ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನ ಎಮ್ಮೆಕೆರೆ ಮೈದಾನದಲ್ಲಿ ಅಂತರರಾಷ್ಟ್ರೀಯ ಈಜುಕೊಳ

By Staff
|
Google Oneindia Kannada News

ಮಂಗಳೂರು: ನಗರದಲ್ಲಿ 1.2 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಈಜುಕೊಳ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಇಲ್ಲಿನ ಎಮ್ಮೆಕೆರೆ ಮೈದಾನದ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತೇಜೋಮಯ ಅವರು ಬುಧವಾರದಂದು ಎಮ್ಮೆಕೆರೆಯಲ್ಲಿ ಸ್ಥಳಪರಿಶೀಲನೆ ನಡೆಸಿ ಎಮ್ಮೆಕೆರೆ ಮೈದಾನ, ಈಜುಕೊಳ ಸ್ಥಾಪನೆಗೆ ಪ್ರಶಸ್ತವಾಗಿದೆ ಎಂದು ಶಿಫಾರಸು ಮಾಡಿದರು.

60 ಲಕ್ಷ ರೂಪಾಯಿ ಕೇಂದ್ರ ಸರಕಾರದ ಅನುದಾನದೊಂದಿಗೆ ನಿರ್ಮಿಸಲಾಗುವ ಈ ಈಜುಕೊಳವನ್ನು 3.27 ಎಕರೆ ವಿಸ್ತಾರದ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಜೊತೆಗೆ ಮಕ್ಕಳ ತರಬೇತಿಗಾಗಿ ಕಿರು ಈಜುಕೊಳ, ಒಂದು ಕ್ರೀಡಾ ಸಂಕೀರ್ಣವನ್ನೂ ಎಮ್ಮೆಕೆರೆಯಲ್ಲಿ ನಿರ್ಮಿಸಲಾಗುವುದು ಎಂದು ಸ್ಥಳ ವೀಕ್ಷಣೆ ಮಾಡಿದ ನಂತರ ವೀರಪ್ಪ ಮೊಯ್ಲಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X