ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ 14 ವರ್ಷದೊಳಗಿನ 12.06 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದಲ್ಲಿ 3ರಿಂದ 6 ವರ್ಷ ವಯೋಮಾನದ 5.4 ಲಕ್ಷ ಹಾಗೂ 6ರಿಂದ 14 ವಯೋಮಾನದ 6.66 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ !

ಕರ್ನಾಟಕ ಸಾರ್ವಜನಿಕ ಬೋಧನಾ ಇಲಾಖೆ ನಡೆಸಿರುವ ಮಕ್ಕಳ ಜನಗಣತಿ 2002ರಿಂದ ಈ ವಿಷಯ ತಿಳಿದುಬಂದಿದೆ. ಮಕ್ಕಳ ಜನಗಣತಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಸುದ್ದಿಗಾರರೊಡನೆ ಮಾತಾಡುತ್ತಿದ್ದರು. ರಾಜ್ಯದಲ್ಲಿ 3ರಿಂದ 5 ವಯೋಮಾನದ 25.95 ಲಕ್ಷ ಮಕ್ಕಳಿದ್ದಾರೆ. ಈ ಪೈಕಿ 5.4 ಲಕ್ಷ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಸಿಗುತ್ತಿಲ್ಲ. 90 ಲಕ್ಷಕ್ಕೂ ಹೆಚ್ಚು 6ರಿಂದ 14 ವಯೋಮಾನದ ಮಕ್ಕಳಿದ್ದಾರೆ. ಇವರಲ್ಲಿ 6.66 ಲಕ್ಷ ಮಕ್ಕಳು ಶಿಕ್ಷಣ ವಂಚಿತರು. ಕಳೆದ ವರ್ಷಕ್ಕೆ ಹೋಲಿಸಿದರೆ ಶಾಲೆಗೆ ಹೋಗದಿರುವ ಮಕ್ಕಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು.

ಚಿಣ್ಣರ ಅಂಗಳ ಕಾರ್ಯಕ್ರಮದಡಿ ಸಮುದಾಯದತ್ತ ಶಾಲೆ ಯೋಜನೆಯಿಂದಾಗಿ ಶಾಲೆಗೆ ಹೋಗದ 6ರಿಂದ 14 ವರ್ಷದ ಮಕ್ಕಳ ಸಂಖ್ಯೆ 10.53 ಲಕ್ಷದಿಂದ 6.66 ಲಕ್ಷಕ್ಕೆ ಇಳಿದಿದೆ. ಯಾದಗಿರ್‌, ಕೊಪ್ಪಳ, ರಾಯಚೂರು, ಬಳ್ಳಾರಿ, ಗುಲ್ಬರ್ಗಾ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಶಾಲೆಗೆ ಹೋಗದಿರುವ ಮಕ್ಕಳ ಸಂಖ್ಯೆ 3.19 ಲಕ್ಷ. 2002- 03ರಲ್ಲಿ ಹೆಚ್ಚು ಮಕ್ಕಳನ್ನು ಶಾಲೆಗೆ ಹೋಗುವಂತೆ ಮಾಡಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಚಾರಿ ಶಾಲೆಗಳನ್ನು ಪ್ರಾರಂಭಿಸುವುದು ಈ ಪೈಕಿ ಪ್ರಮುಖವಾದುದು ಎಂದು ವಿಶ್ವನಾಥ್‌ ಹೇಳಿದರು.

ಭಾಷಾ ನೀತಿ ಬಗ್ಗೆ ಸೂಕ್ತ ನಿಲುವು ತಳೆಯುವ ಸಲುವಾಗಿ ಲೇಖಕರು, ರಾಜಕೀಯ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘ- ಸಂಸ್ಥೆಗಳ ಜೊತೆ ಮೇ 8ರಂದು ಚರ್ಚಿಸಲಿದ್ದೇನೆ ಎಂದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X