• search

ಹಗರಿಬೊಮ್ಮನ ಹಳ್ಳಿಯ ಸೋನಿಯಾ ಗಾಂಧಿ ನಗರಕ್ಕೆ ಆದರ್ಶದ ಕೀರಿಟ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    HUDCOಹಗರಿಬೊಮ್ಮನಹಳ್ಳಿ : ದಿನ ಕಳೆದಂತೆಲ್ಲ ಹೊಸ ನಗರಗಳು ಹುಟ್ಟಿಕೊಳ್ಳುತ್ತವೆ. ಗಣ್ಯರ ಹೆಸರನ್ನಿಟ್ಟುಕೊಂಡು ಅವೂ ಬೆಳೆಯುತ್ತವೆ. ಆದರೆ ಅಲ್ಲಿನ ನಿವಾಸಿಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳು ದೊರೆಯುತ್ತವೆಯೇ...? ವಾರಕ್ಕೆರಡು ಬಾರಿ ಬರುವ ಕುಡಿಯುವ ನೀರು, ಶೌಚ ವ್ಯವಸ್ಥೆಗಳಿಲ್ಲದ ದೀನ ಪರಿಸ್ಥಿತಿ.. ಹೀಗೆ ಸಮಸ್ಯೆಗಳು ಲೆಕ್ಕ ದಾಟಿ ಬೆಳೆಯುತ್ತವೆ.

    ಸರಕಾರದ ಮೇಜಿನ ಮೇಲೆ ಆಗ್ರಹಗಳು, ಮನವಿ ಪತ್ರಗಳು, ಮುಷ್ಕರ, ಘರಾವ್‌ಗಳ ಬೆದರಿಕೆ ಪತ್ರಗಳು ರಾಶಿ ಬೀಳುತ್ತವೆ. ಮಂತ್ರಿವರ್ಯರು, ಶಾಸಕರು ಭರವಸೆಗಳ ನೀಡಿ ಮೈಲುದ್ದ ಮಾತಾಡುತ್ತಾರೆ. ಇಂತಹ ಪರಿಸ್ಥಿತಿಗಳನ್ನು, ಘಟನೆಗಳನ್ನು ಓದಿ ಓದಿ ಸಾಕೆನಿಸಿರುವ ಓದುಗರಿಗೆ ಇಲ್ಲೊಂದು ಹೊಸ ಸುದ್ದಿಯಿದೆ. ಬೆಂಗಳೂರು ನಗರದ ಹೊರವಲಯದಲ್ಲಿರುವ ಸೋನಿಯಾ ಗಾಂಧಿ ನಗರವನ್ನು ದೇಶದ ಮಾದರಿ ಕಾಲೋನಿ ಎಂದು ಹುಡ್ಕೋ ಘೋಷಿಸಿದೆ.

    ಸ್ಥಳೀಯ ಶಾಸಕ ಸಿರಾಜ್‌ ಶೇಕ್‌ ಈ ವಿಷಯವನ್ನು ಭಾನುವಾರ ತಿಳಿಸಿದ್ದಾರೆ. ಸೋನಿಯಾಗಾಂಧಿ ಕಾಲೋನಿಯ ನಿವಾಸಿಗಳು ಖಷಿಯಾಗಿದ್ದಾರೆ. ಏಪ್ರಿಲ್‌ 24ರಂದು ದೆಹಲಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಕಾಲೋನಿಗೆ ಪ್ರಶಸ್ತಿ ದೊರೆಯಲಿದೆ. ಹುಡ್ಕೋ ಪ್ರತಿವರ್ಷ ದೇಶದಲ್ಲಿ ಮೂಲಭೂತ ಸೌಕರ್ಯಗಳಿಂದ ಕೂಡಿದ ಕಾಲೋನಿಗಳಿಗೆ ನೀಡುವ ಈ ಆದರ್ಶ ಕಾಲೋನಿ ಪ್ರಶಸ್ತಿಗೆ ಈ ಬಾರಿ ಸೋನಿಯಾ ಗಾಂಧಿ ನಗರ ಆಯ್ಕೆಯಾಗಿದೆ.

    2000ನೇ ವರ್ಷದ ನವೆಂಬರ್‌ನಲ್ಲಿ ಸೋನಿಯಾ ಗಾಂಧಿ ಕಾಲೋನಿಯನ್ನು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಉದ್ಘಾಟಿಸಿದ್ದರು. ನಗರದಲ್ಲಿರುವ ಸೌಕರ್ಯಗಳು, ಶುಚಿತ್ವವನ್ನು ಗಮನಿಸಿದ ರಾಜೀವ್‌ ಗಾಂಧಿ ಹೌಸಿಂಗ್‌ ಸ್ಕೀಮ್‌ನ ಶಿವಾ ಸೈಲಮ್‌ ಅವರು ನಗರದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಸರಕಾರದಿಂದ ಬಿಡುಗಡೆಯಾದ ಎಲ್ಲ ನೆರವುಗಳನ್ನು ಬಳಸಿಕೊಂಡು ಸ್ಥಳೀಯ ನಾಯಕರು ಪಕ್ಷ ಬೇಧವಿಲ್ಲದೆ ಈ ನಗರದ ಅಭಿವದ್ಧಿಗೆ ಶ್ರಮಿಸಿದ್ದಾರೆ ಎಂದು ಶಾಸಕ ಸಿರಾಜ್‌ ಅಭಿಪ್ರಾಯಪಟ್ಟಿದ್ದಾರೆ.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more