• search

ಮುಂಬಯಿಗೆ ನಾನು ಬೇಕೋ ಅಥವಾ ಫ್ಲೈಓವರ್ರೋ: ಆಶಾ ಭೋಂಸ್ಲೆ ಸವಾಲು

By oneindia staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    *ಇನ್ಫೋ ಇನ್‌ಸೈಟ್‌

    ಪೆದ್ದರ್‌ ರಸ್ತೆಯಲ್ಲಿ ಫ್ಲೈಓವರ್‌ ಕಟ್ಟಿದರೆ ನಾನು ಮುಂಬಯಿಯಲ್ಲಿ ವಾಸ ಮಾಡೋದಿಲ್ಲ. ದುಬೈಗೆ ಹೋಗಿಬಿಡ್ತೀನಿ. ಮುಂಬಯಿಗೆ ನಾನು ಬೇಕೋ ಅಥವಾ ಫ್ಲೈಓವರ್ರೋ?!
    ಬಾಲಿವುಡ್‌ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಸ್ಥಳೀಯ ಸರ್ಕಾರಕ್ಕೆ ಎಸೆದಿರುವ ಸವಾಲಿದು. ಫ್ಲೈಓವರ್‌ ಕಟ್ಟಿದರೆ, ಮನೆ ಬದಲಿಸಬೇಕಾಗುತ್ತದೆ. ಅಕ್ಕಂದಿರು, ನೆಂಟರಿಷ್ಟರು ನನಗೀಗ ತೀರಾ ಹತ್ತಿರ. ಅವರನ್ನು ಬಿಟ್ಟು ದೂರ ಹೋಗುವುದರಿಂದ ನನ್ನ ಸಾಂಸ್ಕೃತಿಕ ಜೀವನ ಏರುಪೇರಾಗುತ್ತದೆ ಅನ್ನುವುದು ಆಶಾ ಅವರ ದೂರು.

    ಆದರೆ ಪೆದ್ದರ್‌ ರಸ್ತೆಯಲ್ಲಿ ವಾಸಿಸುತ್ತಿರುವ ಕೆಲವು ನಾಗರಿಕರು ಆಶಾ ಅವರ ಈ ಮಾತು ಕೇಳಿ ನಗುತ್ತಿದ್ದಾರೆ. ಇನ್ನು ಕೆಲವರು ಒಬ್ಬ ಒಳ್ಳೆ ಗಾಯಕಿ ಊರನ್ನೇ ಬಿಟ್ಟು ಹೋಗೋಕೆ ಕಾರಣವಾಗೋ ಫ್ಲೈಓವರ್‌ ಯಾಕೆ ಬೇಕು ಅಂತ ಅಭಿಮಾನ ತೋರಿಕೋತ ಇದ್ದಾರೆ. ಆದರೆ ಸಿನಿಮಾ ಮಂದಿ ಮತ್ತು ಚಳವಳಿಕಾರರು, ಒಬ್ಬರ ವೈಯಕ್ತಿಕ ಕಾರಣಗಳಿಗಾಗಿ ಒಂದು ಬಹುಜನೋಪಯೋಗಿ ಯೋಜನೆ ಕೈಬಿಡುವುದರಲ್ಲಿ ಅರ್ಥವಿಲ್ಲ ಎನ್ನುತ್ತಿದ್ದಾರೆ.

    ಆಶಾ ಮೊಂಡು ಹಿಡಿದು ಕೂತಿದ್ದರೆ, ಕೆಲವರು ಮಾತಿಗೆ ತೊಡಗಿದ್ದಾರೆ. ಬಾಲಿವುಡ್‌ನ ಸದ್ಯದ ಚರ್ಚೆಯ ವಸ್ತು ಕೂಡ ಇದೇ. ಕೆಲವರ ಮಾತುಗಳನ್ನು ಕೇಳೋಣ ಬನ್ನಿ...

    • ಆಶಾ ಭೋಂಸ್ಲೆ ಅಂಥವರು ಹೀಗೆ ವೈಯಕ್ತಿಕ ಕಾರಣ ಕೊಟ್ಟು ಒಂದು ದೊಡ್ಡ ಯೋಜನೆಗೆ ಅಡ್ಡ ನಿಲ್ಲುವುದು ಅವರನ್ನು ಚಿಕ್ಕವರನ್ನಾಗಿಸುತ್ತದೆ- ಬಾಲಿವುಡ್‌ ನಿರ್ದೇಶಕ ಮಹೇಶ್‌ ಭಟ್‌.
    • ಸರ್ಕಾರ ಹಾಗೂ ಆಶಾ ಭೋಂಸ್ಲೆ ಇಬ್ಬರಿಗೂ ಶೋಭೆ ತರುವ ವಿಷಯ ಇದಲ್ಲ. ಒಂದು ಫ್ಲೈಓವರನ್ನು ಒಬ್ಬರ ವೈಯಕ್ತಿಕ ಕಾರಣಗಳಿಗಾಗಿ ಕಟ್ಟುವುದೋ ಬೇಡವೋ ಎಂದು ಯೋಚಿಸುವುದು ಸರ್ಕಾರದ ದಡ್ಡತನ. ನೆಂಟರಿಷ್ಟರ ಸಂಪರ್ಕದ ಕಾರಣಕ್ಕೆ ಯೋಜನೆಯಾಂದಕ್ಕೆ ಅಡ್ಡ ನಿಲ್ಲುವುದು ಆಶಾ ಅವರ ಅಧಿಕ ಪ್ರಸಂಗ- ‘ಅಗ್ನಿ’ ಸಂಸ್ಥೆಯ ಸದಸ್ಯ ಗರ್ಸನ್‌ ಡಾ ಕುನ್ಹ.
    • ಆಶಾ ಅವರದ್ದು ಪಲಾಯನ ವಾದ. ಫ್ಲೈಓವರ್‌ ಬೇಡ ಎಂಬುದಕ್ಕೆ ಆ ಯೋಜನೆಯ ಜನ ವಿರೋಧಿ ಅಂಶಗಳನ್ನು ಅವರು ಕಾರಣವಾಗಿ ಕೊಡಬೇಕು. ಅಂಥಾ ಕಾರಣಗಳಿದ್ದರೆ ಪ್ರತಿಭಟಿಸಲಿ. ಅದು ಬಿಟ್ಟು ಊರು ಬಿಟ್ಟು ಹೋಗುತ್ತೇನೆ ಅಂತ ಹೆದರಿಸುವುದು ತರವಲ್ಲ- ಆಶಾ ಅವರ ಮನೆಯ ಹತ್ತಿರದ ನಿವಾಸಿ.
    • ಸಂಗೀತ ನಿರ್ದೇಶಕ ನದೀಂ ಲಂಡನ್ನಿನಲ್ಲಿದ್ದುಕೊಂಡೇ ಬಾಲಿವುಡ್‌ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿಲ್ಲವೇ? ಆಶಾ ಅವರೂ ದುಬೈನಲ್ಲಿ ನೆಲೆ ನಿಂತು, ಹಿಂದ ಚಿತ್ರಗಳಿಗೆ ಹಾಡು ಹಾಡಬಹುದು. ಇದನ್ನು ಸರ್ಕಾರ ಬೆದರಿಕೆ ಅಂತ ಪರಿಗಣಿಸುವುದೇ ತಪ್ಪು- ಮುಂಬಯಿಯ ಚಳವಳಿಕಾರ.
    ಈ ಯೋಜನೆಗಳೇ ಹೀಗೆ. ಮನೆ ಕಳಕೊಳ್ಳುವವರಿಗೆ ಚಿಂತೆ; ಅದರಲ್ಲೂ ಮುಂಬಯಿಯಂಥಾ ಗಜಿಬಿಜಿ ನಗರಿಯಲ್ಲಿ. ಕೆಲವು ಚಳವಳಿಕಾರರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ಕಾರಣ- ಸಾಕಷ್ಟು ಕಟ್ಟಡಗಳು, ಮರಗಳು ಉರುಳುತ್ತವೆಂಬುದು, ನೆಂಟರಿಷ್ಟರು ದೂರವಾಗುತ್ತಾರೆಂದಲ್ಲ. ಆದರೆ ಸರ್ಕಾರಕ್ಕೆ ತಲೆನೋವಾಗಿರುವುದು ಈ ಚಳವಳಿಕಾರರಲ್ಲ, ಊರು ಬಿಡುತ್ತೇನೆಂದು ಧಮಕಿ ಹಾಕಿರುವ ಆಶಾ ಭೋಂಸ್ಲೆ !

    ಆಶಾ ಅವರ ಹಠ ಅರ್ಥಪೂರ್ಣವಾದದ್ದೇ?

    ಆಶಾ ಭೋಂಸ್ಲೆ ಕುರಿತು ಇನ್ನಷ್ಟು.....
    ಆಶಾಭೋಂಸ್ಲೆ ಮಾದಕ ಕಂಠಕ್ಕೆ ಸಂದಾಯವಾದ ದಾದಾ ಫಾಲ್ಕೆ ಪ್ರಶಸ್ತಿ
    ಸಿತಾರ್‌ ಕಾಲದಿಂದ ಜಾಸ್‌ ಕಾಲಕ್ಕೂ ಸಲ್ಲುವ ಆಶಾ ಭೋಂಸ್ಲೆ
    ಕನ್ನಡ ಹಿನ್ನೆಲೆ ಗಾಯನಕ್ಕೆ ಆಶಾ, ಲತಾ

    ಮುಖಪುಟ / ಲೋಕೋಭಿನ್ನರುಚಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more