿರ ಕೋಟಿ ರು. ಅನುದಾನವನ್ನು 2 ದಶಕಗಳ ಕಾಲ ಹೊಂಗೆ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಉಡುಪಿ ಶ್ರೀನಿವಾಸ್‌ ಹೇಳಿದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X