ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾರಿಕೆಯಿಂದ ಕೃಷಿ ಕ್ಷೇತ್ರದತ್ತ ವಾಲಿದ ‘ಹೊಸ ರಫ್ತು ಆಮದು ನೀತಿ’

By Oneindia Staff
|
Google Oneindia Kannada News

ನವದೆಹಲಿ : ಇನ್ನೈದು ವರ್ಷಗಳಲ್ಲಿ 80 ಶತಕೋಟಿ ಡಾಲರ್‌ ವಾರ್ಷಿಕ ರಫ್ತು ಗುರಿ ಸಾಧನೆಗಾಗಿ ರಫ್ತು ಅಭಿವೃದ್ಧಿ ಕಡೆಗೆ ಹೆಚ್ಚು ಗಮನಕೊಡುವ ಹೊಸ ರಫ್ತು-ಆಮದು ನೀತಿಯನ್ನು ಕೇಂದ್ರ ಕೈಗಾರಿಕಾ ಖಾತೆ ಸಚಿವ ಮುರಸೋಳಿ ಮಾರನ್‌ ಭಾನುವಾರ ಪ್ರಕಟಿಸಿದ್ದಾರೆ.

ಹೊಸ ರಫ್ತು- ಆಮದು ನೀತಿಯ ಮುಖ್ಯಾಂಶಗಳು :

  • ವಿಶೇಷ ಆರ್ಥಿಕ ವಲಯಗಳು ಅಂತರರಾಷ್ಟ್ರೀಯ ಸ್ಪರ್ಧೆಗೆ ಹೊಂದಿಕೊಳ್ಳುವಂತೆ ಇದೇ ಮೊದಲ ಬಾರಿಗೆ ಭಾರತೀಯ ಸಾಗರೋತ್ತರ ಬ್ಯಾಂಕುಗಳು ಈ ವಲಯದಲ್ಲಿ ಶಾಖೆ ಸ್ಥಾಪಿಸಲು ಅನುಮತಿ
  • ರಫ್ತು ಮೇಲಿದ್ದ ಎಲ್ಲ ಪ್ರಮಾಣವಾರು ನಿರ್ಬಂಧಗಳ ಪೂರ್ಣ ರದ್ದು
  • ವಿಶೇಷ ಆರ್ಥಿಕ ವಲಯಗಳಿಗೆ ಆಮದು ಪ್ರೋತ್ಸಾಹ ಕ್ರಮಗಳ ಹೆಚ್ಚಳ, ಮುಂಗಡ ಲೈಸನ್ಸ್‌ , ಹಾರ್ಡ್‌ವೇರ್‌ ವಲಯಕ್ಕೆ ಪ್ರೋತ್ಸಾಹ ಯೋಜನೆ
  • ಸಾಗಾಣಿಕಾ ವೆಚ್ಚ ಕಡಿಮೆ ಮಾಡಲು, ಕ್ಲಿಷ್ಟ ವಿಧಾನಗಳ ಸರಳೀಕರಣ
  • ಕರಕುಶಲ ವಸ್ತುಗಳ ಆಮದಿಗೆ ತೆರಿಗೆ ವಿನಾಯ್ತಿ
  • ವಿದೇಶಗಳಲ್ಲಿರುವ ಭಾರತೀಯ ದೂತವಾಸಗಳಲ್ಲಿ ವ್ಯಾಪರ ಕೇಂದ್ರಗಳ ಆರಂಭ
  • ಬ್ಯಾಂಕ್‌ ಗ್ಯಾರಂಟಿ ಸಹಿತ ಬರುವವರಿಗೆ ಪರಿಶೀಲನೆ ಇಲ್ಲದೆಯೇ ಲೈಸನ್‌ ನೀಡಿಕೆ, ಹೊಸ ರಫ್ತುದಾರರಿಗೆ ಮುಕ್ತ ಪರವಾನಗಿ
  • ಸೆಣಬು ಮತ್ತು ಈರುಳ್ಳಿ ಹೊರತುಪಡಿಸಿ ಇನ್ನಿತರ ಎಲ್ಲ ಬೀಜಗಳ ರಫ್ತಿನ ಮೇಲಿನ ನಿರ್ಬಂಧ ರದ್ದು
(ಇನ್ಫೋ ವಾರ್ತೆ)

ಹೊಸ ರಫ್ತುಆಮದು ನೀತಿಯ ಬಗ್ಗೆ ನೀವೇನು ಹೇಳುತ್ತೀರಿ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X