ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ಸು /ರೈಲಲ್ಲಿ ಮಾದಕ ವಸ್ತು ಬೆರೆತ ತಿಂಡಿ ತಿನ್ನಿಸಿ ದೋಚುತ್ತಿದ್ದ ಕಳ್ಳ ಸಿಕ್ಕಿಬಿದ್ದ!

By Staff
|
Google Oneindia Kannada News

ಬೆಂಗಳೂರು : ಬಸ್ಸು ಹಾಗೂ ರೈಲುಗಳಲ್ಲಿ ಸವಿ ಮಾತುಗಳ ಮುೂಲಕ ಸಹ ಪ್ರಯಾಣಿಕರ ವಿಶ್ವಾಸ ಸಂಪಾದಿಸಿ, ಮತ್ತು ಬರುವ ಔಷಧಿ ಬೆರೆಸಿದ ಕುರುಕಲು ತಿಂಡಿಗಳನ್ನು ನೀಡಿ ಪ್ರಯಾಣಿಕರಿಂದ ನಗ ನಗದು ದೋಚುತ್ತಿದ್ದ ಯುವಕನೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

31 ವರ್ಷದ ಬಂಧಿತ ಯುವಕ ರಾತ್ರಿ ಪ್ರಯಾಣದ ಬಸ್ಸು ಅಥವಾ ರೈಲುಗಳಲ್ಲಿ ಪ್ರಯಾಣ ಮಾಡುತ್ತ ಪ್ರಯಾಣಿಕರನ್ನು ವಂಚಿಸುತ್ತಿದ್ದ ಎಂದು ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಬುಧವಾರ ಸುದ್ದಿಗೋಷ್ಠಿಯಲ್ಲಿ ವಂಚಕನ ಬಂಧನದ ಬಗ್ಗೆ ಮಾಹಿತಿ ನೀಡಿದರು.

ವೈದ್ಯ, ಉದ್ಯಮಿ ಅಥವಾ ವಕೀಲನೆಂದು ತನ್ನನ್ನು ಪರಿಚಯಿಸಿಕೊಂಡು ಪ್ರಯಾಣಿಕರ ವಿಶ್ವಾಸ ಸಂಪಾದಿಸುತ್ತಿದ್ದ ಈ ಯುವಕ, ಸ್ವಲ್ಪ ಸಮಯದ ನಂತರ ಮಾದಕ ವಸ್ತು ಬೆರೆತ ಕಾಫಿ, ಟೀ ಅಥವಾ ಇತರ ತಿಂಡಿಗಳನ್ನು ಸಹ ಪ್ರಯಾಣಿಕರಿಗೆ ನೀಡುತ್ತಿದ್ದ . ಮಾದಕ ವಸ್ತುವಿನ ಪ್ರಭಾವದಿಂದ ಪ್ರಯಾಣಿಕರು ನಿದ್ದೆಯ ಮತ್ತಿಗೆ ಜಾರಿದಾಗ, ಅವರಿಂದ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ .

ಕಾಲೇಜೊಂದರಲ್ಲಿ ಉಪನ್ಯಾಸಕನೆಂದು ತನಿಖೆಯ ವೇಳೆ ತಿಳಿಸಿರುವ ಬಂಧಿತ ಯುವಕ, ತನ್ನ ಸಂಬಳ ಅತಿ ಕಡಿಮೆಯಾದುದರಿಂದ ಇಂತಹ ಕೃತ್ಯಗಳಲ್ಲಿ ತೊಡಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ ಪೊಲೀಸರು 2 ಲಕ್ಷ ರುಪಾಯಿ ಬೆಲೆ ಬಾಳುವ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಸಾಂಗ್ಲಿಯಾನ ತಿಳಿಸಿದ್ದಾರೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X