ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿ ಜಿಲ್ಲೆಯ ಕಾಕೋಳ ಗ್ರಾಮದಲ್ಲಿ 250 ಮಂದಿಗೆ ಕರಳು ಬೇನೆ

By Staff
|
Google Oneindia Kannada News

ರಾಣಿ ಬೆನ್ನೂರು: ಹಾವೇರಿ ಜಿಲ್ಲೆಯ ಕಾಕೋಳ ಹಳ್ಳಿಯ ನಿವಾಸಿಗಳೆಲ್ಲರೂ ಕರಳು ಬೇನೆ ರೋಗದಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.

ಕರಳು ಬೇನೆಯಿಂದ ಹರಡಿರುವ 250 ಪ್ರಕರಣಗಳು ದಾಖಲಾಗಿದ್ದು , ಗಂಭೀರ ಸ್ಥಿತಿಯಲ್ಲಿರುವ 15 ಮಂದಿ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ಆರೋಗ್ಯ ವಿಭಾಗದ ಅಧಿಕಾರಿಗಳು ಈಗಾಗಲೇ ಕರಳು ಬೇನೆ ರೋಗ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಕಾಕೋಳ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಕಾಕೋಳ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈವರೆಗೆ ಕಾಲರಾ ರೋಗ ಹರಡಿರುವ ಯಾವ ಪ್ರಕರಣವೂ ವರದಿಯಾಗಿಲ್ಲ ಎಂದು ಸ್ಥಳೀಯ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X