• search

ನಾನು ದೇಶ ಬಿಡುವುದಿಲ್ಲ, ಕೋಪದಿಂದ ಬಂದ ಮಾತದು- ಆಶಾ ಭೋಂಸ್ಲೆ

By oneindia staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮುಂಬಯಿ : ಕೋಪದಲ್ಲಿ ಆಡಿದ ಮಾತು ಇಷ್ಟೊಂದು ಪ್ರಕೋಪಕ್ಕೆ ಹೋಗುತ್ತದೆ ಅಂತ ನಾನು ಅಂದುಕೊಂಡಿರಲಿಲ್ಲ. ನನಗೆ ಅಪಾರ ಅಭಿಮಾನಿ ಬಳಗವನ್ನ, ಗೌರವವನ್ನ ಕೊಟ್ಟಿರುವ ದೇಶ ಬಿಟ್ಟು ಹೋಗಲಾದೀತೆ? ನಾನು ಭಾರತಾಂಬೆಯ ಮಗಳು. ಇಲ್ಲೇ ಇರುವೆ.

    ಪೆದ್ದರ್‌ ರಸ್ತೆಯಲ್ಲಿ ಫ್ಲೈಓವರ್‌ ಕಟ್ಟಿದರೆ ದುಬೈಗೆ ಹೋಗಿ, ನೆಲೆಯೂರುತ್ತೇನೆ ಅಂತ ಧಮಕಿ ಹಾಕಿದ್ದ ಆಶಾ ಭೋಂಸ್ಲೆ ಅವರ ನಿಲುವಿನ ಬದಲಾವಣೆಯಿದು.

    ಕೋಪದಲ್ಲಿ ಆಡಿದ ಮಾತುಗಳಿಗೆ ವಿಷಾದಿಸುತ್ತೇನೆ ಎಂದಿರುವ ಆಶಾ ಹೇಳಿರುವುದು ಹೀಗೆ...

    ನನ್ನ ಅಕ್ಕ ಲತಾ ನಾನಿರುವ ಪ್ರಭು ಕುಂಜ್‌ ಅಪಾರ್ಟ್‌ಮೆಂಟಿನ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಾಳೆ. ಅವಳನ್ನು ಬಿಟ್ಟು ದೂರ ಹೋಗಬೇಕಾದ ಪ್ರಸಂಗ ನೆನೆದು ಬೇಜಾರಾಯಿತು. ಅದಕ್ಕೇ ಕೋಪದಿಂದ ಊರು ಬಿಡುವ ಮಾತಾಡಿದೆನೇ ಹೊರತು ಯಾರಿಗೂ ನೋಯಿಸಬೇಕೆಂದಲ್ಲ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ- ಮಾತೃಭೂಮಿ ಸ್ವರ್ಗದ ಹಾದಿ. ಅದನ್ನು ಬಿಟ್ಟು ಹೋಗುವುದಕ್ಕೆ ನನ್ನ ಮನಸ್ಸೂ ಒಪ್ಪುವುದಿಲ್ಲ.

    ಬೇಸರವಾದಾಗ ತಾಯಿ, ಮನೆ- ಮಕ್ಕಳನ್ನು ಬಿಟ್ಟು ಹೋಗುವುದಾಗಿ ಹೇಳುತ್ತಾಳೆ. ಹಾಗೆಂದ ಮಾತ್ರಕ್ಕೆ ಅವಳು ಅದನ್ನು ಮಾಡಿಯೇ ತೀರುವಳೇ? ಮನೆ ಬಿಟ್ಟು ಬೋಗುವುದು ಅವಳ ಉದ್ದೇಶವಾಗಿರುವುದಿಲ್ಲ. ಅದು ಆ ಕ್ಷಣದ ನೋವಿನ ಅಭಿವ್ಯಕ್ತಿಯಷ್ಟೆ. ನಾನು ಹೇಳಿದ ಮಾತೂ ಕ್ಷಣ ಚಿತ್ತದಿಂದ ಬಂದಿದ್ದು. ಅದಕ್ಕೆ ಕಾರಣ- ಕ್ಷಣ ಪಿತ್ತ. ಕೋಪ ಹಾಗೆ ಮಾತಾಡಿಸಿತು. ನನ್ನ ದೇಶವನ್ನು, ಜನರನ್ನು ನಾನು ಬಿಟ್ಟು ಹೋಗುವುದಿಲ್ಲ.

    ಪೆದ್ದರ್‌ ರಸ್ತೆಯಲ್ಲಿ ಫ್ಲೈಓವರ್‌ ನಿರ್ಮಿಸುವ ಯೋಜನೆ ನನ್ನ, ಅಕ್ಕನ ಅಥವಾ ನಮ್ಮ ಬಂಧುಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ಈ ರಸ್ತೆಯಲ್ಲಿ ವಾಸಿಸುವ ಸಾವಿರಾರು ಜನರ ಮನಸ್ಸುಗಳೂ ನಮ್ಮಂತೆಯೇ ಇರುತ್ತವೆ. ಯೋಜನೆ ಜಾರಿಗೆ ತರುವಾಗ ಆ ಮನಸ್ಸುಗಳ ಭಾವನೆಗಳಿಗೆ ಸ್ಪಂದಿಸುವುದೂ ಮುಖ್ಯ.

    ಆಶಾ ಆಡಿದ್ದ ಮಾತಿಗೆ ಚಳವಳಿಕಾರರು ಕೆಂಡಕಾರಿದ್ದರು. ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ ಚಳವಳಿಕಾರ ಚಾಗನ್‌ ಭುಜ್‌ಬಾಲ್‌, ಆಶಾ ಅವರ ಮನೆ ಮುಂದೆ ಧರಣಿ ಕೂತಿದ್ದರು. ಅಷ್ಟೇ ಅಲ್ಲದೆ, ಆಶಾ ಹಾಗೂ ಲತಾ ಮಂಗೇಶ್ವರ್‌ ವಿರುದ್ಧ ಸ್ಲೋಗನ್ನುಗಳನ್ನು ಕೂಗಿದ್ದರು.

    ಕೆಲವರು ಹೇಳುತ್ತಿರುವ ಪ್ರಕಾರ ಈ ವಿಷಯ ಸಮಸ್ಯೆ ರೂಪು ಪಡೆಯಲು ಕೆಲವು ಅವಕಾಶವಾದಿ ರಾಜಕಾರಣಿಗಳ ಕುಮ್ಮಕ್ಕೂ ಇದೆ. ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ ನಾಯಕ ಶರದ್‌ ಪವಾರ್‌ ಹಾಗೂ ಲತಾ ಮಂಗೇಶ್ಕರ್‌ ನಡುವೆ ಒಳ್ಳೆಯ ಸ್ನೇಹವಿದ್ದೂ, ಅದೇ ಪಕ್ಷದವರು ಧರಣಿ ನಡೆಸಿದ್ದು ಯಾಕೆ ಎಂಬುದು ಯಕ್ಷಪ್ರಶ್ನೆ !

    (ಇನ್ಫೋ ವಾರ್ತೆ)

    ವಾರ್ತಾ ಸಂಚಯ

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more