ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲಿ 10 ತಿಂಗಳು ಆಟ, ಕ್ರಿಕೆಟ್‌ಗೆ ಸುಸ್ತೋ ಸುಸ್ತು - ಕಪಿಲ್‌ದೇವ್‌

By Staff
|
Google Oneindia Kannada News

Kapil Devನ್ಯೂಯಾರ್ಕ್‌ : ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು , ಈ ಹೆಚ್ಚಳದಿಂದ ಕ್ರೀಡಾ ಗುಣಮಟ್ಟ ಕುಸಿಯುತ್ತಿದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಹಾಗೂ ವಿಶ್ವ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾದ ಕಪಿಲ್‌ದೇವ್‌ ವಿಷಾದಿಸಿದ್ದಾರೆ.

ವರ್ಷದಲ್ಲಿ 10 ತಿಂಗಳು ಆಟವಾಡುವುದು ಕ್ರಿಕೆಟ್‌ ಗುಣಮಟ್ಟಕ್ಕೆ ಮಾರಕವಾಗಿದೆ ಎಂದು ಬಣ್ಣಿಸಿದ ಕಪಿಲ್‌, ತಂಡವೊಂದು ವರ್ಷದಲ್ಲಿ 10 ಟೆಸ್ಟ್‌ ಹಾಗೂ 20 ಒಂದು ದಿನದ ಪಂದ್ಯಗಳನ್ನು ಆಡುವುದು ಒಳ್ಳೆಯದೆಂದು ಅಭಿಪ್ರಾಯಪಟ್ಟರು. ನ್ಯೂಯಾರ್ಕ್‌ನಲ್ಲಿ ಜರುಗಿದ ಜಾಗತಿಕ ಕ್ರೀಡಾ ಶ್ರೇಷ್ಠರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಗಾಯಾಳುಗಳಾಗಿರುವ ತಂಡದ ಉನ್ನತ ಆಟಗಾರರ ಅನುಪಸ್ಥಿತಿಯಲ್ಲಿ ಪಂದ್ಯಗಳು ಜರುಗುವುದು ಕೂಡ ಆಟದ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆಟದ ಗುಣಮಟ್ಟಕ್ಕಿಂತ ಹಣಕ್ಕೆ ಪ್ರಾಧಾನ್ಯ ಕೊಡುವ ವ್ಯವಸ್ಥಾಪಕರು ಹೆಚ್ಚೆಚ್ಚು ಪಂದ್ಯಗಳನ್ನು ಏರ್ಪಡಿಸುತ್ತಾರೆ ಎಂದು ಕಪಿಲ್‌ ಟೀಕಿಸಿದರು. ಕ್ರಿಕೆಟ್‌ ಆಟದಿಂದ ನಿವೃತ್ತಿಯ ನಂತರದ ದಿನಗಳನ್ನು ತಾವು ಸಂತೋಷದಿಂದ ಅನುಭವಿಸುತ್ತಿರುವುದಾಗಿ ಕಪಿಲ್‌ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X