• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎನ್ನ ನಾಲಿಗೆ ತೊಡರ ಬಿಡಿಸವ್ವಾ... ಜಾನಪದ ಭಾಗೀರಥಿಯೇ...

By oneindia staff
|

ಬೆಂಗಳೂರು : ಮಾತಿನಿಂದ ಸಾಧ್ಯವಾಗದ ಅನೇಕ ಕಷ್ಟಕರ ಭಾವನೆಗಳನ್ನು ಜಾನಪದ ಯಶಸ್ವಿಯಾಗಿ ಕಟ್ಟಿಕೊಡುವ ಸಾಮರ್ಥ್ಯ ಹೊಂದಿದೆ. ಎನ್ನ ನಾಲಿಗೆ ತೊಡರ ಬಿಡಿಸವ್ವಾ ಎನ್ನುವ ಗೀತೆಯೇ ಜಾನಪದದ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಯು.ಆರ್‌.ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಾಹಿತ್ಯದ ಮೂಲ ಸೆಲೆಯಾದ ಜಾನಪದ ಹಾಡುಗಾರಿಕೆ ಆಂದೋಲನವಾಗಿ ಬೆಳೆಯಬೇಕು. ಜಾನಪದದ ಬೆಂಬಲ ಇಲ್ಲದಿದ್ದರೆ ಕನ್ನಡ ಸಾಹಿತ್ಯ ಇಷ್ಟೊಂದು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್‌.ಜಿ. ಸಹೋದರಿಯರ ನಾಡಪದಗಳು ಧ್ವನಿ ಸುರುಳಿ ಹಾಗೂ ಸಿ.ಡಿ. ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅನಂತಮೂರ್ತಿ ಹೇಳಿದರು.

ಪ್ರಸ್ತುತದ ಸಂಗೀತ ಪರಿಣತರು ಮಾತ್ರ ಹಾಡುವಂತಿದೆ. ಆದರೆ ಸಾಮಾನ್ಯರೂ ಹಾಡಿಕೊಳ್ಳುವಂತೆ ಸಂಗೀತ ಇರಬೇಕು ಎಂದು ಅಭಿಪ್ರಾಯಪಟ್ಟ ಅನಂತಮೂರ್ತಿ, ಜಾನಪದ ಸಂಗೀತದಲ್ಲಿ ಮಾತು ಮೊದಲು ಸಂಗೀತ ಆನಂತರ ಎಂದರು.

ಕೆಲವರು ತಮ್ಮದೇ ಧಾಟಿಗಳನ್ನು ಹುಡುಕಿಕೊಂಡು ಜಾನಪದದ ಮೂಲ ಧಾಟಿಗಳನ್ನು ಮರೆ ಮಾಚುತ್ತಿರುವುದಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಾನಪದ ವಿದ್ವಾಂಸ ಮತಿಗಟ್ಟ ಕೃಷ್ಣಮೂರ್ತಿ ತೀವ್ರ ವಿಷಾದ ವ್ಯಕ್ತಪಡಿಸಿದರು. ಪಂಪ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಎ.ಎನ್‌.ಮೂರ್ತಿರಾವ್‌ ಹಾಗೂ ಲಹರಿ ಕ್ಯಾಸೆಟ್‌ ಸಂಸ್ಥೆಯ ತುಳಸಿ ನಾಯ್ಡು ಮಾತನಾಡಿದರು. ಎಲ್‌ಜಿ ಸಹೋದರಿಯರಾದ ಡಾ।ಎಲ್‌.ಜಿ.ಸುಮಿತ್ರಾ, ವಿಮಲಾ ರಾಜಗೋಪಾಲ್‌ ಮತ್ತು ಕಮಲ ಎಂ.ಎಸ್‌.ಬಾಲು ಜಾನಪದ ಗೀತೆಗಳನ್ನು ಹಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more