ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಥಮ : 100% ಕೃಷಿ ಸಾಲ ವಸೂಲು ಮಾಡಿದ ದ.ಕ.ಜಿಲ್ಲಾ ಬ್ಯಾಂಕ್‌

By Staff
|
Google Oneindia Kannada News

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸೆಂಟ್ರಲ್‌ ಸಹಕಾರ ಬ್ಯಾಂಕ್‌ ನಿಯಮಿತವು 2001- 02ನೇ ವಿತ್ತ ವರ್ಷದಲ್ಲಿ 3.25 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಎಂಬತ್ತೊಂಬತ್ತನೇ ವರ್ಷಕ್ಕೆ ಕಾಲಿಟ್ಟಿರುವ ಬ್ಯಾಂಕು 2001-02 ವಿತ್ತ ವರ್ಷದಲ್ಲಿ ಕೃಷಿ ಸಾಲದ ಪೂರ್ಣ ಬಾಕಿಯನ್ನು ವಸೂಲು ಮಾಡಿದ್ದು, ಲಾಭಾಂಶದಲ್ಲಿ 0.67 ಕೋಟಿ ರುಪಾಯಿ ಹೆಚ್ಚಳವಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಕೃಷಿ ಸಾಲವನ್ನು ಪ್ರತಿಶತ ನೂರರಷ್ಟು ವಾಪಸ್ಸು ಪಡೆದ ದೇಶದ ಏಕೈಕ ಬ್ಯಾಂಕ್‌ ನಮ್ಮದು. ರೈತರಿಗೆ 1ಕೋಟಿ ರುಪಾಯಿ ಸೋಡಿ ಕೊಟ್ಟ ನಂತರವೂ ಸಾಕಷ್ಟು ಲಾಭ ದಾಖಲಿಸಿದೆ. ವಿವಿಧ ಉದ್ದೇಶಗಳಿಗೆ 214 ಕೋಟಿ ರುಪಾಯಿ ಸಾಲ ಕೊಟ್ಟಿದ್ದು, ಸಹಕಾರಿ ಬ್ಯಾಂಕ್‌ ಕ್ಷೇತ್ರದಲ್ಲೇ ದಾಖಲೆ ಇದಾಗಿದೆ. ಮುಂದಿನ ವರ್ಷ 250 ಕೋಟಿ ರುಪಾಯಿ ಸಾಲ ಕೊಡುವ ಉದ್ದೇಶ ನಮ್ಮದು ಎಂದು ರಾಜೇಂದ್ರ ಹೇಳಿದರು.

2001- 02 ವಿತ್ತ ವರ್ಷದಲ್ಲಿ 75 ಕೋಟಿ ರುಪಾಯಿ ಕೃಷಿ ಸಾಲವನ್ನು ಬ್ಯಾಂಕ್‌ ನೀಡಿದೆ. ಈ ಮೊತ್ತದಲ್ಲಿ 14 ಕೋಟಿ ರುಪಾಯಿಯನ್ನು ನಬಾರ್ಡ್‌ ಹಿಂದಿರುಗಿಸಿದೆ. 783 ಸಂಘಗಳು ಬ್ಯಾಂಕ್‌ನ ಸದಸ್ಯರು. 7.43 ಕೋಟಿ ರುಪಾಯಿ ಬಂಡವಾಳವನ್ನು ಈ ಅವಧಿಯಲ್ಲಿ ಬ್ಯಾಂಕ್‌ ಹೂಡಿತ್ತು ಎಂದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X