• search

ಐಟಿಯಲ್ಲಿ ನಂ.1, ಮೂಲಭೂತ ಸೌಕರ್ಯಗಳಲ್ಲಿ ನಂ.6- ಇದು ಕರ್ನಾಟಕ!

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಹೈಟೆಕ್‌ ಮಂತ್ರ ಪಠಿಸುವ ಎಸ್ಸೆಂ ಕೃಷ್ಣರಿಗೆ ಬಡವರು ಕೂಳಿಗೆ ಪರದಾಡುವುದು ಕಾಣಿಸುತ್ತಿಲ್ಲ ಎಂಬ ಆಪಾದನೆ ಈಗ ಹಳೆಯದು. ಅವರು ಅದನ್ನು ಸಾಕಷ್ಟು ಸಲ ಅಲ್ಲಗಳೆದೂ ಆಗಿದೆ. ಆದರೆ ಇತ್ತೀಚೆಗಿನ ಸಮೀಕ್ಷೆಯಾಂದು ಈ ಆಪಾದನೆಯನ್ನು ಪುಷ್ಟೀಕರಿಸುತ್ತದೆ. ಸೈಬರ್‌ ಲೋಕದಲ್ಲಿ ತೇಲುತ್ತಿರುವ ಕರ್ನಾಟಕ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ದೇಶದಲ್ಲಿ ಆರನೇ ಸ್ಥಾನವನ್ನು ಪಡೆದಿದೆ.

    ಕರ್ನಾಟಕದ ಪಾಡು ಹೀಗಾದರೆ ಸಿಲಿಕಾನ್‌ ವ್ಯಾಲಿಯ ಪಟ್ಟಕ್ಕೆ ಬಲಿಷ್ಠ ಪ್ರತಿಸ್ಪರ್ಧಿಯಾಗಿದ್ದ ಆಂಧ್ರಪ್ರದೇಶ 16ನೇ ಸ್ಥಾನದಲ್ಲಿದೆ. ಬೆಂಗಳೂರು ಮೂಲದ ಸರಕಾರೇತರ ಸಂಸ್ಥೆಯಾದ ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ ಈ ಸಮೀಕ್ಷೆಯನ್ನು ನಡೆಸಿದೆ.

    ಸೆಂಟರ್‌ನ ಅಧಿಕಾರಿ ಸಾಮ್ಯೂಯೆಲ್‌ ಕರ್ನಾಟಕದ ಈ ಸೋಲಿಗೆ ಕಾರಣಗಳನ್ನು ಕೊಡುವುದು ಹೀಗೆ - ಕೋಟಿ ಕೋಟಿ ರೂಪಾಯಿಗಳ ಯೋಜನೆಯನ್ನು ವೇದಿಕೆಯಲ್ಲಿ ನಿಂತು ಘೋಷಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಮುಖ್ಯವಲ್ಲ. ಆ ಯೋಜನೆಯಡಿಯಲ್ಲಿ ಒದಗಿಸಿದ ಸೌಕರ್ಯದ ಗುಣಮಟ್ಟವನ್ನು ಪರೀಕ್ಷಿಸಿ ಉತ್ತಮಗೊಳಿಸುವುದು ಅತೀ ಮುಖ್ಯ.

    ಈ ಸರ್ವೆಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನ ಗಳಿಸಿದರೆ ಮೇಘಾಲಯ ಅಂತಿಮ ಸ್ಥಾನದಲ್ಲಿ ಅಂದರೆ 22ನೇ ಸ್ಥಾನದಲ್ಲಿದೆ. ಸರ್ವೆಯ ಒಟ್ಟಂಶ ಹೇಳುವುದು, ದೇಶದಲ್ಲಿ ಜ್ಞಾನವನ್ನು ಒಂದುಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯುವ ವಾಹಿನಿ ಇಲ್ಲ. ಒಂದು ರಾಜ್ಯದಲ್ಲಿ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಯಾಂದು ಯಶಸ್ವಿಯಾದರೆ ಅಕ್ಕ ಪಕ್ಕದ ರಾಜ್ಯಗಳೂ ಈ ಯೋಜನೆ ತಮ್ಮ ರಾಜ್ಯಕ್ಕೆ ಸರಿಹೊಂದುತ್ತವೆಯೇ ಎಂದು ಪರೀಕ್ಷಿಸುವ ಕುತೂಹಲ ಹೊಂದಿರಬೇಕು.

    ಈ ಸಮೀಕ್ಷೆಯ ಕುರಿತು ಕೃಷ್ಣ ಏನನ್ನುತ್ತಾರೆ?

    (ಇನ್ಫೋ ವಾರ್ತೆ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more