ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2001-02ರಲ್ಲಿ ಇನ್ಫೋಸಿಸ್‌ಗೆ 807.96 ಕೋಟಿ ರು. ನಿವ್ವಳ ಲಾಭ

By Staff
|
Google Oneindia Kannada News

ನವದೆಹಲಿ : 2001- 02ನೇ ವಿತ್ತ ವರ್ಷದ ಅಂತಿಮ ತ್ರೆೃಮಾಸಿಕದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್‌ 270.74 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಇನ್ಫೋಸಿಸ್‌ ವಿತ್ತ ವರದಿಯ ನಿರೀಕ್ಷೆ ಬಹುವಾಗಿತ್ತು. ಹೊರಬಿದ್ದಿರುವ ವರದಿ ನಿರೀಕ್ಷೆಗಳನ್ನೂ ಮೀರಿದ್ದಾಗಿದೆ. ಅಂತಿಮ ತ್ರೆೃಮಾಸಿಕ ಅವಧಿಯಲ್ಲಿ 680.13 ಕೋಟಿ ರುಪಾಯಿಗಳ ವಹಿವಾಟನ್ನು ಇನ್ಫೋಸಿಸ್‌ ನಡೆಸಿದೆ. ಇದಕ್ಕೂ ಹಿಂದಿನ ವಿತ್ತ ವರ್ಷದ ಅಂತಿಮ ತ್ರೆೃಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಪ್ರತಿಶತ 16.04ರಷ್ಟು ಹೆಚ್ಚಳವಾಗಿದೆ. ಅವಧಿಯಲ್ಲಿ ಕಂಪನಿ 233.32 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.

2002, ಮಾರ್ಚ್‌ 31ಕ್ಕೆ ಮುಗಿದಿರುವ ವಿತ್ತ ವರ್ಷದಲ್ಲಿ ಇನ್ಫೋಸಿಸ್‌ ಒಟ್ಟು 807.96 ಕೋಟಿ ರುಪಾಯಿ ಲಾಭ ಮಾಡಿದೆ. ನಿವ್ವಳ ಆದಾಯ-2603.59 ಕೋಟಿ ರುಪಾಯಿ. 2001ಕ್ಕೆ ಮುಗಿದಿದ್ದ ವಿತ್ತ ವರ್ಷದಲ್ಲಿ 628.81 ಕೋಟಿ ರುಪಾಯಿ ಲಾಭ ದಕ್ಕಿತ್ತು. ಆಗಿನ ಆದಾಯ- 1900.56 ಕೋಟಿ ರುಪಾಯಿ.

(ಇನ್ಫೋಸಿಸ್‌)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X