• search

ಗದಗ : ಮಾ.29 ರಂದು ಜಾ.ಜನತಾದಳದವರಿಂದ ದಿನವಿಡೀ ಬೊಬ್ಬೆ !

By oneindia staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಹುಬ್ಬಳ್ಳಿ: ಚಳವಳಿಗಳನ್ನು ಹೇಗೆ ವಿಭಿನ್ನವಾಗಿ ಮಾಡಬಹುದು ?
    ಉಪವಾಸ ಸತ್ಯಾಗ್ರಹ, ಮುತ್ತಿಗೆ, ಸರಕಾರಿ ಕಚೇರಿಗೆ ಬೀಗ ಹಾಕುವುದು, ಜೈಲ್‌ಭರೋ, ಕಚೇರಿ ಪ್ರವೇಶಿಸದೇ ಬಾಗಿಲ ಬಳಿ ಧರಣಿ ಕೂರುವುದು, ರಸ್ತೆ ರಿಪೇರಿಗೆ ಅಂತ ಸರಕಾರವನ್ನು ಅಣಕಿಸಿ ಭಿಕ್ಷೆ ಬೇಡುವುದು, ಮೌನ ಮೆರವಣಿಗೆ... ಇವೆಲ್ಲ ದಿನ ನಿತ್ಯ ಮಾಧ್ಯಮಗಳಲ್ಲಿ ಕೇಳುವ ಕಾಣುವ ಚಳವಳಿ ಸ್ವರೂಪಗಳು. ಆದರೆ ಗದಗದ ಜಾತ್ಯತೀತ ಯುವ ಜನತಾ ದಳದವರು ಹೊಸದೊಂದು ಮಾರ್ಗ ಕಂಡುಕೊಂಡಿದ್ದಾರೆ. ಅದು ಬೊಬ್ಬೆ ಹೊಡೆಯುವ ಚಳವಳಿ.

    ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಜಾತ್ಯತೀತ ಯುವ ಜನತಾ ದಳ ಖಂಡ ತುಂಡವಾಗಿ ವಿರೋಧಿಸುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಲಾಭವಿಲ್ಲ. ಆದ್ದರಿಂದ ಮಾರ್ಚ್‌ 29ರಂದು ಈ ಪದ್ಧತಿಯನ್ನು ವಿರೋಧಿಸಿ ಬೊಬ್ಬೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಜನತಾ ದಳದ ಅಧ್ಯಕ್ಷ ದಾವಲ್‌ ಮುಳಗುಂದ ತಿಳಿಸಿದ್ದಾರೆ.

    ಅಂದ ಹಾಗೆ ಈ ಬೊಬ್ಬೆ ಚಳವಳಿ ಗದಗ ನಗರ ಸಭೆಯ ಕಚೇರಿಯ ಮುಂದೆ ಮಾತ್ರ ನಡೆಯುತ್ತದೆ. ರಾಜ್ಯದ ಇತರ ಸರಕಾರಿ ಕಚೇರಿಗಳು ಬೊಬ್ಬೆ ಚಳವಳಿಯಿಂದ ಬಚಾವ್‌. ರಾಜ್ಯದಲ್ಲಿ ಈಗಾಗಲೇ ಪ್ರತಿಭಟನಾ ಕಾರ್ಯಕ್ರಮಗಳು ನಡೆದಿವೆ. ರಾಜ್ಯ ಸರಕಾರ ಹಠಮಾರಿಯಾಗಿದೆ. ಪ್ರತಿಭಟನೆ ಹೋರಾಟಗಳಿಗೆ ಗಮನ ಕೊಡದೇ ಏಪ್ರಿಲ್‌ 1ರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರುತ್ತಿದೆ ಎಂದು ಮುಳಗುಂದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾರ್ಚ್‌ 29ರಂದು ನಡೆಯುವ ಬೊಬ್ಬೆ ಚಳವಳಿ ದಿನವಿಡೀ ನಡೆಯುತ್ತದೆ. ಸರಕಾರ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಕೈಬಿಡುವವರೆಗೂ ಹೋರಾಡುತ್ತೇವೆ ಎಂದು ಮುಳಗುಂದ ಹೇಳಿದ್ದಾರೆ. ಆದರೆ ಆ ಹೋರಾಟ ಬರೇ ಬೊಬ್ಬೆ ಚಳವಳಿ ಮಾತ್ರವಲ್ಲ. ಇತರ ಪ್ರತಿಭಟನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ಈ ಪದ್ಧತಿಯನ್ನು ವಿರೋಧಿಸಲಾಗುವುದು ಎಂದೂ ಮುಳಗುಂದ ಹೇಳಿದ್ದಾರೆ.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more