• search

ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೆತೆರಿಗೆ ವಿನಾಯಿತಿ- ಕೃಷ್ಣ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : 50 ಎಕರೆಗಿಂತ ಕಡಿಮೆ ಭೂಪ್ರದೇಶ ಹೊಂದಿರುವ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೆ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಕೃಷಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

    ವಿಧಾನ ಸಭೆಯಲ್ಲಿ ಗುರುವಾರ ನಡೆದ ಬಜೆಟ್‌ ಕುರಿತ ಚರ್ಚೆ ಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿಗಳು, ಸಣ್ಣ ಹಾಗೂ ಮಧ್ಯಮ ವರ್ಗದ ಕಾಫಿ ಬೆಳೆಗಾರರಿಗೆ ತೆರಿಗೆ ಪಾವತಿ ಮೇಲಿನ ದಂಡದಲ್ಲಿಯೂ ವಿನಾಯಿತಿ ನೀಡಲಾಗಿದೆ ಎಂದರು. ಅಲ್ಲದೆ, ಅಖಿಲ ಭಾರತ ಪ್ರವಾಸಕ್ಕೆ ಅನುಮತಿ ಪಡೆದಿರುವ ಮೋಟಾರು ವಾಹನಗಳಿಗೂ ತೆರಿಗೆ ವಿನಾಯಿತಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಕೃಷ್ಣ ತಿಳಿಸಿದರು.

    ಮೋಟಾರು ವಾಹನಗಳ ತೆರಿಗೆಯನ್ನು ತ್ರೆೃಮಾಸಿಕಕ್ಕೆ ರೂಪಾಯಿ 2,999ರೂಪಾಯಿಗಳಿಂದ 2,250 ರೂಪಾಯಿಗಳಿಗೆ ಇಳಿಸಲಾಗಿದೆ. ಈ ಸಾಲಿನ ಬಜೆಟ್‌ನಲ್ಲಿ ಸುಪ್ತ ತೆರಿಗೆಗಳನ್ನು ವಿಧಿಸಲಾಗಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಳ್ಳಿ ಹಾಕಿದ ಕೃಷ್ಣ ಈ ಸಾಲಿನ ಬಜೆಟ್‌ನಲ್ಲಿ ಸಂಪನ್ಮೂಲಗಳ ಅಭಿವೃದ್ಧಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದರು.

    ಸರಕಾರವು ಕೇವಲ 55 ಸರಕು ಸಾಮಾಗ್ರಿಗಳಿಗೆ ಮಾತ್ರ ಸರಕು ತೆರಿಗೆ ವಿಧಿಸಿದೆ. ಈ ಕ್ಷೇತ್ರದಲ್ಲಿ ಯಾವುದೇ ಹೆಚ್ಚುವರಿ ಬದಲಾವಣೆಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ, ಹೈವೇ ಅಭಿವೃದ್ಧಿ, ನೀರು ನಿರ್ವಹಣೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೀರಿನ ವ್ಯವಸ್ಥೆಯಂತಹ ಯೋಜನೆಗಳಿಗೆ ಹಾಗೂ ರಾಜ್ಯದ ಆರ್ಥಿಕ ಪುನರ್‌ ನಿರ್ಮಾಣಕ್ಕೆ ವಿಶ್ವ ಬ್ಯಾಂಕ್‌ ಐದು ಸಾವಿರ ಕೋಟಿ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡಿದೆ ಎಂದರು.

    ಸರಕಾರದ ಆದ್ಯತೆಗಳನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಕೃಷಿ ಮತ್ತು ನೀರಾವರಿ, ವಿದ್ಯುತ್‌, ಶಿಕ್ಷಣ, ಆರೋಗ್ಯ, ಹಳ್ಳಿಗಳ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸರಕಾರ ಒತ್ತು ನೀಡುವುದನ್ನು ಮುಂದುವರೆಸುತ್ತದೆ ಎಂದ ಕೃಷ್ಣ , ಸರಕಾರ ಹೆಚ್ಚೆಚ್ಚು ಸಾಲ ಪಡೆಯುವಲ್ಲಿ ಆಸಕ್ತಿ ತೋರಿಸುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು. ಹುಡ್ಕೋ, ನಬಾರ್ಡ್‌ ಸೇರಿದಂತೆ ಯಾವುದೇ ಬ್ಯಾಂಕ್‌ ಸಾಲ ನಿರ್ವಹಣೆಯನ್ನು ಸರಿಯಾಗಿ ಮಾಡದ ರಾಜ್ಯಕ್ಕೆ ಪುನಃ ಸಾಲ ನೀಡಲು ಮುಂದೆ ಬರುವುದಿಲ್ಲ ಎಂದು ಅವರು ಹೇಳಿದರು.

    (ಪಿಟಿಐ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more