• search

ವಿಧಾನಸಭೆಯಲ್ಲಿ ಎಸ್‌.ಎಂ.ಕೃಷ್ಣ ಪದೇಪದೇ ತಮ್ಮ ವಯಸ್ಸು ಹೇಳಿಕೊಂಡದ್ದೇಕೆ?

By oneindia staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಹಠಾತ್ತನೆ ವಯಸ್ಸಿನ ಬಿಸಿ ತಟ್ಟ ತೊಡಗಿದೆಯೇ? ಅದೇನೇ ಇರಲಿ, ಗುರುವಾರ ವಿಧಾನಸಭೆಯ ಬಜೆಟ್‌ ಮೇಲಿನ ಚರ್ಚೆ ವೇಳೆ ಪದೇ ಪದೇ ತಮ್ಮ ವಯಸ್ಸು ಹಾಗೂ ಹೆಂಡತಿಯನ್ನು ಕೃಷ್ಣ ನೆನಪಿಸಿಕೊಂಡದ್ದು ವಿಶೇಷ.

    ಮದ್ಯ ನಿಷೇಧದ ವಿಷಯ ಬಂದಾಗ, ‘ನಾನು ನನ್ನ ಜೀವನದ ಕೊನೆ ಹಂತದಲ್ಲಿದ್ದೇನೆ. 1962ರಿಂದ ಚುನಾವಣೆಗಳನ್ನು ನೋಡಿದ್ದೇನೆ. ಅಂದಿಗೂ ಇಂದಿಗೂ ಹೆಂಡ ಹಂಚುವಿಕೆಯಲ್ಲಿ ಆಗಿರುವ ಬದಲಾವಣೆಯನ್ನು ನಾನು ಅಂದಾಜು ಮಾಡಬಲ್ಲೆ. ಅದು ವಿಧಾನಸಭಾ ಉಪ ಚುನಾವಣೆಯಾಗಿರಲಿ, ಲೋಕಸಭೆ ಚುನಾವಣೆಯಾಗಿರಲಿ ಅಥವಾ ಕಾರ್ಪೊರೇಷನ್‌ ಚುನಾವಣೆಯಾಗಿರಲಿ. ಹೆಂಡ ಹರಿಯುವುದು ಗ್ಯಾರಂಟಿ’ ಎಂದರು.

    ರಾಜ್ಯದ ಹಣಕಾಸು ಸ್ಥಿತಿಯ ಆರೋಗ್ಯದ ಬಗ್ಗೆ ಪ್ರಸ್ತಾಪವಾದಾಗ, ನೀವು ನನ್ನ ವಯಸ್ಸು ಹಾಗೂ ಆರೋಗ್ಯವನ್ನು ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಅಥವಾ ಸಂಯುಕ್ತ ಜನತಾ ದಳದ ಪಿಜಿಆರ್‌ ಸಿಂಧ್ಯ ಜೊತೆ ಹೋಲಿಸುವುದು ತರವಲ್ಲ. ಅವರು ನನಗಿಂತ ವಯಸ್ಸಿನಲ್ಲಿ ಕನಿಷ್ಠ 20 ವರ್ಷ ಚಿಕ್ಕವರು. ನನ್ನನ್ನು ನನ್ನ ವಯಸ್ಸಿನವರ ಜೊತೆ ಹೋಲಿಸಿ’ ಎಂದು ಕೃಷ್ಣ ಹೇಳಿದರು.

    ಸಂಪನ್ಮೂಲಗಳ ಬಳಕೆಗೆ ಸೂಕ್ತ ನಿಧಿಯ ಕೊರತೆಯ ಮಾತುಕತೆ ವೇಳೆ ಕೃಷ್ಣ ನೆನಪಿಸಿಕೊಂಡದ್ದು ತಮ್ಮ ಹೆಂಡತಿಯನ್ನು. ‘ಮದುವೆಯಾದ ಹೊಸದರಲ್ಲಿ ನನ್ನ ಹೆಂಡತಿ ಅಡುಗೆಮನೆಗೆ ಬೇರೆ ಬೇರೆ ಸೈಜ್‌ನ ಪಾತ್ರೆಗಳು, ಕಪ್‌ ಹಾಗೂ ಸಾಸರ್‌ಗಳನ್ನು ತಂದುಕೊಡಿ ಅಂತ ಕೇಳಿದಾಗ ಅದನ್ನು ಕೊಡಿಸಲು ಆಗಲಿಲ್ಲ. ಏನು ಮಾಡೊಕಾಗುತ್ತೆ?’ ಎಂದಾಗ ಸಭೆಯಲ್ಲಿ ನಗು.

    ರಾಜ್ಯದ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಿದೆ. ಇದಕ್ಕೆ ಸರ್ಕಾರ ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನೆ ಎದ್ದಾಗಲೂ ಕೃಷ್ಣ ತಮ್ಮ ಮದುವೆಯ ಮೊದಲ ದಿನಗಳನ್ನು ಮೆಲುಕು ಹಾಕಿದರು. ಈ ಪ್ರಸಂಗದಲ್ಲಿ ತೀರ್ಥಹಳ್ಳಿಯ ಅವರ ಮಾವನವರನ್ನೂ ನೆನಪಿಸಿಕೊಂಡರು. ಆಗ ಅವರು ತಮ್ಮೂರಿನಲ್ಲಿ ಮುಂದೆ ನೀರಿನ ಸಮಸ್ಯೆ ಬರುತ್ತದೆ ಅಂತ ಕನಸೂ ಕಂಡಿರಲಿಕ್ಕಿಲ್ಲ. ಆದರೀಗ ಆ ಸಮಸ್ಯೆ ತಲೆದೋರಿದೆ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿಂಧ್ಯ, ಮುಖ್ಯಮಂತ್ರಿಗಳು ಪದೇಪದೇ ತಮ್ಮ ವಯಸ್ಸು ಹಾಗೂ ಹೆಂಡತಿ ವಿಷಯಗಳನ್ನು ಯಾಕೆ ಹೇಳುತ್ತಿದ್ದಾರೋ ಗೊತ್ತಾಗಲಿಲ್ಲ ಎಂದರು. ಎಸ್‌.ಎಸ್‌.ಪಾಟೀಲರು- ಹೆಂಡತಿ ಕೇಳಿದ ಪಾತ್ರೆ ತಂದುಕೊಡದ ವಿಷಯವನ್ನು ಮುಖ್ಯಮಂತ್ರಿಗಳು ಇಲ್ಲಿ ಹೇಳಿದ್ದಾರೆ. ಮನೆಗೆ ಹೋದ ಮೇಲೆ ಅವರಿಗೆ ಕಾದಿದೆ ಎಂದಾಗ ಸಭೆ ಗೊಳ್ಳೆಂದು ನಕ್ಕಿತು.

    (ಇನ್ಫೋ ವಾರ್ತೆ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more