ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚದುರಂಗ ಚಾಣಾಕ್ಷ ಮಾಜಿ ವಿಶ್ವ ಚಾಂಪಿಯನ್‌ ಕಾರ್ಪೊವ್‌ ಬೆಂಗಳೂರಿಗೆ

By Staff
|
Google Oneindia Kannada News

ದುಬೈ : ಪಕ್ಕಾ ವೃತ್ತಿಪರ ಚೆಸ್‌ ಆಟಗಾರ ಮಾಜಿ ವಿಶ್ವ ಚಾಂಪಿಯನ್‌ ಅನಾತೊಲಿ ಕಾರ್ಪೊವ್‌ ಬೆಂಗಳೂರಿನಲ್ಲಿ ನಡೆಯುವ ಫಿಡೆ (ವಿಶ್ವ ಚೆಸ್‌ ಫೆಡರೇಷನ್‌) ಗ್ರಾನ್‌ ಪ್ರಿ ಚೆಸ್‌ ಟೂರ್ನಿಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ.

ಭಾರತದಲ್ಲಿ ನಡೆಯುವ ಟೂರ್ನಿಯಲ್ಲಿ ನಾನು ಭಾಗವಹಿಸುವುದು ಖಚಿತ. ಆದರೆ, ಮಾಸ್ಕೋದಲ್ಲಿ ನಡೆಯುವ ಎರಡನೇ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾರ್ಪೊವ್‌ ಹೇಳಿದ್ದಾರೆ. ದುಬೈನ ಗಲ್ಫ್‌ ನ್ಯೂಸ್‌ ಪತ್ರಿಕೆ ಈ ವಿಷಯವನ್ನು ವರದಿ ಮಾಡಿದೆ.

ಮಾಸ್ಕೋದಲ್ಲಿ ನಡೆಯುವ ಪಂದ್ಯಾವಳಿಯ ಸಂದರ್ಭದಲ್ಲಿ ಅಮೆರಿಕಾದಲ್ಲಿ ಸಮಾವೇಶವೊಂದು ನಡೆಯಲಿದ್ದು , ಆ ಸಮಾವೇಶದಲ್ಲಿ ತಾವು ಭಾಗವಹಿಸುವುದರಿಂದ ಮಾಸ್ಕೋ ಟೂರ್ನಿಯಲ್ಲಿ ಭಾಗವಹಿಸುವುದು ಸಾಧ್ಯವಾಗುವುದಿಲ್ಲ ಎಂದು ಕಾರ್ಪೊವ್‌ ತಿಳಿಸಿದ್ದಾರೆ.

ಫಿಡೆ ಟೂರ್ನಿಯಲ್ಲಿ ಭಾಗವಹಿಸಲು ಕಾರ್ಪೊವ್‌ ಅವರು ಬೆಂಗಳೂರಿಗೆ ಬರುವುದು ಖಚಿತವಾಗುತ್ತಿರುವಂತೆಯೇ ಬೆಂಗಳೂರಿನ ಚದುರಂಗ ವಲಯದಲ್ಲಿ ಉತ್ಸಾಹ ವ್ಯಕ್ತವಾಗಿದೆ. ಪಂದ್ಯಾವಳಿಯ ವೇಳಾ ಪಟ್ಟಿ ಯ ವಿವರಗಳು ಇನ್ನೂ ತಿಳಿದುಬಂದಿಲ್ಲ . ವಿಶ್ವ ಚೆಸ್‌ ರಂಗದಲ್ಲಿ ಅಚ್ಚಳಿಯದ ಛಾಪು ಮೂಡಸಿರುವ ಕಾರ್ಪೊವ್‌ ಜಗತ್ತಿನ ಶ್ರೇಷ್ಠ ಚದುರಂಗ ಪಟುಗಳಲ್ಲೊಬ್ಬರು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X