ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಟಾಪ್‌-50 ಕುಬೇರರ ಪಟ್ಟಿಯಲ್ಲಿ ವಿಪ್ರೋದ ಅಜೀಂ ಪ್ರೇಂಜಿ

By Staff
|
Google Oneindia Kannada News

ಲಂಡನ್‌ : ಜಗತ್ತಿನ ಐವತ್ತು ಕುಬೇರರ ಪಟ್ಟಿಯನ್ನು ಸಂಡೆ ಟೈಮ್ಸ್‌ ಪ್ರಕಟಿಸಿದ್ದು , ಈ ಪಟ್ಟಿಯಲ್ಲಿ ಭಾರತದ ಸಿಲಿಕಾನ್‌ ವ್ಯಾಲಿ ಬೆಂಗಳೂರಿನ ವಿಪ್ರೋ ಸಂಸ್ಥೆಯ ಅಜೀಂ ಪ್ರೇಂಜಿ ಸ್ಥಾನ ಪಡೆದಿದ್ದಾರೆ.

2002 ನೇ ಇಸವಿಯ ವಿಶ್ವದ ಶ್ರೀಮಂತರ ಟಾಪ್‌- 50 ಪಟ್ಟಿಯನ್ನು ಸಂಡೆ ಟೈಮ್ಸ್‌ ಭಾನುವಾರ ಪ್ರಕಟಿಸಿತು. 2001 ನೇ ಇಸವಿಯಲ್ಲಿ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅಜೀಂ ಪ್ರೇಂಜಿ ಈ ಬಾರಿಯೂ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಅಲ್ಲಕಲ್ಲೋಲ ಸಂಭವಿಸಿದ ಸಂದರ್ಭದಲ್ಲೂ ಪ್ರೇಂಜಿಯವರ ಈ ಸಾಧನೆ ಮಹತ್ವದ್ದಾಗಿದೆ.

4.5 ಶತಕೋಟಿ ಪೌಂಡ್‌ ಒಡೆಯರಾಗಿರುವ ಪ್ರೇಂಜಿ, ವಿಶ್ವದ 49 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರೇಂಜಿ ಅವರ ವರಮಾನದಲ್ಲಿ ಅಲ್ಪ ಪ್ರಮಾಣದ ಖೋತಾ ಉಂಟಾಗಿದೆ ಎಂದು ಪತ್ರಿಕೆಯ ಅಂಕಿ ಅಂಶಗಳು ತಿಳಿಸಿವೆ.

ಅಂದಹಾಗೆ, 73 ಶತಕೋಟಿ ಪೌಂಡ್‌ ಆಸ್ತಿಯ ಒಡೆಯ ಅಮೆರಿಕಾದ ರಾಬ್ಸನ್‌ ಮಾಲ್ಟನ್‌ ವಿಶ್ವದ ಶ್ರೀಮಂತರ ಟಾಪ್‌-50 ಪಟ್ಟಿಯಲ್ಲಿ ಮೊದಲಿದಗರು. ಮೈಕ್ರೋಸಾಫ್ಟ್‌ ಒಡೆಯ ಬಿಲ್‌ಗೇಟ್ಸ್‌ ಎರಡನೇ ಸ್ಥಾನದಲ್ಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X