ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವನಹಳ್ಳಿ ಬಳಿ ಹಾರ್ಡ್‌ವೇರ್‌ ಪಾರ್ಕ್‌ , ಆನ್‌ಲೈನ್‌ನಲ್ಲಿ 5 ಸರ್ಕಾರಿ ಸೇವೆ

By Staff
|
Google Oneindia Kannada News
  • 3 ಕೋಟಿ ರುಪಾಯಿ ವೆಚ್ಚದಲ್ಲಿ ವನ ವಿಕಾಸ ಯೋಜನೆ ವಿಸ್ತರಣೆ.
  • ಬೆಂಗಳೂರು ಕೆರೆಗಳ ಅಭಿವೃದ್ಧಿಗೆ ಕೆರೆ ಅಭಿವೃದ್ಧಿ ಯೋಜನೆ.
  • ಪರಿಸರದ ಸಮಗ್ರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ವ್ಯಕ್ತಿಗೆ ಪರಿಸರ ಶ್ರೀ ಪ್ರಶಸ್ತಿ.
  • ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ 10 ಕೋಟಿ ರುಪಾಯಿ ನಿಗದಿ. ಅಗತ್ಯ ಬಿದ್ದರೆ ಹೆಚ್ಚುವರಿ ಹಣ ನೀಡಿಕೆ.
  • ಪೊಲೀಸ್‌ ಪಡೆ ಆಧುನೀಕರಣಕ್ಕೆ ಒತ್ತು . ಕಳೆದ 2 ವರ್ಷಗಳಲ್ಲಿ 215 ಕೋಟಿ ರುಪಾಯಿ ವೆಚ್ಚ. ಮುಂಬರುವ ವರ್ಷದಲ್ಲಿ 135 ಕೋಟಿ ರುಪಾಯಿ ವೆಚ್ಚ .
  • 2002-03 ನೇ ಸಾಲಿನಲ್ಲಿ 10 ಭೂಮಿ ಮಾಹಿತಿ ಕೇಂದ್ರಗಳ ಸ್ಥಾಪನೆ. ಈ ಜಿಲ್ಲೆಗಳ ಎಲ್ಲಾ ಭೂ ದಾಖಲೆಗಳು ಕಂಪ್ಯೂಟರೀಕೃತ.
  • ಅನಧಿಕೃತ ನೀರಾವರಿ ಪಂಪ್‌ಸೆಟ್‌ ಒಂದು ಅವಧಿಗೆ ಸಕ್ರಮ.
  • ಶಾಸಕರ ಪ್ರದೇಶಾಭಿವೃದ್ಧಿ ನಿಧಿ 25 ರಿಂದ 40 ಲಕ್ಷ ರುಪಾಯಿಗೆ ಹೆಚ್ಚಳ.
  • ರೈತರ ಪಂಪ್‌ಸೆಟ್‌ಗೆ ಸಾರ್ವತ್ರಿಕ ಮೀಟರೀಕರಣ. ರಿಯಾಯಿತಿ ದರದಲ್ಲಿ ಶುಲ್ಕ ವಸೂಲಿ.
  • ಛಾಪಾ ಕಾಗದಗಳ ಬಳಕೆ ರದ್ದು ಪಡಿಸಲು ಉದ್ದೇಶಿಸಿದ್ದು , ಸದ್ಯದಲ್ಲೇ ವಿವರಗಳು ಹೊರಬೀಳಲಿವೆ.
  • 5 ವರ್ಷದ ಬದಲಿಗೆ 10 ವರ್ಷಕ್ಕೊಮ್ಮೆ ವೇತನಾ ಆಯೋಗ.
  • ಆಡಳಿತದಲ್ಲಿ ದಕ್ಷತೆ ಉಳಿಸಿಕೊಳ್ಳಲು ಅಧಿಕಾರಿಗಳಿಗೆ ದಕ್ಷತಾ ಪರೀಕ್ಷೆಗಳು.
  • ರಾಜ್ಯ ಸರ್ಕಾರದಿಂದಲೂ ಸ್ವಯಂ ನಿವೃತ್ತಿ ಯೋಜನೆ ಜಾರಿ.
  • ವಿವಿಧ ಇಲಾಖೆಗಳ 3962 ಬ್ಯಾಕ್‌ಲಾಗ್‌ ಹುದ್ದೆಗಳ ತುಂಬಲು ಕ್ರಮ.
  • ಸರ್ಕಾರಿ ಅಧಿಕಾರಿಗಳ ಮನೆ ಬಾಡಿಗೆ ಭತ್ಯೆ ಹೆಚ್ಚಳ.
  • ಐತಿಹಾಸಿಕ ಸ್ಮಾರಕ- ಸ್ಥಳಗಳ ವರ್ಗೀಕರಣ. ಅಂತರ್ಜಾಲಕ್ಕೆ ಅಳವಡಿಕೆ. ಪ್ರವಾಸೋದ್ಯಮಕ್ಕೆ ಒತ್ತು . ಪತ್ರಾಗಾರ ಇನ್ನಿತರ ದಾಖಲೆಗಳನ್ನು ಡಿಜಿಟಲ್‌ ಮಾದರಿಯಲ್ಲಿ ರಕ್ಷಣೆ.
  • ರಾಜ್ಯ ಸರ್ಕಾರಕ್ಕೆ 50 ವರ್ಷ. ಈ ಸಂಭ್ರಮ ಆಚರಣೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ.
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ 24 ರಿಂದ 29 ಕೋಟಿಗೆ ಹೆಚ್ಚಳ.
  • ಪ್ರವಾಸೋದ್ಯಮ ಇಲಾಖೆ ಹಾಗೂ ಕೆಎಸ್‌ಟಿಡಿಸಿ ಇಲಾಖೆ ವಸತಿ ವ್ಯವಸ್ಥೆ ಖಾಸಗೀಕರಣ.
  • ವನ್ಯಜೀವಿ ಮತ್ತು ಕರಾವಳಿ ಸಂಚಾರಕ್ಕೆ ಪ್ರೋತ್ಸಾಹ.
  • ಹಂಪಿಯ ಸಮಗ್ರ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಹಂಪಿ ಜಾಗತಿಕ ಪರಂಪರಾ ನಿರ್ವಹಣಾ ಪ್ರಾಧಿಕಾರ ಸ್ಥಾಪನೆ.
  • ಸರ್ಕಾರಿ ನೌಕರರಿಗೆ ಇತರ ಕ್ಷೇತ್ರಗಳಲ್ಲೂ ಕೆಲಸ ಮಾಡಲು ಅವಕಾಶ.
  • ಕೃಷ್ಣಾ ನೀರು ನ್ಯಾಯಬದ್ಧ ಬಳಕೆಗೆ ಸರ್ಕಾರ ಬದ್ಧ.
  • ಮೌಲ್ಯವರ್ಧಿತ ತೆರಿಗೆ ಮುಂದಿನ ವರ್ಷದಿಂದ ಜಾರಿ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X