ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಮೇಲು ಈ ಮೇಲು ಫೋನೇ ಮೇಲು : ಈಗ ಟೋಲ್‌ಫ್ರೀ ಕೇಂದ್ರಗಳ ಸರದಿ!

By Oneindia Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Bangalore is also city of toll free centresಪ್ರಸಿದ್ಧ ಸಂಘಟನೆಯ ಅಧ್ಯಕ್ಷರ ಬಳಿ ನೀವು ಮಾತಾಡಬೇಕು. ವಾರ ಪೂರ್ತಿ ಶ್ರಮ ಹಾಕಿ ಪಿಎ ಬಳಿ ಅಪಾಯಿಂಟ್‌ಮೆಂಟ್‌ ತಗೊಂಡು ಆತನ ಮುಂದೆ ಕುಳಿತಿದ್ದೀರಿ. ಇನ್ನೇನು ನಾಲ್ಕು ಮಾತಾಡಿಲ್ಲ. ಆತನ ಕಿಸೆಯಲ್ಲಿದ್ದ ಮೊಬೈಲು ರಿಂಗಣಿಸುತ್ತದೆ. ಯಾವುದೋ ಪ್ರತಿಭಟನೆ, ತನ್ನ ಅಭಿಪ್ರಾಯ... ಹೀಗೆ ಮಾತಾಡಿ ಫೋನ್‌ ಕಿಸೆಗಿಳಿಸುತ್ತಾನೆ. ಪ್ರೆಸ್ಸಿನವರು.. ಅಂತ ಹೇಳುತ್ತ ಮತ್ತೆ ಮಾತಿಗಾರಂಭಿಸಿದರೆ, ಮೇಜಿನ ಮೇಲಿದ್ದ ಕಪ್ಪು ಫೋನ್‌ ಮತ್ತೆ ಟಿಣಿ ಟಿಣಿಗುಟ್ಟುತ್ತದೆ...ಹೌದಾ.. ಮೇಯ್ಲ್‌ ಮಾಡಿದ್ದೀರಾ... ಸರಿಸರಿ ಅಂತ ಹೇಳುತ್ತಾನೆ.

ಜಗತ್ತಿನ ಯಾವ ಮೂಲೆಯಿಂದ ಯಾವ ಮೂಲೆಗೆ ಸಂಪರ್ಕ ಸಾಧಿಸಿದರೂ ಒಂದೇ ರೀತಿ ಬಿಲ್‌ ತೋರಿಸುವ ಈ ಮೇಯ್ಲ್‌, ಸ್ಪೀಡ್‌ ಪೋಸ್ಟ್‌, ಕೊರಿಯರ್‌ಗಳು...ಮಾನಿಟರ್‌ ಮೇಲೆಯೇ ಪಟ್ಟಾಂಗ ಹೊಡೆಯುವ ಮೆಸೆಂಜರ್‌ಗಳು... ಹೀಗೆ ಅತ್ಯಾಧುನಿಕ ಸಂಪರ್ಕ ಮಾಧ್ಯಮಗಳು ಬಂದರೂ ಫೋನ್‌ ಮಾತ್ರ ತನ್ನ ಗಾಂಭೀರ್ಯ ಕಳೆದುಕೊಂಡಿಲ್ಲ.

ದೂರದ ದೇಶದಲ್ಲಿರುವ ಮಗನಿಂದ ಎರಡು ದಿನಕ್ಕೊಮ್ಮೆ ಪತ್ರ ಬರುತ್ತದೆ. ಮೇಯ್ಲ್‌ ಮಾಡುತ್ತಾನೆ. ಆದರೂ ಮಧ್ಯರಾತ್ರಿಯಲ್ಲಿ ಕಿಣಿಕಿಣಿಸುವ ಫೋನ್‌ನಲ್ಲಿ ಆತನ ಸ್ವರ ಕೇಳಿದಾಗಲೇ ಅಮ್ಮನಿಗೆ ನೆಮ್ಮದಿ. ಚೆನ್ನಾಗಿದ್ದಾನೆ ಸದ್ಯ ಅನ್ನುವ ನಿಟ್ಟುಸಿರು.... ಫೋನ್‌ ಮಹಾತ್ಮೆ ಅಂತಹುದು.

ಗ್ರಾಹಕ ಸ್ನೇಹಿ ಟೋಲ್‌ಫ್ರೀ ಕೇಂದ್ರಗಳು

ಈ -ಶಾಪಿಂಗ್‌ ಎಂಬ ಕ್ರಾಂತಿ ಗ್ರಾಹಕ ಮಾರುಕಟ್ಟೆಗೆ ಧಾಳಿಯಿಟ್ಟಿದ್ದರೂ, ಮಾಲು ತಲುಪಿತು ಥ್ಯಾಂಕ್ಸ್‌ ಅಂತ ಹೇಳಲು, ಆರ್ಡರ್‌ ಮಾಡಿ ಮೂರು ದಿನವಾಯಿತು.. ಇನ್ನೂ ಏಕೆ ಕಳಿಸಿಲ್ಲ ಎಂದು ಕೇಳಲು, ನೀವು ಕೊಟ್ಟಿರುವ ಲಿಸ್ಟ್‌ಗಿಂತ ಭಿನ್ನವಾದ ಹೂಗುಚ್ಛವನ್ನು ಮಾಡಿಕೊಡಲಾಗದೇ? ಎಂದು ವಿನಂತಿಸಲು ಫೋನ್‌ ಮಹರಾಯನೇ ಬೇಕಲ್ಲವೇ...?

ಈ ರೀತಿಯ ಫೋನ್‌ ಮಹಾತ್ಮೆಯನ್ನು ಅರಿತುಕೊಂಡೇ ಬೆಂಗಳೂರಿನಲ್ಲಿ ಸಾಕಷ್ಟು ಟೋಲ್‌ ಫ್ರೀ ಸೆಂಟರ್‌ಗಳು ಹುಟ್ಟಿಕೊಂಡಿವೆ. ನೀವು ಮಾಡಿದ ಕರೆಗೆ ನೀವು ಬಿಲ್‌ತೆರಬೇಕಾಗಿಲ್ಲ. ರಿಸೀವ್‌ ಮಾಡಿದವರೇ ಬಿಲ್‌ ತೆರುತ್ತಾರೆ.

ದೇಶದಲ್ಲಿಯೇ ಹೆಚ್ಚು ಟೋಲ್‌ಫ್ರೀ ಸೆಂಟರ್‌ಗಳನ್ನು ಹೊಂದಿರುವ ನಗರ ಬೆಂಗಳೂರು ಅಂತ ಬಿಎಸ್‌ಎನ್‌ಎಲ್‌ ಹೇಳಿದೆ. 75 ನೋಂದಾಯಿತ ಟೋಲ್‌ ಫ್ರೀ ಸೆಂಟರ್‌ಗಳು ನಗರದಲ್ಲಿ ಕೆಲಸ ಮಾಡುತ್ತಿವೆ. ಮುಂಬೈ ಮತ್ತು ದೆಹಲಿ ನಗರದಲ್ಲಿಯೂ ಟೋಲ್‌ಫ್ರೀ ಸೆಂಟರ್‌ಗಳ ಸಂಖ್ಯೆ ಕಡಿಮೆಯೇನಿಲ್ಲ. ಗ್ರಾಹಕರ ಸ್ನೇಹ ಸಂಪಾದಿಸ ಬಯಸುವ ಎಲ್ಲ ಉದ್ಯಮಗಳೂ ಟೋಲ್‌ಫ್ರೀ ಸೆಂಟರ್‌ಗಳನ್ನು ಸ್ಥಾಪಿಸುತ್ತಿವೆ.

ಹೋಟೆಲ್‌ ರೂಂ ಬುಕ್‌ ಮಾಡಬೇಕಿತಾ್ತ ?

ತಂತ್ರಜ್ಞಾನ ಬೆಳೆದಂತೆ ದೂರವಾಣಿ ಕರೆಗಳಿಗೆ ವಿಧಿಸುವ ಶುಲ್ಕವೂ ಕಡಿಮೆಯಾಗುತ್ತಿರುವುದರಿಂದ ಟೋಲ್‌ಫ್ರೀ ಸೆಂಟರ್‌ಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಬೆಂಗಳೂರು ಟೆಲಿಕಾಂನ ಮ್ಯಾನೇಜರ್‌ ವಿ. ಶ್ರೀನಿವಾಸ್‌ ಹೇಳುತ್ತಾರೆ. ಈ ನಂಬರುಗಳು 1600 ಯಿಂದ ಆರಂಭವಾಗುತ್ತಿದ್ದು, ಗ್ರಾಹಕರು, ಉದ್ಯೋಗಾರ್ಥಿಗಳು, ರೋಗಿಗಳು, ತೂಕ ಇಳಿಸಿಕೊಳ್ಳಬಯಸುವವರು.... ಹೀಗೆ ತರಾವಳಿ ಟೋಲ್‌ಫ್ರೀ ನಂಬರ್‌ಗಳಿವೆ.

ನೀವು ಸಕ್ಕರೆ ಕಾಯಿಲೆಯವರೇ, ನಿಮ್ಮ ಆಹಾರ ವಿಹಾರದ ಬಗೆಗಿನ ಸಲಹೆಗಳಿಗಾಗಿ 1600-44-3838.
ನಿಮ್ಮ ಮನೆಗೆ ಹಾಕಿಸುವ ಟೈಲ್ಸ್‌ನಲ್ಲಿ ಚಿತ್ರ ಚಿತ್ತಾರಗಳು ಬೇಕೇ...1600-44-9999
ಸಾಫ್ಟ್‌ವೇರ್‌ ಇಂಜಿನಿಯರ್ರಾ. ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ... 1600-44-4928
ಹೋಟೆಲ್‌ ರೂಂ ಬುಕ್‌ ಮಾಡಬೇಕಿತ್ತಾ -1600-44-7666
ಇಲ್ಲೊಂದು ನಂಬರ್‌ ಇದೆ. 1600-44-4444. ಈತ ರಮೇಶ್‌ ಷಾ. ಬಡ ಕ್ಯಾನ್ಸರ್‌ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾನೆ. ಈ ರೋಗಿಗಳ ಬಗ್ಗೆ ಡಾಕ್ಟರು ಕೈಚೆಲ್ಲಿದ್ದಾರೆ. ಬಂಧುವನ್ನು ನೋಡಿಕೊಳ್ಳುವ ತಾಕತ್ತಿಲ್ಲದವರು ಈತನ ಬಳಿ ರೋಗಿಯನ್ನು ಶುಶ್ರೂಷೆಗಾಗಿ ಸೇರಿಸಿದ್ದಾರೆ. ಆದರೆ ಇದು ಟೋಲ್‌ ಫ್ರೀ ಸೆಂಟರ್‌ ಅಲ್ಲ.

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X