ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಯಲ್‌ 1090 : ಬೆಂಗಳೂರಿನಲ್ಲಿ ‘ಹಿರಿಯರಿಗೆ ಪೊಲೀಸ್‌ ಸಹಾಯ ವಾಣಿ’

By Staff
|
Google Oneindia Kannada News

ಬೆಂಗಳೂರು : ಹಿರಿಯ ನಾಗರಿಕರ ಕಷ್ಟ ಕೋಟಲೆಗಳಿಗೆ ಸ್ಪಂದಿಸುವ ಉದ್ದೇಶದ ನಗರ ಪೊಲೀಸರ ಮಹತ್ವಾಕಾಂಕ್ಷೆಯ ‘ಹಿರಿಯರಿಗೆ ಸಹಾಯವಾಣಿ’ ಯೋಜನೆ ಬುಧವಾರದಿಂದ ಜಾರಿಗೆ ಬಂದಿದೆ.

ನಗರ ಪೊಲೀಸರು ಹಾಗೂ ನೈಟಿಂಗೇಲ್‌ ಮೆಡಿಕಲ್‌ ಟ್ರಸ್ಟ್‌ ಜಂಟಿಯಾಗಿ ಹಮ್ಮಿಕೊಂಡಿರುವ ‘ಹಿರಿಯರಿಗೆ ಸಹಾಯವಾಣಿ’ ಯನ್ನು ಬುಧವಾರ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ವಿಧ್ಯುಕ್ತವಾಗಿ ಪ್ರಾರಂಭಿಸಲಾಯಿತು. ‘ಹಿರಿಯರಿಗೆ ಸಹಾಯವಾಣಿ’ ಯನ್ನು ಉದ್ಘಾಟಿಸಿದ ರಾಜ್ಯ ಗೃಹ ಹಾಗೂ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧೀಪ್‌ ಚೌಧರಿ, ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡುವಂತೆ ಪೊಲೀಸರಿಗೆ ಕಿವಿ ಮಾತು ಹೇಳಿದರು.

ಈ ಯೋಜನೆಯನ್ವಯ ವೃದ್ಧರು 1090 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದರೆ, ಪೊಲೀಸರು ವೃದ್ಧರ ನೆರವಿಗೆ ಸ್ಥಳಕ್ಕೆ ಧಾವಿಸುತ್ತಾರೆ. ಪೊಲೀಸರು ದಿನವಿಡೀ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಜ್ಜಾಗಿರುತ್ತಾರೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಮಹಾನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ತಿಳಿಸಿದರು.

ಜಂಟಿ ಪೊಲೀಸ್‌ ಆಯುಕ್ತ ರಾದ ಜ್ಯೋತಿಪ್ರಕಾಶ್‌ ಮಿರ್ಜಿ, ಜೀವನ್‌ ಗಾವ್‌ಕರ್‌, ಡಿಸಿಪಿಗಳಾದ ಟಿ.ಸುನೀಲ್‌ಕುಮಾರ್‌, ಕೆ.ಎಲ್‌.ಸುಧೀರ್‌ ಸಮಾರಂಭದಲ್ಲಿ ಹಾಜರಿದ್ದರು. ನೈಟಿಂಗೇಲ್‌ ಟ್ರಸ್ಟ್‌ನ ಆಡಳಿತ ಧರ್ಮದರ್ಶಿ ರಾಧಾಮೂರ್ತಿ ಸಹಾಯ ವಾಣಿಯ ಕರ್ತವ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
(ಇನ್ಫೋ ವಾರ್ತೆ)

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X