ನೀರಾಬೆಲ್ಲ ತಯಾರಿಕಾ ವಿಧಾನ ಪರಿಶೀಲಿಸಲು ಇಟಲಿ ವರ್ತಕರು ಹಾಸನಕ್ಕೆ
ಹಾಸನ: ತೆಂಗಿನ ಮರದಿಂದ ಇಳಿಸುವ ನೀರಾದಿಂದ ಬೆಲ್ಲ ತಯಾರಿಸುವ ವಿಧಾನವನ್ನು ಪರಿಶೀಲಿಸಲು ಇಟಲಿಯ ವರ್ತಕರು ಆಸಕ್ತಿ ವಹಿಸಿದ್ದಾರೆ.
ನೀರಾದಿಂದ ಬೆಲ್ಲ ತಯಾರಿಸುವ ವಿಧಾನದ ಅಧ್ಯಯನಕ್ಕಾಗಿ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಇಟಲಿಯ ವರ್ತಕರ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ. ಹೀಗೆ ತಯಾರಿಸುವ ಬೆಲ್ಲದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಂಡ ನಂತರ ಬೆಲ್ಲ ಆಮದುಮಾಡಿಕೊಳ್ಳುವ ನಿರ್ಧಾರವನ್ನು ಇಟಲಿ ವರ್ತಕರು ಕೈಗೊಳ್ಳಲಿದ್ದಾರೆ.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೋಡಿ ಹಳ್ಳಿ ಚಂದ್ರಶೇಖರ್ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ನೀರಾದಿಂದ ತಯಾರಿಸುವ ಬೆಲ್ಲದಲ್ಲಿ ರಾಸಾಯನಿಕಗಳ ಬಳಕೆ ಮಾಡುತ್ತಿಲ್ಲ. ಆದ್ದರಿಂದ ಇಟಲಿಗೆ ಬೆಲ್ಲ ರಫ್ತು ಮಾಡುವುದು ಸಾಧ್ಯವಾಗಬಹುದು ಎಂದು ಆಶಿಸಿದ್ದಾರೆ.
ಕೊಳ್ಳೆಗಾಲದಲ್ಲಿಯೇ ಎರಡೂವರೆ ಟನ್ ಬೆಲ್ಲದ ದಾಸ್ತಾನು ಇದೆ. ಶುದ್ಧ ಬೆಲ್ಲ ತಯಾರಿಕೆಯ ಬಗ್ಗೆ ನೀರಾ ಇಳಿಸುವವರಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ ಎಂದು ಚಂದ್ರಶೇಖರ್ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...