ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಮೂಲು ಚಾಲ್ತಿ ಲಾಭದ ನಡುವೆಯೂ ಏರಿದ ಏರ್‌ ಇಂಡಿಯಾ ನಷ್ಟ

By Staff
|
Google Oneindia Kannada News

ನವದೆಹಲಿ : 2000- 01ನೇ ವಿತ್ತ ವರ್ಷದಲ್ಲಿ 3.1 ಕೋಟಿ ರುಪಾಯಿಗಳ ನಿರೀಕ್ಷಿತ ಚಾಲ್ತಿ ಲಾಭದ ನಡುವೆಯೂ ಏರ್‌ ಇಂಡಿಯಾ 44.4 ಕೋಟಿ ರುಪಾಯಿ ನಿವ್ವಳ ನಷ್ಟ ಅನುಭವಿಸಿದೆ.

ದರ ಇಳಿಕೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂಥ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಂಪನಿಗೆ ನಷ್ಟ ಉಂಟಾಗಿದೆ. ಕಳೆದ ವಾರ ಸಂಸತ್‌ನಲ್ಲಿ ಏರ್‌ ಇಂಡಿಯಾ 2000- 01ನೇ ವಾರ್ಷಿಕ ವಿತ್ತ ವರದಿಯ ತಿರುಳು ಹೊರಬಿದ್ದಿತು. ಪೆಟ್ರೋಲ್‌ ದರದಲ್ಲಿ ಕಳೆದ ಹತ್ತು ವರ್ಷಗಳಲ್ಲೇ ದಾಖಲೆ ಏರಿಕೆ ಮಾಡಿದ್ದು ಏರ್‌ ಇಂಡಿಯಾ ನಷ್ಟ ಈ ಮಟ್ಟ ಮುಟ್ಟಲು ಕಾರಣವಾಯಿತು ಎನ್ನಲಾಗುತ್ತಿದೆ.

1999- 2000ನೇ ವಿತ್ತ ವರ್ಷಕ್ಕಿಂತ 2000-01ನೇ ವಿತ್ತ ವರ್ಷದಲ್ಲಿ ಪೆಟ್ರೋಲ್‌ಗಾಗಿ ಹೆಚ್ಚುವರಿ 235.8 ಕೋಟಿ ರುಪಾಯಿ ವಿನಿಯೋಗಿಸಲಾಗಿದೆ. ಈ ಏರಿಕೆ ಪ್ರತಿಶತ 40ರಷ್ಟಿದೆ. 1999- 2000 ವಿತ್ತ ವರ್ಷದಲ್ಲಿ ಏರ್‌ ಇಂಡಿಯಾ 37.6 ಕೋಟಿ ರುಪಾಯಿ ನಷ್ಟ ಅನುಭವಿಸಿತ್ತು.

ಒಂದು ವೇಳೆ ಪೆಟ್ರೋಲ್‌ ದರಗಳು ಏರಿಕೆಯಾಗದಿದ್ದಲ್ಲಿ 235 ಕೋಟಿ ರುಪಾಯಿಗೂ ಹೆಚ್ಚು ಚಾಲ್ತಿ ಲಾಭ ಬರುತ್ತಿತ್ತು. ಇದರಿಂದ 191.4 ಕೋಟಿ ರುಪಾಯಿ ನಿವ್ವಳ ಲಾಭ ಸಾಧ್ಯವಾಗುತ್ತಿತ್ತು. ಆದರೀಗ 44.4 ಕೋಟಿ ರುಪಾಯಿ ನಷ್ಟವಾಗಿದೆ. ಏರ್‌ ಇಂಡಿಯಾದ ಆದಾಯದಲ್ಲಿ ಪ್ರತಿಶತ 65ರಷ್ಟು ಪ್ರಯಾಣಿಕರಿಂದ ಬಂದದ್ದು. ಸೇವಾ ವೆಚ್ಚ ಜಾಸ್ತಿಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ನಷ್ಟದ ಪ್ರಮಾಣ ಏರುತ್ತಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X