• search

ಏ.15 ರಿಂದ ಏಷ್ಯಾದ ಅತಿದೊಡ್ಡ ಬಿಟಿ ಮೇಳ‘ಬೆಂಗಳೂರು ಬಯೋ-2002’

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಮಾಹಿತಿ ತಂತ್ರಜ್ಞಾನದ ನಂತರ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಕರ್ನಾಟಕದ ಸೊಲ್ಲು ಬಲ ಪಡಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಪ್ರಯತ್ನದ ಫಲವಾದ ಬೆಂಗಳೂರು ಬಯೋ-2002 ಮೇಳ ಏಪ್ರಿಲ್‌ 15 ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿದೆ.

    ಕರ್ನಾಟಕ ಸರ್ಕಾರದ ಜೈವಿಕ ತಂತ್ರಜ್ಞಾನ (ಬಿಟಿ) ಕಾರ್ಯಾಚರಣೆ ಪಡೆಯ ವಿಷನ್‌ ಗ್ರೂಪ್‌ ಮೂರು ದಿನಗಳ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿದ್ದು , ವಿವಿಧ ದೇಶಗಳ ಹಲವಾರು ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸುವರು ಎಂದು ಮೇಳದ ಸಂಘಟನಾ ಸಮಿತಿಯ ಅಧ್ಯಕ್ಷ ಕಿರಣ್‌ ಮುಂಜುಂದಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಯೋ ಇನ್‌ಫಾರ್ಮಾಟಿಕ್ಸ್‌ , ಬಯೋ ಇಂಧನಗಳು, ಆರೋಗ್ಯ ಸಂರಕ್ಷಣೆ, ಬಯೋ-ಡಯಾಗ್ನಸ್ಟಿಕ್ಸ್‌ ಮುಂತಾದ ಬಯೋ ಟೆಕ್ನಾಲಜಿಯ ಪ್ರಮುಖ ಕ್ಷೇತ್ರಗಳಿಗೆ ಈ ಮೇಳ ಪ್ರದರ್ಶನ ವೇದಿಕೆಯಾಗಲಿದೆ. ಈ ಸಲದ ಅಂತರರಾಷ್ಟ್ರೀಯ ಮೇಳವನ್ನು ದೊಡ್ಡ ರೀತಿಯಲ್ಲಿ ನಡೆಸಲು ಉದ್ದೇಶಿಸಿದ್ದು , ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ಮೇಳ ಏಷ್ಯಾದ ಅತಿದೊಡ್ಡ ಹಾಗೂ ಅತ್ಯಾಕರ್ಷಕ ವಾಣಿಜ್ಯ ಪ್ರದರ್ಶನವಾಗಲಿದೆ.

    70 ಕ್ಕೂ ಹೆಚ್ಚು ದೇಶೀ ಹಾಗೂ ವಿದೇಶೀ ಪ್ರದರ್ಶಕರು ಮೇಳದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ವಿಶ್ವದ ಪ್ರಖ್ಯಾತ ಜೈವಿಕ ತಂತ್ರಜ್ಞಾನ ತಜ್ಞರು ಮೇಳದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಮುಂಜುದಾರ್‌ ಹೇಳಿದರು.
    (ಪಿಟಿಐ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more