ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಸಿಎಫ್‌ಟಿಆರ್‌ಐನಿಂದ ವರ್ಷವೊಂದರಲ್ಲಿ ನೂರು ಪೇಟೆಂಟ್‌ ದಾಖಲೆ

By Staff
|
Google Oneindia Kannada News

ಮೈಸೂರು : ಪೇಟೆಂಟ್‌ ಪೋಟಿಯಲ್ಲಿ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಭಾರತದ ಛಾಪು ಮೂಡಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವರ್ಷವೊಂದರಲ್ಲಿ ನೂರು ಪೇಂಟೆಂಟ್‌ಗಳನ್ನು ಪಡೆದುಕೊಂಡಿರುವ ಸಾಧನೆ ಮಾಡಿದೆ.

ಸಿಎಫ್‌ಟಿಆರ್‌ಐನ ಸಾಧನೆ ಅಪರೂಪದ್ದಾಗಿದ್ದು , ದೇಶದಲ್ಲಿ ಈವರೆಗೂ ಯಾವುದೇ ವೈಜ್ಞಾನಿಕ ಸಂಸ್ಥೆ ವರ್ಷವೊಂದರಲ್ಲಿ ನೂರು ಪೇಟೆಂಟ್‌ಗಳನ್ನು ಪಡೆದ ಸಾಧನೆ ಮಾಡಿಲ್ಲ ಎಂದು ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ವಿ.ಪ್ರಕಾಶ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಎಫ್‌ಟಿಆರ್‌ಐ ಪಡೆದಿರುವ ನೂರು ಪೇಟೆಂಟ್‌ಗಳಲ್ಲಿ - 26 ಜೈವಿಕ ತಂತ್ರಜ್ಞಾನ, 32 ಆಹಾರ ಸಂಸ್ಕರಣೆ ಹಾಗೂ 12 ಹಣ್ಣು ಮತ್ತು ತರಕಾರಿ ವಿಷಯಕ್ಕೆ ಸಂಬಂಧಿಸಿವೆ. ಇದೇ ಅವಧಿಯಲ್ಲಿ 75 ಪೇಟೆಂಟ್‌ಗಳಿಗಾಗಿ ಸಂಸ್ಥೆ ವಿವಿಧ ದೇಶಗಳಲ್ಲಿ ತನ್ನ ಹಕ್ಕು ಸ್ವಾಮ್ಯ ಪ್ರತಿಪಾದಿಸಿದೆ. ಅಮೆರಿಕಾ, ಕೆನಡಾ, ಯರೋಪಿನ ಹತ್ತು ರಾಷ್ಟ್ರಗಳು, ಕೊರಿಯಾ, ಫಿಲಿಫೈನ್ಸ್‌ , ಥೈಲ್ಯಾಂಡ್‌, ಯುಎಇ, ನೈಜೀರಿಯಾ, ಸೂಡಾನ್‌, ಕೀನ್ಯಾ, ಭೂತಾನ್‌, ನೇಪಾಳ, ಶ್ರೀಲಂಕಾ, ಬ್ರೆಜಿಲ್‌, ಕಜಕಿಸ್ತಾನ್‌, ಇಥೋಪಿಯಾ, ಈಜಿಪ್ಟ್‌ , ಕ್ಯೂಬಾ, ಇಂಡೋನೇಷಿಯಾ ಹಾಗೂ ವೆಸ್ಟಿಂಡೀಸ್‌ಗಳಲ್ಲಿ ಸಿಎಫ್‌ಟಿಆರ್‌ಐ ತನ್ನ ಪೇಟೆಂಟ್‌ಗಳಿಗಾಗಿ ಹಕ್ಕು ಮಂಡಿಸಿದೆ.

ಸಾವಿರಾರು ವಸ್ತುಗಳ ಕುರಿತು ಪೇಟೆಂಟ್‌ ಪಡೆಯುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಗುಡ್ಡಗಾಡು ಜನತೆಯ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಹಲವಾರು ಪೇಟೆಂಟ್‌ಗಳನ್ನು ಪಡೆಯಬೇಕಿದೆ. ಇದರಿಂದ ಬರುವ ಹಣವನ್ನು ಗುಡ್ಡಗಾಡು ಜನತೆಯ ಕಲ್ಯಾಣಕ್ಕಾಗಿಯೇ ಬಳಸಬಹುದು ಎಂದು ಪ್ರಕಾಶ್‌ ಅಭಿಪ್ರಾಯಪಟ್ಟರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X