ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳಿ, ಎದ್ದೇಳಿ..ಜಾಗಿಂಗ್‌ ಶೂ ಧರಿಸಿ, ಆರೋಗ್ಯವೇ ನಿಮ್ಮ ಗುರಿಯಾಗಿರಲಿ !

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Everyday jogging keeps disease awayಓದು ಮುಗಿಯಿತು. ರ್ಯಾಂಕಿನೊಂದಿಗೇ ಡಿಗ್ರಿ ಗಿಟ್ಟಿಸಿಕೊಂಡಿರುವುದರಿಂದ ಯಾವುದಾದರೂ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಏನಿಲ್ಲವೆಂದರೂ ತಿಂಗಳಿಗೆ 30 ಸಾವಿರ ಸಂಬಳ ಬಾರದೇ...

ಕೆಲಸದ ಬೇಟೆಯಾಯಿತು. ನಂತರ ಕೀರ್ತಿಯ ಮೋಹ. ಅಂಗಾಲಿನಿಂದ ನೆತ್ತಿಯವರೆಗೆ ಪುಟಿಯುವ ಉತ್ಸಾಹ. ಏನಾದರೂ ಸಾಧಿಸಬೇಕು. ನಾಲ್ಕು ಜನ ಗುರುತಿಸುವ ಹಾಗಾಗಬೇಕು. ಹಾರ ಸಮ್ಮಾನಗಳು, ಪತ್ರಿಕೆಯಲ್ಲಿ ಫೋಟೋ ಸಮೇತ ವರದಿಗಳು...ಯೌವ್ವನಕ್ಕೆ ಒರಗಿಕೊಂಡಿದ್ದಷ್ಟು ಕಾಲ ಹೀಗೆ ಕನಸುಗಳು, ಕನಸುಗಳು ಮತ್ತು ಕನಸುಗಳು... ಅದಕ್ಕಾಗಿ 24 ಗಂಟೆಗಳ ಕಾಲವೂ ಕೆಲಸ.

ಐಶಾರಾಮದ ಜಗತ್ತಿನಲ್ಲಿ ಬಿಡುವಿನ ಮಾತಾಡದೆ ಉಸಿರು ಹಿಡಿದು ಕೆಲಸ ಮಾಡುವ ಕಾರ್ಪೊರೇಟ್‌ ಮಹಾಶಯರಿಗೆ ಆರೋಗ್ಯದ ಬಗ್ಗೆ ಜಾಗರೂಕರಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಏಪ್ರಿಲ್‌ 7ರ, ವಿಶ್ವ ಆರೋಗ್ಯ ದಿನದ ಪ್ರಯುಕ್ತ ಡಬ್ಲ್ಯೂಎಚ್‌ಒ ದಿಂದ ಈ ಸಂದೇಶ.

ನಾಜೂಕಿನ ಹಾಗೂ ಐಶಾರಾಮದ ಜೀವನ ನಡೆಸುವುದರಿಂದ ವಿಸ್ತಾರಗೊಳ್ಳುತ್ತಿರುವ ಕಾರ್ಪೊರೇಟ್‌ ಜಗತ್ತಿನ ಯುವಕರು ಬಲು ಬೇಗ ಕಾಯಿಲೆಗೆ ತುತ್ತಾಗುತ್ತಾರೆ. ಯುವಕರು ಈಗಲೇ ಎಚ್ಚರಿಕೆ ವಹಿಸುವುದರಿಂದ ಬದುಕನ್ನು ಇನ್ನಷ್ಟು ಸುಂದರವಾಗಿಸಬಹುದು ಎಂಬುದು ಡಬ್ಲ್ಯೂಎಚ್‌ಒ ಹೇಳವ ಬುದ್ಧಿ ಮಾತು.

ಜಾಗಿಂಗ್‌ ಈಸ್‌ ವೆರಿ ಸಿಂಪಲ್‌ !

ಬುದ್ಧಿ ಮಾತುಗಳನ್ನು ಕೇಳಲಿಕ್ಕೆ ಯಾರಿಗೆ ಪುರುಸೊತ್ತು ಉಂಟಪ್ಪಾ.. ಅಂತ ಮುಖತಿರುಗಿಸಬೇಡಿ. ಆರೋಗ್ಯ ನೆಟ್ಟಗಿಟ್ಟುಕೊಳ್ಳಲು ಡಬ್ಲ್ಯೂಎಚ್‌ಒ ಸಿಂಪಲ್‌ ಉಪಾಯವೊಂದನ್ನು ಹೇಳಿದೆ. ಅದು ಜಾಗಿಂಗ್‌. ನೀವು ಬೆಳಗ್ಗೆ ಸೂರ್ಯ ಕಿರಣಗಳು ಬಲಿಯುವ ಮುನ್ನ ಏಳುವ ಮನಸ್ಸು ಮಾಡಬೇಕು. ಬೇಕಿದ್ದರೆ ಸ್ನೇಹಿತರನ್ನೂ ಕಲೆ ಹಾಕಿಕೊಂಡು ಒಂದೆರಡು ಕಿಲೋಮೀಟರ್‌ ವೇಗವಾಗಿ ನಡೆದರಾಯ್ತು. ನೀವು ಇನ್ನಿಲ್ಲದ ಕಾಯಿಲೆಗಳಿಗಾಗಲೀ, ಬೊಜ್ಜಿನ ಸಮಸ್ಯೆಗಾಗಲೀ ತುತ್ತಾಗುವುದಿಲ್ಲ ಎನ್ನುವ ಪ್ರತಿಶತಃ ಗ್ಯಾರಂಟಿಯನ್ನು ಡಬ್ಲ್ಯೂಎಚ್‌ಒ ನೀಡುತ್ತದೆ.

ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ಕಾರ್ಡಿಯಾಲಜಿ ತಜ್ಞ, ಡಾ, ಶ್ರೀನಾಥ್‌ ರೆಡ್ಡಿ ಕೂಡ ಜಾಗಿಂಗ್‌ಗೇ ಓಟು ಹಾಕುತ್ತಾರೆ. ತಿಂದುಂಡು ಚೆನ್ನಾಗಿರಬೇಕಾದ ಸಮಯದಲ್ಲಿ ಡಯೆಟಿಂಗ್‌ ಅಂತ ಹೊಟ್ಟೆ ಬಾಯಿ ಕಟ್ಟಬೇಡಿ. ಊಟ ತಿಂಡಿಯ ಹೊತ್ತಲ್ಲಿ ಚೆನ್ನಾಗಿ ತಿನ್ನಿ. ಬೆಳಗ್ಗೆ ಎರಡು ಕಿಲೋಮೀಟರ್‌ ಓಡಾಡಿ. ಜಾಗಿಂಗ್‌ ಶೂ ಧರಿಸದೇ ಬರಿಗಾಲಲ್ಲಿ ಜಾಗ್‌ ಮಾಡಿದರೆ ಇನ್ನೂ ಒಳ್ಳೆಯದು. ನಾಲ್ಕು ದಿನ ಸೋಮಾರಿತನ ನಿಮ್ಮನ್ನು ಹಾಸಿಗೆಗೆ ಕಟ್ಟಿಹಾಕಬಹುದು. ಸೋಮಾರಿ ಎಂಬ ಸೈತಾನನನ್ನು ನೀವು ಕೆಡವಲಾರಿರಾ ? ಜಾಗಿಂಗ್‌ನ ನಂತರದ ಫ್ರೆಶ್‌ನೆಸ್‌ ನಿಮ್ಮ ದಿನವನ್ನೆಲ್ಲ ಚೆನ್ನಾಗಿಟ್ಟಿರುತ್ತದೆ.

ಇನ್ನು 18 ವರ್ಷದೊಳಗೆ ಸಕ್ಕರೆ ಕಾಯಿಲೆಯಿಂದ ಬಳಲುವವರ ಸಂಖ್ಯೆ ಈಗಿರುವದಕ್ಕಿಂತ ಮೂರು ಪಟ್ಟು ಏರಲಿದೆಯಂತೆ. ಶ್ರಮವೇ ಇಲ್ಲದ ಪೇಟೆಯ ಜೀವನದಲ್ಲಿ ಕಾಯಿಲೆಗಳಿಗೆ ಜಾಗ ಜಾಸ್ತಿ. ಇದರಿಂದ ಬಚಾವ್‌ ಆಗುವುದಕ್ಕೆ ಮನಸ್ಸೊಂದೇ ಮಾರ್ಗ. ನೀವು ಸೋಮಾರಿಗಳ ಸಾಲಿನಲ್ಲಿ ಇಲ್ಲ ತಾನೇ ? ಸರಿ, ತಡವೇಕೆ, ಏಳಿ, ಎದ್ದೇಳಿ ಜಾಗಿಂಗ್‌ ಶೂಗಳನ್ನು ಧರಿಸಿ...ಪ್ರತಿದಿನದ ಓಟದಿಂದ ಆರೋಗ್ಯ ಸಂಪಾದಿಸಿ !

ನೀವೇನು ಹೇಳುತ್ತೀರಿ?

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X