ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳ್ಳೇಗಾಲ, ಬೋರಬಂಡಿ, ಚಾರ್ಮುಡಿ ಬಳಿ ರಸ್ತೆ ಅಪಘಾತ, 10 ಸಾವು

By Oneindia Staff
|
Google Oneindia Kannada News

ಬೆಂಗಳೂರು : ರಾಜ್ಯದ ವಿವಿಧೆಡೆಗಳಲ್ಲಿ ಸಂಭವಿಸಿರುವ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 10 ಮಂದಿ ನಿಧನರಾಗಿದ್ದು , ಇತರ 47 ಮಂದಿ ಗಾಯಗೊಂಡಿದ್ದಾರೆ.

ಗುಲ್ಬರ್ಗಾ ಜಿಲ್ಲೆಯ ಯಾದಗಿರ್‌ ಸಮೀಪದ ಬೋರಬಂಡಿ ಗ್ರಾಮದಲ್ಲಿ ಹಾರುಬೂದಿ ಹೊತ್ತೊಯ್ಯುತ್ತಿದ್ದ ಲಾರಿಯಾಂದು ಮಗುಚಿ ಬಿದ್ದು 5 ಮಂದಿ ದಾರುಣ ಸಾವಿಗೀಡಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು , ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.

ಕೊಳ್ಳೇಗಾಲ ಬಳಿ ನೀರಿಗೆ ಬಿದ್ದ ಬಸ್‌: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸಮೀಪ ಬಸ್ಸೊಂದು ಕೆರೆಗೆ ಬಿದ್ದು ಮೂವರು ಪ್ರಯಾಣಿಕರು ಸಾವಿಗೀಡಾದ ಹಾಗೂ 30 ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಇನ್ನೊಂದು ಅಪಘಾತ ಬೆಳ್ತಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಚಾರ್ಮುಡಿ ಗ್ರಾಮದ ಬಳಿ ಭಾನುವಾರ ಸಂಭವಿಸಿದ್ದು , ಮ್ಯಾಕ್ಸಿ ಕ್ಯಾಬೊಂದು ತಲೆ ಕೆಳಗಾದ ಪರಿಣಾಮ ಇಬ್ಬರು ಸಾವಪ್ಪಿದ್ದಾರೆ. ಈ ಅಪಘಾತದಲ್ಲಿ ಇತರ 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X