ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡವನ್ನು ಸರಕಾರ ನಿರ್ಲಕ್ಷಿಸಿದರೆ ಬೃಹತ್‌ ಚಳವಳಿ -ಸಾಹಿತಿಗಳ ಎಚ್ಚರಿಕೆ

By Oneindia Staff
|
Google Oneindia Kannada News

ಧಾರವಾಡ: ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ಐದು ದಶಕಗಳಾಗುತ್ತಾ ಬಂತು. ಆದರೆ ಕನ್ನಡ ಭಾಷೆ ಮಾತ್ರ ದುಸ್ಥಿತಿಯಲ್ಲಿದ್ದು, ಸರಕಾರದ ನಿರ್ಲಕ್ಷ್ಯ ಹೀಗೇ ಮುಂದುವರೆದರೆ, ಗೋಕಾಕ್‌ ಚಳವಳಿಯ ಮಾದರಿಯಲ್ಲಿ ಬೃಹತ್‌ ಚಳವಳಿಯಾಂದನ್ನು ಹಮ್ಮಿಕೊಳ್ಳುವುದಾಗಿ ರಾಜ್ಯದ ಗಣ್ಯ ಸಾಹಿತಿಗಳು ಎಚ್ಚರಿಸಿದ್ದಾರೆ.

ಬುಧವಾರ ನಡೆದ ಗೋಕಾಕ್‌ ಚಳವಳಿಯ 20ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿಗಳು ಸರಕಾರಕ್ಕೆ ಈ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಡಾ. ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ಅಂಗೀಕರಿಸಲಾದ ಮುಖ್ಯ ನಿರ್ಣಯಗಳು :

  • ಕನ್ನಡಕ್ಕೆ ಪ್ರಾಧಾನ್ಯತೆ ದಕ್ಕಿಸಿಕೊಳ್ಳಲು ಹೋರಾಟ ಸಮಿತಿಗಳ ರಚನೆ
  • ಪ್ರತಿ ತಾಲ್ಲೂಕಿನಲ್ಲಿಯೂ ಕರ್ನಾಟಕ ವಿದ್ಯಾವರ್ಧಕ ಸಂಘದ ಘಟಕ
  • ಮಹಾಜನ್‌ ವರದಿ ಜಾರಿಗೆ ತರಲು ಹಾಗೂ, ಗಡಿನಾಡ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸಲು ಸರಕಾರದ ಮೇಲೆ ನಿರಂತರ ಒತ್ತಾಯ ಹೇರಲು ಸೂಕ್ತ ಕಾರ್ಯಕ್ರಮ
  • ಬರಗೂರು ವರದಿಯನ್ನು ಜಾರಿಗೊಳಿಸುವುದು
  • ಪಿಯುಸಿಯಲ್ಲಿ ಕನ್ನಡ ಐಚ್ಛಿಕ ವಿಷಯಕ್ಕೆ ಮುಕ್ತ ಅನುಮತಿ
  • ಬಿಇಡಿಯಲ್ಲಿ ಕನ್ನಡ ವಿಷಯವನ್ನು ಕಡ್ಡಾಯವಾಗಿ ಕಲಿಸುವುದು
  • ಕನ್ನಡ ಶಾಲೆಗಳ ಗುಣಾತ್ಮಕ ಅಭಿವೃದ್ಧಿ ಹಾಗೂ ದೋಷ ರಹಿತ ಕನ್ನಡ ಪಠ್ಯ ಪುಸ್ತಕಗಳ ರಚನೆ
  • ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ
ಕಾರ್ಯಕ್ರಮದಲ್ಲಿ ಸಾಹಿತಿ ಕೈಯ್ಯಾರ ಕಿಞ್ಞಣ್ಣ ರೈ ಮಾತನಾಡಿ , ಸ್ವಾತಂತ್ರ್ಯದ ನಂತರ ಕನ್ನಡದ ಶಿಕ್ಷಕರ ನೇಮಕಾತಿ ಸರಿಯಾಗಿ ಆಗುತ್ತಿಲ್ಲ. ಹಣ ಕೊಟ್ಟು ಉದ್ಯೋಗಕ್ಕೆ ಸೇರುವವರೇ ಹೆಚ್ಚಾಗಿದ್ದಾರೆ ಎಂದರು. ಕಾಸರಗೋಡಿನ ಜನರು ಕರ್ನಾಟಕಕ್ಕೆ ಸೇರಲು ಸಂಪೂರ್ಣ ಸಿದ್ಧರಾಗಿದ್ದಾರೆ. ಇದನ್ನು ನನಸಾಗಿಸಲು ಕರ್ನಾಟಕದ ಎಲ್ಲ ಅಭಿಮಾನಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X