ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪೋಟೋ ಮಸೂದೆಗೆ ಅಂಗೀಕಾರ

By Oneindia Staff
|
Google Oneindia Kannada News

ನವದೆಹಲಿ: ಮಂಗಳವಾರ ನಡೆದ ಐತಿಹಾಸಿಕ ಜಂಟಿ ಅಧಿವೇಶನದಲ್ಲಿ ದೀರ್ಘ ಚರ್ಚೆ ಹಾಗೂ ಗದ್ದಲದ ಬಳಿಕ ಸಂಸತ್‌ ವಿವಾದಾತ್ಮಕ ಭಯೋತ್ಪಾದನಾ ನಿಗ್ರಹ ಮಸೂದೆಯನ್ನು ಅಂಗೀಕರಿಸಿತು.

ಕರಾಳ ಮಸೂದೆ ಎಂದೇ ಬಣ್ಣಿಸಲ್ಪಟ್ಟ ಪೋಟೋ ಮಸೂದೆಯನ್ನು ಅಂಗೀಕರಿಸಲು ಪ್ರತಿಪಕ್ಷಗಳು ವಿರೋಧಿಸಿ ಮತದಾನಕ್ಕೆ ಒತ್ತಾಯಿಸಿದವು. ಮತದಾನದಲ್ಲಿ ಮಸೂದೆಯನ್ನು ಬೆಂಬಲಿಸಿ 425 ಮಂದಿ ಸದಸ್ಯರು ಹಾಗೂ ವಿರೋಧಿಸಿ 296 ಮಂದಿ ಸದಸ್ಯರು ಮತ ಚಲಾಯಿಸಿದರು.

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಎರಡು ಬಾರಿ(1961 ಮತ್ತು 1978) ಸಂಸತ್‌ ಜಂಟಿ ಅಧಿವೇಶನ ನಡೆಸಿತ್ತು. ಮಂಗಳವಾರ ನಡೆದ ಜಂಟಿ ಅಧಿವೇಶನದ ಅಂತ್ಯದ ವೇಳೆ ಪ್ರಧಾನ ಮಂತ್ರಿ ವಾಜಪೇಯಿ, ಸೋನಿಯಾ ಗಾಂಧಿಯವರ ಆರೋಪಗಳಿಗೆ ಕೋಪೋದ್ರಿಕ್ತರಾಗಿ ಪ್ರತಿಕ್ರಿಯಿಸಿದರು. ತಾವು ಒತ್ತಡದಲ್ಲಿ ಎಂದೂ ಕಾರ್ಯನಿರ್ವಹಿಸಿಲ್ಲ. ಅಂತಹ ಸಂದರ್ಭಗಳು ಬಂದಾಗಲೆಲ್ಲ ಅದನ್ನು ಮೆಟ್ಟಿ ನಿಂತು ದೇಶದ ಹಿತವನ್ನು ಕಾಪಾಡಿದ್ದೇನೆ ಎಂದು ವಾಜಪೇಯಿ ಸ್ಪಷ್ಟಪಡಿಸಿದರು.

ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ ಬಳಸಿರುವ ಭಾಷೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ವಾಜಪೇಯಿ ವಿರೋಧ ಪಕ್ಷದ ನಾಯಕಿಯ ಸ್ಥಾನದಲ್ಲಿದ್ದುಕೊಂಡು ಬಳಸುವ ಭಾಷೆಯೇ ಇದು ಎಂದು ಪ್ರಶ್ನಿಸಿದರು.

(ಇನ್ಫೋ ವಾರ್ತೆ)

ನೀವೂ ಪೋಟೋ ಕಾಯ್ದೆಯನ್ನು ಬೆಂಬಲಿಸುತ್ತೀರಾ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X