ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲು ಮರದ ತಿಮ್ಮಕ್ಕನ ಹೆರಿಗೆ ಆಸ್ಪತ್ರೆ ಕನಸು ಜೀವಗೊಳ್ಳುವುದೆಂದು?

By Staff
|
Google Oneindia Kannada News

Salumarada Thimmakkaಬೆಂಗಳೂರು : ಹೆರಿಗೆ ಆಸ್ಪತ್ರೆ ಕಟ್ಟಿಸಬೇಕು ಅನ್ನೋದು ನನ್ನ ಕನಸು. ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಇದಕ್ಕೆ ಜನರೂ ಕೈಲಾದ ಸಹಾಯ ಮಾಡಲಿ- ಸಾಲು ಮರದ ತಿಮ್ಮಕ್ಕ ತಮ್ಮ ಕನಸನ್ನು ಹಂಚಿಕೊಂಡಿದ್ದು ಹೀಗೆ.

ವಿಶ್ವಅರಣ್ಯ ದಿನಾಚರಣೆ ಅಂಗವಾಗಿ ಜಯನಗರದ ಜನ ಅರಣ್ಯ ವೇದಿಕೆ ಹಮ್ಮಿಕೊಂಡಿದ್ದ ಜನ ಸಹಭಾಗಿತ್ವದ ಅರಣ್ಯ ನಿರ್ವಹಣೆ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ತಿಮ್ಮಕ್ಕ ಮಾತನಾಡುತ್ತಿದ್ದರು. ನಾನು ಒಪ್ಪೊತ್ತು ಕೂಲಿ ಮಾಡಿ, ಒಪ್ಪೊತ್ತು ನೀರು ಹಾಕಿ ಗಿಡ ಬೆಳೆಸಿದ್ದೇನೆ. ಇನ್ನೂ ಬೆಳಸಬೇಕು ಅನ್ನೋ ಆಸೆ ಇದೆ. ಆದರೆ ಜಾಗವೇ ಇಲ್ಲ ಎಂದು ತಿಮ್ಮಕ್ಕ ಹೇಳಿದರು.

ನೀವೆಲ್ಲ ಗಿಡ ನೆಡಬೇಕು. ಮನೆ ಮುಂದೆ ಮರ ಬೆಳೆಸಬೇಕು. ನೆರಳಿಗೆ, ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗಲು ಒಂದಾದರೂ ಮರ ಬೆಳೆಸಿ. ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಎಂದು ತಿಮ್ಮಕ್ಕ ಮನವಿ ಮಾಡಿದರು.

ಅರಣ್ಯ ಸಂರಕ್ಷಣೆಯಲ್ಲಿ ಕರ್ನಾಟಕ ಮುಂದು
ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಅರಣ್ಯ ಸಂಪತ್ತು ಸಂರಕ್ಷಣೆಯಲ್ಲಿ ಕರ್ನಾಟಕ ಮುಂದಿದೆ ಎಂದು ಸಂವಾದದಲ್ಲಿ ಪಾಲ್ಗೊಂಡ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಹೇಳಿದರು. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯವಿದ್ದು, ಇದನ್ನು 13 ಸಾವಿರ ಸಿಬ್ಬಂದಿಯಿಂದ ನಿರ್ವಹಿಸಲು ಕಷ್ಟವಾಗಿದೆ. ಪ್ರತಿ ವರ್ಷ 50 ಸಾವಿರ ಹೆಕ್ಟೇರ್‌ ಪ್ರದೇಶ ಅರಣ್ಯೀಕರಣವಾಗುತ್ತಿದ್ದು, ಅರಣ್ಯ ಸಂರಕ್ಷಣೆಯಲ್ಲಿ ಜನತೆಯ ಸಹಭಾಗಿತ್ವ ಅಗತ್ಯ ಎಂದು ಅವರು ಹೇಳಿದರು.

ಸಂವಾದದಲ್ಲಿ ಅರಣ.್ಯ ಸಂರಕ್ಷಣಾಧಿಕಾರಿ ಶಿವಣ್ಣ ಗೌಡ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಮತ್ತಿತರರು ಭಾಗವಹಿಸಿದ್ದರು. ಪರಿಸರವಾದಿ ಸುರೇಶ್‌ ಹುಬ್ಳೀಕರ್‌ ಸಂವಾದದ ಅಧ್ಯಕ್ಷತೆ ವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X