ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತಿಗೀಗ ಕುತ್ತು ! ಮುತ್ತು ನಿಷೇಧಿತ ವಲಯವಾಗಿ ಪುಣೆ ವಿವಿ ಕ್ಯಾಂಪಸ್‌!

By Oneindia Staff
|
Google Oneindia Kannada News

No kiss in the Pune University Campus!‘ಮುತ್ತು ಕೊಟ್ಟೀರಿ ಜೋಕೆ’ ಎಂದು ಪುಣೆಯ ವಿಶ್ವ ವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಪಾಪ, ಈ ಹುಡುಗ ಹುಡುಗಿಯರು ಮುತ್ತು ಕೊಟ್ಟಕೊಳ್ಳಬೇಕೆಂದರೆ, ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಿಂದ ದೂರ ಹೋಗಬೇಕು. ವಿಶ್ವ ವಿದ್ಯಾಲಯದ 411 ಎಕರೆ ಪ್ರದೇಶವೀಗ ಮುತ್ತು ನಿಷೇಧಿತ ಪ್ರದೇಶ! ಮುತ್ತಿಗಿಲ್ಲಿ ಕುತ್ತು ! ಅರ್ಥಾತ್‌ ಪ್ರೇಮಿಗಳಿಗೆ ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಿಷೇಧ!

ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆಯೇ ಹೊರತು, ಪ್ರೇಮ ವ್ಯವಹಾರಗಳಿಗೆ ಆಸ್ಪದವೇ ಇಲ್ಲ ಎನ್ನುವುದು ವಿ.ವಿ. ಆಡಳಿತ ಮಂಡಳಿಯ ಪಟ್ಟು . ಬಹಿರಂಗವಾಗಿ ಮುತ್ತು ಕೊಡುವವರನ್ನು ಕಂಡರಂತೂ ಆಡಳಿತ ಮಂಡಳಿಗೆ ಕೆಂಡಾ ಮಂಡಲ ಕೋಪ. ಆದರೇನು ಮಾಡುವುದು : ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ ಎಂದು ಹಾಡಿದರೆ ಕಿವಿಗೊಡುವ ವಿದ್ಯಾರ್ಥಿಗಳು ಈಗಿಲ್ಲ . ಆ ಕಾರಣದಿಂದಾಗಿಯೇ ಆಡಳಿತ ಮಂಡಳಿ ಮುತ್ತನ್ನು ನಿಷೇಧಿಸಿದೆ; ವಿ.ವಿ. ಕ್ಯಾಂಪಸ್‌ನಲ್ಲಿ ಮುತ್ತಿಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಮುತ್ತಿಡುವುದು, ಮುದ್ದಾಡುವುದು ವಿಶ್ವ ವಿದ್ಯಾಲಯದ ಘನತೆಗೆ ತಕ್ಕುದಲ್ಲ . ವಿ.ವಿ. ಆದೇಶ ಮೀರಿ ಯಾರಾದರೂ ಮುತ್ತಿನ ಮತ್ತಿನಲ್ಲಿ ಜಾರಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಮುತ್ತು ವಿರೋಧಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಅಶೋಕ್‌ ಕೊಲಾಸ್ಕರ್‌.

ವಿದ್ಯಾರ್ಥಿಗಳ ಮಾತು ಬಿಡಿ, ಸಾರ್ವಜನಿಕರ ಚೇಷ್ಟೆಯೂ ಜಾಸ್ತಿಯಾಗಿದೆ. ಹೊರಗಿನಿಂದ ಬರುವ ಅನೇಕ ಜೋಡಿಗಳು ವಿಶ್ವ ವಿದ್ಯಾಲಯ ಕ್ಯಾಂಪಸ್‌ನಲ್ಲಿ ಮುತ್ತು ಕೊಡುವುದು ಹಾಗೂ ಅಪ್ಪಿಕೊಳ್ಳುವ ಕ್ರಿಯೆಗಳಲ್ಲಿ ತೊಡಗುತ್ತಾರೆ. ಕ್ಯಾಂಪಸ್‌ನ ಹಸಿರು ಇವರಿಗೆಲ್ಲ ಉಪಯುಕ್ತವಾಗಿದೆ. ಇನ್ನು ಮುಂದೆ ಇವರಿಗೆಲ್ಲ ಅವಕಾಶವಿಲ್ಲ ಎಂದು ಕೊಲಾಸ್ಕರ್‌ ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ.

ಕೊಲಾಸ್ಕರ್‌ ಅವರ ಮಾತನ್ನು ಸಮರ್ಥಿಸುವ ವಿಶ್ವ ವಿದ್ಯಾಲಯದ ಸಿಬ್ಬಂದಿಯಾಬ್ಬರು- ಕ್ಯಾಂಪಸ್‌ನಲ್ಲಿನ ಮರ, ಲಾನ್‌ ಹಾಗೂ ಏಕಾಂತದ ಸ್ಥಳಗಳು ದುರುಪಯೋಗವಾಗುತ್ತಿರುವ (ವಿಶೇಷವಾಗಿ ಕತ್ತಲಲ್ಲಿ) ಕುರಿತು ವಿಷಾದಿಸುತ್ತಾರೆ.

ಇತ್ತೀಚೆಗೆ ಢಾಕಾ ವಿಶ್ವ ವಿದ್ಯಾಲಯ ಕೂಡ ತನ್ನ ಕ್ಯಾಂಪಸ್‌ನಲ್ಲಿ ಮುತ್ತು - ಮುದ್ದು ಎರಡರ ಕುರಿತು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತ್ತು . ಆದರೆ, ನೆರೆಯ ಚೀನಾದಲ್ಲಿ ನೋಡಿ ; ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕಾಂಡೋಮ್‌ ಮಾರಾಟ ಯಂತ್ರವನ್ನು ಇರಿಸಲಾಗಿದೆ. ಪ್ರಗತಿಯೋ? ವಿಗತಿಯೋ?

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X