ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರಾದೇವಿಗೆ ಕೈ ಕೊಟ್ಟ ತಾರಾಗತಿ, ಮಲ್ಯಗೆ ರಾಜ್ಯಸಭೆ ಯೋಗಾಯೋಗ!

By Oneindia Staff
|
Google Oneindia Kannada News

Vijay Malyaಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ , ರಾಜ್ಯಸಭೆಯ ನಾಲ್ಕು ಕ್ಷೇತ್ರಗಳಿಗೆ ಬುಧವಾರ (ಮಾ.27) ನಡೆದ ಚುನಾವಣೆಯಲ್ಲಿ ಜನತಾ ಪರಿವಾರದ ಬೆಂಬಲಿತ ಅಭ್ಯರ್ಥಿ ವಿಜಯ ಮಲ್ಯ ಜಯಗಳಿಸಿ ರಾಜ್ಯಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ನ ಮೂವರು ಅಧಿಕೃತ ಸ್ಪರ್ಧಿಗಳಾದ ಜನಾರ್ಧನ ಪೂಜಾರಿ, ಎಂ.ವಿ.ರಾಜಶೇಖರನ್‌ ಹಾಗೂ ಪ್ರೇಮಾ ಕಾರ್ಯಪ್ಪ ವಿಜಯಿಗಳಾದರೆ, ತಾರಾಗತಿ ಕೈ ಕೊಟ್ಟ ಬಿಜೆಪಿಯ ತಾರಾದೇವಿ ಸಿದ್ಧಾರ್ಥ ಅವರು ಸೋಲುಂಡಿದ್ದಾರೆ.

ಕಾಂಗ್ರೆಸ್‌ ಪಕ್ಷದ 135 ಶಾಸಕರು ತಮ್ಮ ಪ್ರಾಶಸ್ತ್ಯ ಮತವನ್ನು ಮಲ್ಯ ಅವರಿಗೆ ಚಲಾಯಿಸಿದ್ದರಿಂದ, ಮಲ್ಯ ಅವರ ಗೆಲುವು ಸುಲಭವಾಯಿತು. ಜನಾರ್ಧನ ಪೂಜಾರಿ 50, ವಿಜಯ ಮಲ್ಯ 46, ಪ್ರೇಮಾ ಕಾರ್ಯಪ್ಪ 45, ರಾಜಶೇಖರನ್‌ 44 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸೋಲುಂಡ ತಾರಾದೇವಿ 34 ಮತ ಪಡೆದರು.

ಕಾಂಗ್ರೆಸ್‌ನ 30 ದ್ವಿತೀಯ ಹಾಗೂ 15 ತೃತೀಯ ಪ್ರಾಶಸ್ತ್ಯ ಹಾಗೂ 90 ನಾಲ್ಕನೇ ಪ್ರಾಶಸ್ತ್ಯ ಮತಗಳನ್ನು ವಿಜಯ ಮಲ್ಯ ಪಡೆದಿದ್ದಾರೆ. ಬಿಜೆಪಿಯ 11 ಶಾಸಕರು ಮಲ್ಯ ಅವರಿಗೆ ಓಟು ನೀಡಿದ್ದು ಚುನಾವಣೆಯ ವಿಶೇಷ. ಸಂಯುಕ್ತ ಜನತಾದಳದ 19 ಶಾಸಕರು ಹಾಗೂ ತಟಸ್ಥ ಜನತಾದಳದ ಜಯಪ್ರಕಾಶ್‌ ಹೆಗ್ಡೆ ಅವರು ಮಲ್ಯ ಅವರ ಪರವಾಗಿ ಮತ ಚಲಾಯಿಸಿದರು.

ಮೊಗಸಾಲೆಯಲ್ಲಿ ವೆಂಕಯ್ಯ ನಾಯ್ಡು, ಅನಂತಕುಮಾರ್‌
ಕೇಂದ್ರ ಸಚಿವರಾದ ಅನಂತಕುಮಾರ್‌ ಹಾಗೂ ವೆಂಕಯ್ಯನಾಯ್ಡು ಅವರು ವಿಧಾನಸೌಧದಲ್ಲಿ ಹಾಜರಿದ್ದು, ತಾರಾದೇವಿ ಅವರಿಗೇ ಮತ ಚಲಾಯಿಸುವಂತೆ ಪಕ್ಷದ ಶಾಸಕರಿಗೆ ಸೂಚನೆ ನೀಡಿದರು. ಈ ನಡುವೆ ಪಕ್ಷದ ಕೆಲವು ಬಂಡಾಯ ಶಾಸಕರು ಅನಂತಕುಮಾರ್‌ ಹಾಗೂ ವೆಂಕಯ್ಯನಾಯ್ಡು ಅವರಿಗೆ ಕೈ ಕೊಟ್ಟು ಹೋಗಿ ಮತ ಚಲಾಯಿಸಿದ್ದು ವಿಶೇಷ. ಮತ ಚಲಾಯಿಸಿ ಬಂದ ಶಾಸಕರೊಬ್ಬರು ಹಾಗೂ ವೆಂಕಯ್ಯ ನಾಯ್ಡು ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಬಂಡು ಶಾಸಕರ ಸಸ್ಪೆಂಡ್‌ : ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾದ ತಾರಾದೇವಿ ಅವರಿಗೆ ಮತ ನೀಡದೆ, ಮಲ್ಯ ಅವರಿಗೆ ಮತ ಚಲಾಯಿಸಿರುವ ಐವರು ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯ ಮೇಲೆ ಬಿಜೆಪಿ ಅಮಾನತುಗೊಳಿಸಿದೆ. ಗಂಟಗಾನಹಳ್ಳಿ ಕೃಷ್ಣಪ್ಪ , ಗುಂಡಪ್ಪ ವಕೀಲ್‌, ಪುಟ್ಟ ರಂಗನಾಥ್‌, ವಿ.ಪಾಪಣ್ಣ ಹಾಗೂ ಕೆ.ಎಚ್‌.ಹನುಮೇಗೌಡ ಪಕ್ಷದಿಂದ ಅಮಾನತುಗೊಂಡ ಶಾಸಕರು.

ಜಾತ್ಯತೀತ ಜನತಾದಳದ ನಾಲ್ವರು ಶಾಸಕರು ಹಾಗೂ ಪಕ್ಷೇತರ ವಿ.ಸೋಮಣ್ಣ ಅವರುಗಳು ಮಲ್ಯ ಅವರಿಗೆ ಮತ ಚಲಾಯಿಸಿದರು. ಮಲ್ಯ ಅವರಿಗೇ ಮತ ಚಲಾಯಿಸುವಂತೆ ಈ ಐವರು ಶಾಸಕರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬುಧವಾರ ಬೆಳಗ್ಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X