ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿರುವ ನಿಮ್ಮ ಅಮ್ಮನಿಗೆ ನಿಂತ ಗಳಿಗೆಯಲ್ಲೇ ಹಣ ಕಳುಹಿಸಬೇಕೆ?

By Staff
|
Google Oneindia Kannada News

*ಇನ್ಫೋ ಅನ್‌ಸೈಟ್‌

ಸಚಿನ್‌ಗೆ ದಿಢೀರನೆ ಎಚ್ಚರವಾದಾಗ, ಶನಿವಾರ ರಾತ್ರಿ 10 ಗಂಟೆ. ಕಾಮನ ಹಬ್ಬಕ್ಕೆ ಇನ್ನು ಕೆಲವೇ ಗಂಟೆಗಳಿವೆ. ಕ್ಯಾಲಿಫೋರ್ನಿಯಾದಲ್ಲಿ ಕುಳಿತ ಸಚಿನ್‌ ಒಂದು ಕ್ಷಣ ಪೇಚಿಗೆ ಸಿಕ್ಕಿದ. ಭಾರತದಲ್ಲಿರುವ ತನ್ನ ಅಮ್ಮನಿಗೆ ತಕ್ಷಣವೇ ಹಣ ಕಳಿಸಬೇಕಿತ್ತು. ಕೆಲಸದ ನಡುವೆ ಅದು ಮರೆತುಹೋಗಿತ್ತು.

ಏನೋ ಹೊಳೆದಂತಾಗಿ, ತನ್ನ ಕಂಪ್ಯೂಟರ್‌ ಮುಂದೆ ಕೂತ ಸಚಿನ್‌ ಕೆಲವು ನಿಮಿಷಗಳ ನಂತರ ನೆಮ್ಮದಿಯ ನಿಟ್ಟುಸಿರಿಟ್ಟ. ಭಾರತದಲ್ಲಿನ ಅವನಮ್ಮನಿಗೆ ಹಣದ ಡ್ರಾಫ್ಟ್‌ ಆ ಕ್ಷಣವೇ ತಲುಪಿತ್ತು. ಇದು ಸಾಧ್ಯವಾದದ್ದು- ಸಿಟಿಬ್ಯಾಂಕ್‌ನ ರುಪೀ ಚೆಕಿಂಗ್‌ ಅಕೌಂಟ್‌ನಿಂದ.

ಅನಿವಾಸಿ ಭಾರತೀಯರಿಗೆ ಒಂದಲ್ಲ ಒಂದು ದಿನ ಸಚಿನ್‌ ಪರಿಸ್ಥಿತಿ ಒದಗಬಹುದು. ಅಥವಾ ಸಾಗರದಾಚೆ ಇರುವ ನೀವು ನಿಮ್ಮೂರಿನವರಿಗೆ ಸಹಾಯ ಮಾಡುವುದು ಹೇಗೆ ಎಂಬ ಗೊಂದಲದಲ್ಲಿ ಈಗಾಗಲೇ ಇದ್ದಿರಬಹುದು. ನಿಮ್ಮ ತಲೆನೋವು ಕಳೆಯಲೆಂದೇ ಸಿಟಿಬ್ಯಾಂಕ್‌ ವಿಶೇಷ ಖಾತೆಯ ಸೌಕರ್ಯ ಕಲ್ಪಿಸಿದೆ. 1000 ಯುಎಸ್‌ ಡಾಲರ್‌ಗಳನ್ನು ಠೇವಣಿ ಇಟ್ಟರೆ ಸಾಕು, ನಿಮ್ಮ ತಲೆನೋವೆಲ್ಲಾ ಬ್ಯಾಂಕ್‌ನದ್ದು.

ಈ ಖಾತೆದಾರರು ನೀವಾದಲ್ಲಿ, ನೆಚ್ಚಿದ ನಿಮ್ಮವರಿಗೊಂದು ಎಟಿಎಂ ಕಾರ್ಡು. ಯಾವಾಗಲಾದರೂ ದುಡ್ಡು ತೆಗೆಯುವ ಅವಕಾಶ. ಖಾತೆ ನಿಮ್ಮದು. ಅದರ ಬಳಕೆದಾರರು ನಿಮ್ಮನ್ನು ನೆಚ್ಚಿಕೊಂಡವರು. ಅಹ್ಮದಾಬಾದ್‌, ಬೆಂಗಳೂರು, ಬರೋಡ, ಕೊಲ್ಕತಾ, ಚೆನ್ನೈ, ದೆಹಲಿ, ಹೈದರಾಬಾದ್‌, ಜೈಪುರ, ಮುಂಬಯಿ, ಪುಣೆ, ಕೊಯಮತ್ತೂರು ಮತ್ತು ಲುದಿಯಾನ- ಸಿಟಿಬ್ಯಾಂಕ್‌ನ ಈ ಹನ್ನೆರಡು ಶಾಖೆಗಳಲ್ಲಿ ಎಲ್ಲಿಯಾದರೂ ಖಾತೆ ತೆರೆಯಬಹುದು. ಭಾರತದ 70 ನಗರಗಳ 700 ಕ್ಕೂ ಹೆಚ್ಚು ಎಟಿಎಂ ಕೌಂಟರ್‌ಗಳಲ್ಲಿ ಹಣ ತೆಗೆಯುವ ಅವಕಾಶ. ಕಾರ್ಡ್‌ ಬಳಸಿ, ಜಗತ್ತಿನ 4 ಲಕ್ಷಕ್ಕೂ ಹೆಚ್ಚು ಸಿರ್ರಸ್‌ ಯಂತ್ರಗಳಲ್ಲಿ ವಿದೇಶೀ ಚಾಲ್ತಿ ಹಣವನ್ನೂ ಪಡೆಯಬಹುದು.

ಇಪ್ಪತ್ನಾಲ್ಕೂ ತಾಸು ಸೇವೆ. ಆನ್‌ಲೈನ್‌ ವ್ಯವಸ್ಥೆಯುಂಟು. ರಜೆ ಅನ್ನುವುದೇ ಇಲ್ಲ. ಹಣ ವರ್ಗಾವಣೆ ಹಾಗೂ ಡ್ರಾಫ್ಟ್‌ ಉಚಿತ. ಅನಿವಾಸಿ ಭಾರತೀಯರ ಪ್ರಾರ್ಥನೆ ಈಡೇರಿಸಲು ಸಿಟಿಬ್ಯಾಂಕ್‌ ಸಜ್ಜಾಗಿದೆ. ಖಾತೆ ತೆರೆಯುವ ಮನಸ್ಸು ನಿಮ್ಮದಾಗಲಿ.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X