ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಡ ಪತ್ರ 2002-03: ಯಾವುದು ತುಟ್ಟಿ , ಯಾವುದು ಅಗ್ಗ ?

By Staff
|
Google Oneindia Kannada News

ಸತತ ಮೂರನೇ ಬಾರಿ ಮುಂಗಡ ಪತ್ರ ಮಂಡಿಸಿದ ಕೃಷ್ಣ - ಈ ಬಾರಿ ರೈತರು ಹಾಗೂ ಶ್ರೀ ಸಾಮಾನ್ಯರ ಪರ ಕಾಳಜಿ ವ್ಯಕ್ತಪಡಿಸಿದ್ದಾರೆ. ಯಾವುದೇ ಎದ್ದು ಕಾಣುವ ತೆರಿಗೆಗಳಿಲ್ಲ ದ ಈ ಬಜೆಟ್‌ ಈ ಬಾರಿ ಕಂಪ್ಯೂಟರ್‌ ಕ್ಷೇತ್ರಕ್ಕೆ ಅಷ್ಟೇನೂ ಒಲವು ತೋರಿಸಿಲ್ಲ . ಅಂದಹಾಗೆ, ವಿವಿಧ ಕ್ಷೇತ್ರಗಳ ಮೇಲೆ ಬಜೆಟ್‌ ಪರಿಣಾಮ ಇಂತಿದೆ-

  • ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌ ಹಾಗೂ ಸ್ಮಾರ್ಟ್‌ ಕಾರ್ಡ್‌ ಬಿಡಿ ಭಾಗಗಳ ಮೇಲಿನ ತೆರಿಗೆಯಲ್ಲಿ ಶೇ.4 ರ ಇಳಿಕೆ.
  • ರಿಮೇಕ್‌ ಕನ್ನಡ ಸಿನಿಮಾಗಳಿಗೆ 2002 ರ ಏಪ್ರಿಲ್‌ 1 ರಿಂದ, 1 ವರ್ಷ ಕಾಲ ಶೇ.25 ತೆರಿಗೆ ವಿನಾಯಿತಿ.
  • ಕನ್ನಡೇತರ ಸಿನಿಮಾಗಳ ಮೇಲಿನ ತೆರಿಗೆ ಶೇ. 80 ರಿಂದ 70 ಕ್ಕೆ ಇಳಿಕೆ.
  • ಗೋಧಿ, ಮೈದಾ, ಜೋಳ, ಒಣ ಮೆಣಸಿನ ಕಾಯಿ, ಕೊಡೆಗಳು, ಕಾಫಿ ಬೀಜ, ಅಡಿಕೆ, ರಸ ಗೊಬ್ಬರಗಳು, ಕೀಟ ನಾಶಕಗಳು, ಟ್ರಾಕ್ಟರ್‌ ಸೇರಿದಂತೆ ರೈತರು ಬಳಸುವ ಉಪಕರಣಗಳ ಮೇಲಿನ ಹಳೆಯ ತೆರಿಗೆಯೇ ಮುಂದುವರಿಯುವುದು.
  • ಖಾದ್ಯ ತೈಲ, ಹಿಂಡಿ ಹಾಗೂ ಎಣ್ಣೆಕಾಳುಗಳ ತೆರಿಗೆ ಶೇ. 4 ಕ್ಕೆ ಪರಿಷ್ಕರಣೆ.
  • ಸರಕು ವಾಹನ ತೆರಿಗೆ ಹೆಚ್ಚಳ.
  • ಸ್ಪ್ರಿಂಕ್ಲರ್‌ ಹಾಗೂ ಹನಿ ನೀರಾವರಿ ಉಪಕರಣಗಳ ಮಾರಾಟ ತೆರಿಗೆಗೆ ವಿನಾಯಿತಿ.
  • ಮೀನುಗಾರಿಕಾ ಡೀಸೆಲ್‌ ತೆರಿಗೆ ವಿನಾಯಿತಿ ಮುಂದುವರಿಕೆ.
  • ಕ್ಯಾನ್ಸರ್‌, ಮೂತ್ರಪಿಂಡ, ಏಡ್ಸ್‌ - ಶಸ್ತ್ರ ಚಿಕಿತ್ಸಾ ಉಪಕರಣಗಳಿಗೆ ತೆರಿಗೆ ವಿನಾಯಿತಿ.
  • ಏಡ್ಸ್‌ ನಿಯಂತ್ರಣಕ್ಕೆ 20 ಕೋಟಿ ರುಪಾಯಿ.
  • ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ಗಳಂಥ ಪ್ರತಿಷ್ಠಿತ ಆಟಗಳಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಪ್ರವೇಶ ದರದ ಮೇಲೆ ಶೇ.20 ತೆರಿಗೆ.
  • ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ನಮೂನೆ-32 ಬಿ ಘೋಷಣಾ ಪತ್ರ ರದ್ದು .
  • ಸರಕು ಸಾಗಾಣಿಕಾ ಅಪರಾಧ ದಂಡದ ದರದಲ್ಲಿ ಏರಿಕೆ.
  • ಲಾಟರಿ ತೆರಿಗೆ ದರ ಶೇ.20 ಕ್ಕೆ ಹೆಚ್ಚಳ.
  • ಪೆಟ್ರೋಲಿಯಂ ಉತ್ಪನ್ನಕ್ಕೆ ಅನುಸೂಚಿತ ತೆರಿಗೆ ದರ ಪರಿಷ್ಕರಣೆ.
  • ತಂಬಾಕು ಉತ್ಪನ್ನಗಳಿಗೆ ಶೇ.20 ತೆರಿಗೆ ಹೆಚ್ಚಳ.
  • ಜೂಜು ತೆರಿಗೆ ದರ ಹೆಚ್ಚಳ.
  • ರಬ್ಬರ್‌, ಟಯರ್‌, ಟ್ಯೂಬ್‌ ಶೇ.5 ರಷ್ಟು ಪರಿಷ್ಕರಣೆ.
  • ಶಿಕ್ಷಕೇತರ ನೌಕರರಿಗೆ ಹೆಚ್ಚುವರಿ ವೇತನ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X