ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 2002-03 ರ ಯೋಜನಾ ಗಾತ್ರ8610.61 ಕೋಟಿ ರು.ಗೆ ನಿಗದಿ

By Staff
|
Google Oneindia Kannada News

ನವದೆಹಲಿ : 2002- 03 ನೇ ಇಸವಿಯ ಕರ್ನಾಟಕದ ವಾರ್ಷಿಕ ಯೋಜನಾ ಗಾತ್ರವನ್ನು 8610.61 ಕೋಟಿ ರುಪಾಯಿಗಳಿಗೆ ಕೇಂದ್ರ ಯೋಜನಾ ಆಯೋಗ ಗೊತ್ತು ಪಡಿಸಿದೆ.

ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ.ಪಂತ್‌ ಹಾಗೂ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ನಡುವೆ ಗುರುವಾರ ನಡೆದ ಸಭೆಯಲ್ಲಿ ರಾಜ್ಯದ ಯೋಜನಾ ಗಾತ್ರವನ್ನು 8610.61 ಕೋಟಿ ರುಪಾಯಿಗಳಿಗೆ ಅಂತಿಮಗೊಳಿಸಲಾಯಿತು. ಕೃಷಿ ಹಾಗೂ ವಿದ್ಯುತ್‌ ವಲಯಗಳಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲದಿರುವುದನ್ನು ಪಂತ್‌ ಅವರು ಕೃಷ್ಣ ಅವರ ಗಮನಕ್ಕೆ ತಂದಿದ್ದಾರೆ. ಕೃಷಿ ಉತ್ಪನ್ನದ ಪ್ರಮಾಣದ ಏರಿಕೆ ಅತೃಪ್ತಿಕರವಾಗಿದ್ದು , ಕೃಷಿ ವಿಧಾನವನ್ನು ಸುಧಾರಿಸುವ ಕುರಿತು ಸಲಹೆ ನೀಡಿರುವ ಪಂತ್‌, ವಿದ್ಯುತ್‌ ವಲಯಕ್ಕೆ 2389.48 ಕೋಟಿ ರುಪಾಯಿ ಸಬ್ಸಿಡಿ ನೀಡುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತರ್ಜಲ ಕುಸಿತದ ಬಗೆಗೂ ತೀವ್ರ ಅತಂಕ ವ್ಯಕ್ತಪಡಿಸಿರುವ ಪಂತ್‌, ಮುಂದಿನ ದಿನಗಳಲ್ಲಿ ಅಂತರ್ಜಲ ಸಂರಕ್ಷಣೆ ಹಾಗೂ ಬಳಕೆಯ ಕುರಿತು ನೀತಿಯಾಂದನ್ನು ರೂಪಿಸಿ ಸದನದ ಮುಂದೆ ಮಂಡಿಸುವಂತೆ ಕೃಷ್ಣ ಅವರಿಗೆ ಸಲಹೆ ನೀಡಿದ್ದಾರೆ. ಕೊಳಚೆ ನೀರಿನ ಬಳಕೆಯ ಕುರಿತೂ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಪಿಂಚಣಿ ಬಾಕಿಯನ್ನು ಪಿಂಚಣಿ ನಿಧಿಯಾಳಗೆ ಅಡಕಗೊಳಿಸಬೇಕು. ಯೋಜನಾ ಸಂಪನ್ಮೂಲಗಳನ್ನು ಗುರ್ತಿಸಿಕೊಳ್ಳುವ ಮೂಲಕ ಅನುದಾನ ಹಾಗೂ ಸಾಲದ ಪ್ರಮಾಣವನ್ನು ಸರ್ಕಾರ ಕುಗ್ಗಿಸಿಕೊಳ್ಳಬೇಕು ಎಂದಿರುವ ಪಂತ್‌, ಮಧ್ಯಮಾವಧಿ ಆರ್ಥಿಕ ನೀತಿಯನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X