ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಕಾಟ ಕೊಡುತ್ತಿರುವ ಕೋತಿಗಳು ಸಾರ್‌ ಕೋತಿಗಳು!

By Staff
|
Google Oneindia Kannada News

Kothigalu saar Kothigaluಬೆಂಗಳೂರು : ಬೇಸಗೆ ಬಂತೆಂದರೆ ನಗರಕ್ಕೆ ಶಾಪಿಂಗ್‌ಗೆ ಬಂದಂತೆ ಎಲ್ಲಿಂದಲೋ ಗುಳೇ ಬರುವ ಕೋತಿಗಳು ಈ ಬಾರಿಯೂ ದಾಳಿಯಿಟ್ಟಿವೆ. ಅಶೋಕನಗರ, ಚಂದ್ರಾ ಲೇ ಔಟ್‌, ಕೋರಮಂಗಲ, ಜಯನಗರ, ವಿಲ್ಸನ್‌ ಗಾರ್ಡನ್‌, ವಿದ್ಯಾರಣ್ಯಪುರ ಹಾಗೂ ಅಲಸೂರುಗಳಲ್ಲಿ ಜನರ ಬಾಯಲ್ಲಿ ಒಂದೇ ವರಾತ- ಕೋತಿಗಳು ಸಾರ್‌ ಕೋತಿಗಳು!

ಕೋತಿಗಳು ಏನು ಮಾಡುತ್ತಿವೆ?
ತಿಂಡಿ ತಿನ್ನುತ್ತಿರುವ ಪುಟ್ಟ ಮಕ್ಕಳಿಗೆ ಪರಚಿ, ಅದನ್ನು ಕಸಿದುಕೊಳ್ಳುತ್ತಿವೆ.
ಅಡುಗೆಮನೆಗೆ ನುಗ್ಗಿ ಬಾಳೆಹಣ್ಣು ಹುಡುಕುವ ಭರದಲ್ಲಿ ಧ್ವಂಸ ಮಾಡುತ್ತಿವೆ.
ಮಕ್ಕಳು ಮನೆಯಂಗಳದಲ್ಲಿ ಮುಕ್ತವಾಗಿ ಆಟ ಆಡಲು ಬಿಡದೆ, ಭಯವೊಡ್ಡುತ್ತಿವೆ.
ಕಚೇರಿಗಳಿಗೆ ನುಗ್ಗಿ, ತಿಂಡಿ ಸಿಗದ ಕಾರಣಕ್ಕೆ ಬೇಸತ್ತು ಕಂಪ್ಯೂಟರ್‌ ವೈರ್‌ಗಳ ಕಡಿದು ಹಾಕುತ್ತಿವೆ.
ತೆಂಗಿನಕಾಯಿ, ಎಳನೀರನ್ನು ಮರದಿಂದ ಕೆಡವುತ್ತಿವೆ. ತೋಟದ ಹೂಗಳನ್ನು ತಿಂದು, ಉಗುಳುತ್ತಿವೆ.
ಈ ಬಾರಿ ಕೋತಿಗಳು ಸಾಕಷ್ಟು ಮಜಬೂತಾಗಿದ್ದು, ಮನೆಯ ಒಬ್ಬರಿಂದಲೇ ನಿಯಂತ್ರಿಸುವುದು ಅಸಾಧ್ಯವಾಗಿದೆ. ಜನ ಈ ಪರಿಯಾಗಿ ಕೋತಿಗಳ ಕಾಟವನ್ನು ಹೇಳಿಕೊಳ್ಳುತ್ತಿದ್ದರೂ, ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ನಮಗಿನ್ನೂ ಒಂದೇ ಒಂದು ದೂರು ಬಂದಿಲ್ಲ. ಬಂದರೆ ಕೋತಿಗಳಿಗೆ ಒಂದು ಗತಿ ಕಾಣಿಸುತ್ತೇವೆ ಎನ್ನುತ್ತಿದ್ದಾರೆ. ಪದೇ ಪದೇ ದೂರು ಕೊಟ್ಟರೂ ಯಾರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎನ್ನುವುದು ನಾಗರಿಕರ ದೂರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X