ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ನಿಯಮ ಉಲ್ಲಂಘಿಸುವ ಬೆಂಗಳೂರಿಗರ ಮನೆಗೇ ದಂಡದ ನೋಟೀಸು!

By Staff
|
Google Oneindia Kannada News

ಬೆಂಗಳೂರು : ಕೆಂಪು ದೀಪ ಹೊತ್ತಿಕೊಂಡರೂ ವಾಹನ ಮುಂದಕ್ಕೆ ಬಿಟ್ಟರೆ, ಹಳದಿ ಪಟ್ಟೆ ದಾಟಿ ಗಾಡಿ ಓಡಿಸಿದರೆ, ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದರೆ ಇನ್ನು ಮುಂದೆ ಪೊಲೀಸರೇನೂ ನಿಮ್ಮನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ ಎಂದು ಬೀಗದಿರಿ ಬೆಂಗಳೂರಿಗರಾ, ನಿಮ್ಮ ಮನೆಗೇ ಬರಲಿದೆ ದಂಡದ ನೋಟೀಸು !

ಇದೆಲ್ಲಾ ಡಿಜಿಟಲ್‌ ವ್ಯವಸ್ಥೆಯ ಕರಾಮತ್ತು. ದೆಹಲಿ ಹಾಗೂ ಮುಂಬಯಿಯಲ್ಲಿ ಇದೀಗ ಹಳತು. ಆಡುಗೋಡಿ ಸಂಚಾರಿ ವಿಭಾಗದಲ್ಲೂ ಈ ವ್ಯವಸ್ಥೆಯೀಗ ಹಕೀಕತ್ತು. ಕೆಲವೇ ದಿನಗಳಲ್ಲಿ ಇಡೀ ಬೆಂಗಳೂರಿನ ಸಂಚಾರಿ ವಿಭಾಗಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಇದಕ್ಕೆ ಬೇಕಾದ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.

ಏನೀ ಡಿಜಿಟಲ್‌ ವ್ಯವಸ್ಥೆ ?

ಟ್ರಾಫಿಕ್‌ ಪೊಲೀಸರ ಬಳಿ ಒಂದು ಕಂಪ್ಯೂಟರ್‌. ನಿಯಮ ಉಲ್ಲಂಘಿಸಿದ ವಾಹನದ ನಂಬರು ಅದರಲ್ಲಿ ದಾಖಲು. ಸಂಜೆ ಹೊತ್ತಿಗೆ ಠಾಣೆಯಲ್ಲಿ ದೂರಿನ ಅಹವಾಲು. ಮರು ದಿನ ನಿಮ್ಮ ಮನೆ ಬಾಗಿಲಿಗೇ ನೋಟೀಸು; ನಿಗದಿತ ದಂಡವನ್ನು ಕಟ್ಟಲು. 7 ದಿನಗಳೊಳಗಾಗಿ ದಂಡ ಕಟ್ಟಲೇಬೇಕು. ಇಲ್ಲವಾದರೆ ಬರುತ್ತದೆ ಕೋರ್ಟಿನಿಂದ ಬುಲಾವು.

ದಂಡ ಕಟ್ಟಲು ಪರವಾನಗಿ ಸಮೇತ ಆಯಾ ಠಾಣೆಗೆ ಬರಬೇಕು. ಒಂದು ವೇಳೆ ವಾಹನವನ್ನು ಮಾಲೀಕರ ಬದಲು ಬೇರೆಯವರು ಓಡಿಸಿ, ನಿಯಮ ಉಲ್ಲಂಘಿಸಿದ್ದರೆ ಅವರೇ ಬಂದು ದಂಡ ಕಟ್ಟಬಹುದು. ಅವರ ಬಳಿಯೂ ಪರವಾನಗಿ ಇರುವುದು ಅತ್ಯವಶ್ಯ. ಈ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಈಗಾಗಲೇ 16 ಲಕ್ಷ ವಾಹನ ಮಾಲೀಕರ ವಿಳಾಸಗಳನ್ನು ವ್ಯವಸ್ಥಿತವಾಗಿ ಕಂಪ್ಯೂಟರಿನಲ್ಲಿ ಜೋಡಿಸಿಟ್ಟುಕೊಂಡಿದೆ. ರಸ್ತೆ ನಿಯಮ ಗಾಳಿಗೆ ತೂರೀರಿ, ಜೋಕೆ!

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X