ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿಯಲ್ಲಿ ಟಾಟಾ ಟೆಲಿಸರ್ವಿಸ್‌ ಕಂಪೆನಿಯ ದೂರಸಂಪರ್ಕ ಕೇಂದ್ರ

By Staff
|
Google Oneindia Kannada News

ಹುಬ್ಬಳ್ಳಿ: ಟಾಟಾ ಟೆಲಿ ಸರ್ವಿಸ್‌ ಕಂಪೆನಿಯು ಹುಬ್ಬಳ್ಳಿ ನಗರದಲ್ಲಿ 100 ಕೋಟಿ ರೂಪಾಯಿ ಬಂಡವಾಳ ಹೂಡುವ ಮೂಲಕ ಸಂಪರ್ಕ ಕೇಂದ್ರವನ್ನು ತೆರೆಯಲು ನಿರ್ಧರಿಸಿದೆ.

ಮುಂದಿನ ಮೂರು ವರ್ಷಗಳ ಅವಧಿಯಾಳಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಪೂರ್ಣ ಸಂಪರ್ಕ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಟಾಟಾ ಟೆಲಿಸರ್ವಿಸಸ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ವೈ.ವಿ. ಎಲ್‌ ಪಂಡಿತ್‌ ತಿಳಿಸಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ದೂರಸಂಪರ್ಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಮೂಲಕ ಉತ್ತರ ಕರ್ನಾಟಕದ ದೂರಸಂಪರ್ಕ ಕಂಪೆನಿಗಳ ಅಗತ್ಯವನ್ನು ಟಾಟಾ ಟೆಲಿಸರ್ವಿಸ್‌ ಕೇಂದ್ರ ಪೂರೈಸಲಿದೆ.

ಕಂಪೆನಿಯು ಈಗಾಗಲೇ ನಗರದ ಐಟಿ ಪಾರ್ಕಿನಲ್ಲಿ 18 ಸಾವಿರ ಚದರ ಅಡಿ ಪ್ರದೇಶವನ್ನು ಖರೀದಿಸಿದೆ. ಸದ್ಯದಲ್ಲಿಯೇ ದೂರ ಸಂಪರ್ಕ ಕೇಂದ್ರವನ್ನು ತೆರೆಯಲಾಗುವುದು. ಆರಂಭದಲ್ಲಿ 25 ಮಂದಿ ಇಂಜಿನಿಯರ್‌ಗಳಳ ನೇಮಕಾತಿಯಾಂದಿಗೆ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಪಂಡಿತ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X