ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕ್ಷೇತ್ರದ ಮಹತ್ವದ ಒಪ್ಪಂದ : ವಿಪ್ರೋ- ಐಬಿಎಂ ಭಾಯಿ ಭಾಯಿ

By Oneindia Staff
|
Google Oneindia Kannada News

ಬೆಂಗಳೂರು :ಭಾರತದ ಮುಂಚೂಣಿ ಇನ್ಫೋಟೆಕ್‌ ಕಂಪನಿ ವಿಪ್ರೋ ಹಾಗೂ ಸರ್ವರ್‌ ಕಂಪನಿಗಳ ದಿಗ್ಗಜ ಎನಿಸಿರುವ ಐಬಿಎಂ ನಡುವೆ ಮಹತ್ವಪೂರ್ಣ ಒಪ್ಪಂದವಾಗಿದ್ದು, ಇನ್ನು ಮುಂದೆ ಭಾರತ ಹಾಗೂ ಏಷ್ಯಾ ಪೆಸಿಫಿಕ್‌ ಗ್ರಾಹಕರಿಗೆ ಈ ಕಂಪನಿಗಳ ಜಂಟಿ ಸೇವೆ ಲಭ್ಯ.

ಐಬಿಎಂನ ಏಷ್ಯಾ ಪೆಸಿಫಿಕ್‌ ವಿಭಾಗದ ಅಧ್ಯಕ್ಷ ಕಕುತಾರೋ ಕಿಟಾಶಿರೋ ಹಾಗೂ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಒಡಂಬಡಿಕೆಯನ್ನು ಪ್ರಕಟಿಸಿದರು. ಇನ್ನು ಮುಂದೆ ಐಬಿಎಂನ ಉತ್ಪನ್ನಗಳಿಗೂ ವಿಪ್ರೋ ಮಾರುಕಟ್ಟೆ ಒದಗಿಸಿಕೊಡಲಿದೆ. ಪಿ ಸೀರೀಸ್‌ (ಯೂನಿಕ್ಸ್‌ ಸರ್ವರ್‌ಗಳು), ಎಕ್ಸ್‌ ಸೀರೀಸ್‌ (ಇಂಟೆಲ್‌ ಆಧಾರಿತ ಸರ್ವರ್‌ಗಳು), ಐ ಸೀರೀಸ್‌ ಹಾಗೂ ಝಡ್‌ ಸೀರೀಸ್‌ ಮೊದಲಾದ ಸರ್ವರ್‌ ಮತ್ತು ಸಂಗ್ರಹಣಾ ಉತ್ಪನ್ನಗಳು ವಿಪ್ರೋ ಮೂಲಕ ಮಾರುಕಟ್ಟೆಗೆ ಬರಲಿವೆ.

ಇತ್ತೀಚೆಗೆ ನಾನು ಇಲ್ಲಿಗೆ ಬಂದಿದ್ದಾಗ ವಿಪ್ರೋ ಕಾರ್ಯ ವೈಖರಿಯನ್ನು ಮೆಚ್ಚಿದೆ. ಗ್ರಾಹಕರಿಗೆ ಗುಣ ಮಟ್ಟದ ಉತ್ಪನ್ನ ಕೊಡುವುದು ವಿಪ್ರೋ ಮಂತ್ರ. ಐಬಿಎಂನ ಧೋರಣೆಯೂ ಇದೇ ರೀತಿಯದ್ದು. ಇಂಥಾ ಕಂಪನಿಯಾಡನೆ ಕೈಜೋಡಿಸುವುದು ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು ಎನಿಸಿತು. ಅದಕ್ಕೇ ಒಪ್ಪಂದ ಮಾಡಿಕೊಂಡೆ. ಭಾರತದಲ್ಲಿ ಈ ರೀತಿಯ ಒಪ್ಪಂದ ಆಗುತ್ತಿರುವುದು ಇದೇ ಮೊದಲು ಎಂದು ಟೋಕಿಯೋದಿಂದ ವಿಮಾನದಲ್ಲಿ ಹಾರಿ ಬಂದು, ಒಡಂಬಡಿಕೆಗೆ ಸಹಿ ಮಾಡಿದ ಕಿಟಾಶಿರೋ ಹೇಳಿದರು.

ಎಂಬತ್ತೆೈದು ಶತಕೋಟಿ ಡಾಲರ್‌ ವಹಿವಾಟು ಉಳ್ಳ ಕಂಪನಿ ಐಬಿಎಂ. ಕಂಪನಿಯ ಆದಾಯದ ಶೇ. 20ರಷ್ಟು ಪಾಲು ಏಷ್ಯಾ ಪೆಸಿಫಿಕ್‌ ವಲಯದ್ದು. ಒಪ್ಪಂದ ಮಾಡಿಕೊಳ್ಳುವುದರಿಂದ ಎರಡೂ ಕಂಪನಿಗಳಿಗೆ ಒಳ್ಳೆಯದಾಗುತ್ತದೆ ಎಂಬುದು ಮನವರಿಕೆಯಾಯಿತು. ಕಿಟಾಶಿರೋ ಜಪಾನಿನಿಂದ ಇಲ್ಲಿಗೆ ಬಂದು ಒಡಂಬಡಿಕೆಯನ್ನು ಪ್ರಕಟಿಸುತ್ತಿರುವುದೇ ಇದು ಮಹತ್ವದ ಒಪ್ಪಂದ ಎಂಬುದಕ್ಕೆ ಹಿಡಿದ ಕನ್ನಡಿ ಎಂದು ವಿಪ್ರೋ ಅಧ್ಯಕ್ಷ ಪ್ರೇಂಜಿ ಹೇಳಿದರು.

ಡೆಲ್‌ ಕಂಪನಿ ವಿಪ್ರೋ ಜೊತೆ ಸೇರಿ ಉತ್ಪಾದನಾ ಘಟಕ ಸ್ಥಾಪಿಸಲಿದೆ ಎಂಬ ಸುದ್ದಿ ನಿಜವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ಕೊಡಲು ಪ್ರೇಂಜಿ ನಿರಾಕರಿಸಿದರು. ವಿಪ್ರೋ ಇನ್ಫೋಟೆಕ್‌ ಅಧ್ಯಕ್ಷ ಸುರೇಶ್‌ ವಾಸ್ವಾನಿ ಅದೊಂದು ಸುದ್ದಿ ಅಷ್ಟೆ, ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X