ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ : ಖರ್ಚು- 25,597.31 ಕೋಟಿ ರು, ಕೊರತೆ- 55.26 ಕೋಟಿ ರು.

By Staff
|
Google Oneindia Kannada News

ಬೆಂಗಳೂರು : ಯಾವುದೇ ಪ್ರಮುಖ ಹೊಸ ತೆರಿಗೆಗಳಿಲ್ಲ , ಶ್ರೀ ಸಾಮಾನ್ಯ ಹಾಗೂ ಬಡವರ ಪರ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮುಂದುವರಿದ ಒತ್ತು , ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಸ್ವಯಂ ನಿವೃತ್ತಿ ಯೋಜನೆ- ಇದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ 2002-03 ನೇ ಸಾಲಿನ ಬಜೆಟ್‌ ಮುಖ್ಯಾಂಶಗಳು.

55.26 ಕೋಟಿ ರುಪಾಯಿ ಕೊರತೆಯ ಆಯವ್ಯಯವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಗುರುವಾರ ಮಂಡಿಸಿದರು. ಒಟ್ಟು 25,542.05 ಕೋಟಿ ರುಪಾಯಿ ಆದಾಯವನ್ನು ನಿರೀಕ್ಷಿಸಲಾಗುತ್ತಿದ್ದು , ಒಟ್ಟು ಖರ್ಚು 25,597.31 ಕೋಟಿ ರುಪಾಯಿ ಅಂದಾಜು ಮಾಡಲಾಗಿದೆ.

ಪ್ರಮುಖ ತೆರಿಗೆ ಆದಾಯಗಳನ್ನು ಹೊರತು ಪಡಿಸಿದಂತೆ- ಸಣ್ಣ ಉಳಿತಾಯದಿಂದ 1890 ಕೋಟಿ ರುಪಾಯಿ, ಮಾರುಕಟ್ಟೆ ಹೂಡಿಕೆದಾರರಿಂದ 948.48 ಕೋಟಿ ರು., 500 ಕೋಟಿ ರು.ಗಳನ್ನು ನಿರೀಕ್ಷಿತ ಸಾಲಗಳಿಂದ ಹಾಗೂ 2417.75 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರದ ಒಟ್ಟು ಸಾಲದಿಂದ ನಿರೀಕ್ಷಿಸಲಾಗಿದೆ ಎಂದು ಕೃಷ್ಣ ಹೇಳಿದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X