ತರಿಕೆರೆಯ ವಿಜ್ಞಾನ್ ಇಂಡಸ್ಟ್ರೀಸ್ಗೆ ಐಎಸ್ಒ -9000 ಪ್ರಮಾಣ ಪತ್ರ
ಚಿಕ್ಕಮಗಳೂರು: ಸರಕಾರಿ ಸ್ವಾಮ್ಯದಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಸಂಸ್ಥೆಯ ಅಧೀನದಲ್ಲಿರುವ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್(ವಿಐಎಲ್)ಉತ್ಪಾದನಾ ವಸ್ತುಗಳ ಗುಣಮಟ್ಟಕ್ಕೆ ನೀಡುವ ಐಎಸ್ಒ 9000 ಪ್ರಮಾಣ ಪತ್ರ ಪಡೆದಿದೆ.
ತರೀಕೆರೆಯಲ್ಲಿರುವ ಈ ಸಂಸ್ಥೆಗೆ ಐಎಸ್ಒ ಪ್ರಮಾಣ ಪತ್ರ ದೊರೆತಿರುವ ವಿಷಯವನ್ನು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಆರ್.ಸರವಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಮೆಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಅಪ್ರಮೇಯನ್ ಶುಕ್ರವಾರ ಬ್ಯೂರೋ ವೆರಿಟಾಸ್ ಕ್ವಾಲಿಟಿ ಇಂಟರ್ನ್ಯಾಷನಲ್ (ಬಿವಿಕ್ಯೂಐ) ಸಂಸ್ಥೆಯ ಜಾನಕೀನಾಥ್ ಅವರಿಂದ ಐಎಸ್ಒ ಪ್ರಮಾಣ ಪತ್ರವನ್ನು ಪಡೆದುಕೊಂಡರು.
ವಿಐಎಲ್ ಉತ್ಕೃಷ್ಟ ಗುಣಮಟ್ಟದ ಸ್ಟೀಲ್ ಕಾಸ್ಟಿಂಗ್ಗಳನ್ನು ದೇಶಾದ್ಯಂತ ಇರುವ ದೊಡ್ಡ ಉದ್ಯಮಗಳಿಗೆ ಪೂರೈಸುತ್ತಿರುವುದಲ್ಲದೆ, ಉತ್ಪನ್ನಗಳನ್ನು ಯೂರೋಪಿಯನ್ ಮಾರುಕಟ್ಟೆಗೆ ರಫ್ತು ಮಾಡುತ್ತಿದೆ. ಖಾಸಗಿ ಒಡೆತನದಲ್ಲಿರುವ ವಿಐಎಲ್ನ್ನು 1984ರಲ್ಲಿ ಬೆಮೆಲ್ ತನ್ನ ಅಧೀನ ಸಂಸ್ಥೆಯಾಗಿ ತೆಗೆದುಕೊಂಡಿತ್ತು.
ಈ ವರ್ಷ ವಿಐಎಲ್ 1450 ಲಕ್ಷ ರೂಪಾಯಿ ವ್ಯಾಪಾರ ವಹಿವಾಟು ಹಾಗೂ 1425 ಲಕ್ಷ ರೂಪಾಯಿ ಉತ್ಪಾದನಾ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಆರ್. ಸರವಣನ್ ತಿಳಿಸಿದ್ದಾರೆ.
(ಇನ್ಫೋವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...