ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯ ಪಾಸ್‌ಪೋರ್ಟ್‌ ಅರ್ಜಿ ಶುಲ್ಕ- ಏಪ್ರಿಲ್‌ 1ರಿಂದ 1000 ರು.

By Oneindia Staff
|
Google Oneindia Kannada News

ಮುಂಬಯಿ : ಪಾಸ್‌ಪೋರ್ಟ್‌ ಅರ್ಜಿ ಶುಲ್ಕವನ್ನು 1000 ರುಪಾಯಿಗಳಿಗೆ ಏರಿಸಲಾಗಿದ್ದು, ಇದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

ಸಾಮಾನ್ಯ ಪಾಸ್‌ಪೋರ್ಟ್‌ (36 ಪುಟಗಳು) ಅರ್ಜಿಯ ಈಗಿನ ಬೆಲೆ 300 ರುಪಾಯಿ. ಏಪ್ರಿಲ್‌ 1ರಿಂದ ಇದಕ್ಕೆ ಹೆಚ್ಚುವರಿ 700 ರುಪಾಯಿ ತೆರಬೇಕು ಎಂದು ಕೇಂದ್ರ ಸರ್ಕಾರ ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಪರಿಷ್ಕೃತವಾಗಿರುವ ಇತರೆ ಪಾಸ್‌ಪೋರ್ಟ್‌ ಅರ್ಜಿ ದರಗಳು ಹೀಗಿವೆ- 60 ಪುಟಗಳ ಜಂಬೋ ಪಾಸ್‌ಪೋರ್ಟ್‌ ಅರ್ಜಿ ಬೆಲೆ 1500 ರುಪಾಯಿ. ಮಕ್ಕಳ ಸಾಮಾನ್ಯ ಪಾಸ್‌ಪೋರ್ಟ್‌ ಅರ್ಜಿ ದರ 600 ರುಪಾಯಿ.

2001ನೇ ಇಸವಿಯಲ್ಲಿ ಒಟ್ಟು 27.80 ಪಾಸ್‌ಪೊರ್ಟ್‌ಗಳನ್ನು ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X